Man Marries Two Women : ಛತ್ತೀಸ್‌ಗಢದ ಕೊಂಡಗಾಂವ್ ಜಿಲ್ಲೆಯಲ್ಲಿ ನಡೆದ ವಿಚಿತ್ರ ವಿವಾಹವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ, ಇಬ್ಬರು ಯುವತಿಯರು ಒಂದೇ ದಿನ ಒಬ್ಬನೇ ವರನನ್ನು ಮದುವೆಯಾಗುವ ದೃಶ್ಯವನ್ನು ನಾವು ಸಿನಿಮಾಗಳಲ್ಲಿ ನೋಡುತ್ತೇವೆ. ಆದರೆ, ಹಿತೇಶ್ ಯಾದವ್ ಎಂಬ ಯುವಕ ಅದನ್ನು ನಿಜ ಜೀವನದಲ್ಲಿ ಮಾಡಿದ್ದಾನೆ. ಒಂದೇ ವೇದಿಕೆಯಲ್ಲಿ, ಇಬ್ಬರು ವಧುಗಳ ಕುತ್ತಿಗೆಗೆ ಹಿತೇಶ್ ಮೂರು ಗಂಟುಗಳನ್ನು ಹಾಕಿದ್ದಾನೆ. ಅಚ್ಚರಿಯ ಸಂಗತಿ ಏನೆಂದರೆ, ಆತನ ಮದುವೆಗೆ ಸಂಬಂಧಿಕರು ಮತ್ತು ಸ್ನೇಹಿತರು ಕೂಡ ಸಾಕ್ಷಿಯಾಗಿದ್ದಾರೆ. ಇದಿಷ್ಟೇ ಸಾಲದು ಎಂಬಂತೆ ಈ ವಿಚಿತ್ರ ವಿವಾಹವನ್ನು ವೀಕ್ಷಿಸಲು ಸುತ್ತಮುತ್ತಲಿನ ಹಳ್ಳಿಗಳ ಜನರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.