ಶನಿವಾರ ಮುಂಜಾನೆ ಸೋನಮ್ ವಾಂಗ್ಚುಕ್ ಜಂತರ್ ಮಂತರ್‌ನಲ್ಲಿ ಇತರ ಪ್ರತಿಭಟನಾಕಾರರೊಂದಿಗೆ ಕುಳಿತಿದ್ದಾಗ, ದೆಹಲಿ ಪೊಲೀಸರು ಯಾವುದೇ ಮುನ್ಸೂಚನೆ ನೀಡದೆ ದಿಢೀರನೆ ಸ್ಥಳಕ್ಕೆ ಆಗಮಿಸಿದರು. ವಿಶೇಷವೆಂದರೆ, ಪೊಲೀಸರು ಯೂನಿಫಾರ್ಮ್ ಧರಿಸದೆ, ಸಿವಿಲಿಯನ್ ಡ್ರೆಸ್‌ನಲ್ಲಿ ಬಂದಿದ್ದರು. ಅವರಲ್ಲಿ ಹೆಚ್ಚಿನವರು ನೀಲಿ ಅಥವಾ ಬಿಳಿ ಬಣ್ಣದ ಶರ್ಟ್‌ಗಳನ್ನು ಧರಿಸಿದ್ದರೆ, ಇನ್ನು ಕೆಲವರು ಹಳದಿ, ಕಿತ್ತಳೆ ಅಥವಾ ಕಪ್ಪು ಬಣ್ಣದ ಟಿ-ಶರ್ಟ್‌ಗಳನ್ನು ಧರಿಸಿದ್ದರು.