ದೆಹಲಿಯಲ್ಲಿ ನಡೆದ AI ಇಂಪ್ಯಾಕ್ಟ್ ಶೃಂಗಸಭೆಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವಿವಾದವು ಮತ್ತಷ್ಟು ತೀವ್ರಗೊಂಡಿತು. ಓರಿಯನ್ ಎಂಬ ಹೆಸರಿನ, ಯುನಿಟ್ರೀ ಗೋ2 ರೋಬೋಟಿಕ್ ನಾಯಿಯನ್ನು, ಸ್ಥಳೀಯವಾಗಿಯೇ ನಿರ್ಮಿಸಿದ್ದೇವೆ ಮತ್ತು ಇದು ಮಕ್ಕಳ ಕಲಿಕೆಗೆ ಸಹಾಯ ಮಾಡುತ್ತಿದೆ ಎಂದು ಗಲ್ಗೋಟಿಯಾಸ್ ವಿವಿಯ ಅಧ್ಯಾಪಕರೊಬ್ಬರು ಹೇಳಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲಾಯಿತು.