ರಾಜೀನಾಮೆ ನೀಡಿ ಎಂಬ ವಿವಾದಾತ್ಮಕ ಪೋಸ್ಟ್; ಕೊನೆಗೂ ಸಿಜೆಐ ಸೂರ್ಯಕಾಂತ್​ರ ಕ್ಷಮೆ ಕೇಳಿದ ಕೇರಳ ಕಾಂಗ್ರೆಸ್ | Kerala Congress

ಅ. 12ರಂದು ಕಾನೂನು ಸುವ್ಯವಸ್ಥೆ ನಿಮ್ಮ ವ್ಯಾಪ್ತಿ ಅಲ್ಲ ಅಂದ್ರೆ ರಾಜೀನಾಮೆ ನೀಡಿ ಎಂಬ ವಿವಾದಾತ್ಮಕ ಪೋಸ್ಟ್​ಗೆ ಸಂಬಂಧಿಸಿದಂತೆ ಕೊನೆಗೂ ಕೇರಳ ಕಾಂಗ್ರೆಸ್​, ಮಂಗಳವಾರ(ಅ. 27) ಸಿಜೆಐ ಸೂರ್ಯಕಾಂತ್ ಅವರಿಗೆ ಬೇಷರತ್ತಾದ ಕ್ಷಮೆಯಾಚಿಸಿದೆ.
ಸಿಜೆಐ ಸೂರ್ಯಕಾಂತ್
ಸಿಜೆಐ ಸೂರ್ಯಕಾಂತ್
Published on: 

ನವದೆಹಲಿ: ಅ. 12ರಂದು ಕಾನೂನು ಸುವ್ಯವಸ್ಥೆ ನಿಮ್ಮ ವ್ಯಾಪ್ತಿ ಅಲ್ಲ ಅಂದ್ರೆ ರಾಜೀನಾಮೆ ನೀಡಿ ಎಂಬ ವಿವಾದಾತ್ಮಕ ಪೋಸ್ಟ್​ಗೆ ಸಂಬಂಧಿಸಿದಂತೆ ಕೊನೆಗೂ ಕೇರಳ ಕಾಂಗ್ರೆಸ್​, ಮಂಗಳವಾರ(ಅ. 27) ಸಿಜೆಐ ಸೂರ್ಯಕಾಂತ್ ಅವರಿಗೆ ಬೇಷರತ್ತಾದ ಕ್ಷಮೆಯಾಚಿಸಿದೆ.

ಪೋಸ್ಟ್ ಅನ್ನು ಅನುಮತಿಯಿಲ್ಲದೆ ಪ್ರಕಟಿಸಲಾಗಿದೆ ಎಂದು ಕೇರಳ ಕಾಂಗ್ರೆಸ್ ಘಟಕ ಹೇಳಿದ್ದು, ಅದಕ್ಕೆ ಕಾರಣರಾದ ವ್ಯಕ್ತಿ ವಿಜಯ್ ತೊಟ್ಟತಿಲ್ ಅವರನ್ನು ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದೆ.

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನ ಜಂಟಿ ಕಾರ್ಯದರ್ಶಿ ವಕೀಲ ಮನೀಶ್ ದುಬೆ ಅವರ ಕಾನೂನು ನೋಟಿಸ್​ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್, ಪೋಸ್ಟ್ ಮತ್ತು ಸಿಜೆಐ ವಿರುದ್ಧ ಬಳಸಿದ ಅಗೌರವದ ಭಾಷೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ತೊಟ್ಟತಿಲ್ ಅವರಿಗೆ ಸಾರ್ವಜನಿಕ ಕ್ಷಮೆಯಾಚಿಸಲು ನಿರ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

Also Read
ಗರ್ಭಿಣಿ ಪತ್ರಕರ್ತೆಯ ಮೇಲೆ ಹಲ್ಲೆ ಆರೋಪ: ರಾಹುಲ್ ಗಾಂಧಿಯ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್ | Rahul Gandhi
ಸಿಜೆಐ ಸೂರ್ಯಕಾಂತ್

ಕಾನೂನು ನೋಟಿಸ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ, ಕೆಪಿಸಿಸಿ ನಾಯಕತ್ವಕ್ಕೆ ಯಾವುದೇ ಪೂರ್ವ ಮಾಹಿತಿ ನೀಡದೆ, ಅವರ ಒಪ್ಪಿಗೆಯನ್ನು ಪಡೆಯದೆ ಅಥವಾ ಅವರೊಂದಿಗೆ ಸಮಾಲೋಚಿಸದೆ ತೋಟತ್ತಿಲ್ ಇದನ್ನು ಪ್ರಕಟಿಸಿದ್ದಾರೆ ಎಂದು ಜೋಸೆಫ್ ಪ್ರತಿಪಾದಿಸಿದ್ದಾರೆ.

ಸಿಜೆಐ ರಾಜೀನಾಮೆ ನೀಡಬೇಕೆಂಬ ಬೇಡಿಕೆಯನ್ನಾಗಲಿ ಅಥವಾ ಅವರ ಉತ್ತರಾಧಿಕಾರಿಯನ್ನು ಕಂಡುಕೊಳ್ಳುವ ಕುರಿತಾದ ಸಲಹೆಯನ್ನಾಗಲಿ ತಾವು ಅಥವಾ ಪಕ್ಷದ ನಾಯಕತ್ವವು ಅನುಮೋದಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತು ನಿಮ್ಮ ನೋಟಿಸ್​​ನಲ್ಲಿ ಉಲ್ಲೇಖಿಸಲಾದ ಹೇಳಿಕೆಗಳು ಕೆಪಿಸಿಸಿ ಅಥವಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನೀತಿಯನ್ನು, ಅವರ ಸುಚಿಂತಿತ ಅಭಿಪ್ರಾಯವನ್ನು ಅಥವಾ ಅಧಿಕೃತ ನಿಲುವನ್ನು ಪ್ರತಿನಿಧಿಸುವುದಿಲ್ಲ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net