ಶಾಲಾ ಕಾರ್ಯಕ್ರಮದಲ್ಲಿ ಖಡ್ಗ ಹಿಡಿದು 'ಸರ್ ತನ್ ಸೇ ಜುದಾ' ಹಾಡಿಗೆ ಮಕ್ಕಳ ಡ್ಯಾನ್ಸ್; ವಿಡಿಯೋ ವೈರಲ್ ಬೆನ್ನಲ್ಲೇ ಎಫ್​​​ಐಆರ್​​! Sar Tan Se Juda Viral Video

ವಿದ್ಯಾರ್ಥಿಗಳಿಂದ ಖಡ್ಗ ಹಿಡಿದು 'ಸರ್ ತನ್ ಸೇ ಜುದಾ' ಹಾಡಿಗೆ ನೃತ್ಯ
ವಿದ್ಯಾರ್ಥಿಗಳಿಂದ ಖಡ್ಗ ಹಿಡಿದು 'ಸರ್ ತನ್ ಸೇ ಜುದಾ' ಹಾಡಿಗೆ ನೃತ್ಯ
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಂದ ಖಡ್ಗ ಹಿಡಿದು 'ಸರ್ ತನ್ ಸೇ ಜುದಾ' ಹಾಡಿಗೆ ನೃತ್ಯ
  • ಮಹಾರಾಷ್ಟ್ರದ ಜಲ್ನಾದಲ್ಲಿ ಶಾಲೆಯಲ್ಲಿ ನಡೆದ ಘಟನೆ
  • ವಿಡಿಯೋ ವೈರಲ್ ಬೆನ್ನಲ್ಲೇ ಶಾಲಾ ಅಧ್ಯಕ್ಷರು, ಶಿಕ್ಷಕರ ವಿರುದ್ಧ ಎಫ್‌ಐಆರ್ ದಾಖಲು
ಪಾರ್ತೂರ್​: ಮಹಾರಾಷ್ಟ್ರದ ಜಲ್ನಾದಲ್ಲಿ ಶಾಲಾ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳು ಖಡ್ಗವನ್ನು ಜಳಪಿಸುತ್ತಾ, ಸರ್​ ತನ್​ ಸೇ ಜುಧಾ (Sar Tan Se Juda Viral Video) ಹಾಡಿಗೆ ನೃತ್ಯ ಪ್ರದರ್ಶನ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಈ ನೃತ್ಯವು ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳದಲ್ಲಿ ನಡೆದಿದ್ದು, ಇದರ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆದ ಬೆನ್ನಲ್ಲೆ ಪ್ರಕರಣ ದಾಖಲಾಗಿದೆ.

ಏನಿದು ವಿವಾದ?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿರುವ ವಿಡಿಯೋ ಜಲ್ನಾ ಜಿಲ್ಲೆಯ ಪಾರ್ತೂರ್​ನಲ್ಲಿರುವ ಖಾಸಗಿ ಶಾಲೆಯಲ್ಲಿ ನಡೆದ ಘಟನೆ ಎಂದು ತಿಳಿದು ಬಂದಿದೆ.
ಈ ನೃತ್ಯದ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ಜನರ ಆಕ್ರೋಶ ಭುಗಿಲೆದ್ದ ಪರಿಣಾಮ ಶಾಲೆಯ ಅಧ್ಯಕ್ಷ, ಶಿಕ್ಷಕರು ಮತ್ತು ಕಾರ್ಯಕ್ರಮದ ನಿರೂಪಕನ ಮೇಲೆ ಪಾರ್ತೂರ್​​ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಿದ್ದು, ಶಾಲೆಯ ಕಾರ್ಯಕ್ರಮದಲ್ಲಿ ಈ ಹಾಡಿಗೆ ಹಾಗೂ ನೃತ್ಯ ಪ್ರದರ್ಶನಕ್ಕೆ ಯಾರು? ಏಕೆ? ಅನುಮತಿ ನೀಡಿದರು ಎಂಬ ಕುರಿತು ವಿಚಾರಣೆ ನಡೆಯುತ್ತಿದೆ.

ಹೆಚ್ಚಿದ ಜನಾಕ್ರೋಶ!

ಈ ಸರ್​ ತನ್​ ಸೇ ಜುಧಾ ಹಾಡಿನ ವಿಡಿಯೋ ವೈರಲ್​ ಆಗುತ್ತಿದ್ದಂತೆ ಜನರ ಆಕ್ರೋಶ ಹೆಚ್ಚಾಗಿದೆ. ನಮ್ಮ ಮಕ್ಕಳು ಶಾಲೆಯಲ್ಲಿ ದೇಶಪ್ರೇಮವನ್ನು ಕಲಿಯಲು ಕಲಿಸಿದರೆ, ಇಲ್ಲಿ ಹೊಡಿ, ಕೊಲೆ ಮಾಡಿ ಎನ್ನುವುದನ್ನು ಪ್ರೋತ್ಸಾಹಿಸುತ್ತಿದ್ದಾರೆಂದು ಹೇಳುತ್ತಿದ್ದಾರೆ.
ಶಾಲಾ ಕಾರ್ಯಕ್ರಮದಲ್ಲಿ ಈ ಕೋಮು ವಿರೋಧಿ ಹಾಡನ್ನು ಹಾಕಿ, ನೃತ್ಯ ಮಾಡಲು ಅವಕಾಶ ನೀಡಿದ ಶಾಲೆಯನ್ನು ಮೊದಲು ಮುಚ್ಚಬೇಕು. ಈ ಶಾಲೆಗೆ ಯಾರು ನಿಮ್ಮ ಮಕ್ಕಳನ್ನು ಕಳುಹಿಸಬೇಡಿ ಎಂದು ಕೆಲವರು ಒತ್ತಾಯಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net