ಕೇರಳದ ಪ್ರಮುಖ ಪಟ್ಟಣವೊಂದರಲ್ಲಿ ಹೊಸದಾಗಿ ತೆರೆಯಲಾದ ಶಾಪಿಂಗ್ ಮಾಲ್ ಉದ್ಘಾಟನೆಗೆ ಹನಿ ರೋಸ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಹನಿ ರೋಸ್ ಬರ್ತಾರೆ ಅಂತಾ ಗೊತ್ತಾದ ಕೂಡಲೇ ಸಾವಿರಾರು ಅಭಿಮಾನಿಗಳು ಅವರನ್ನು ನೋಡಲು ಮತ್ತು ಸೆಲ್ಫಿ ತೆಗೆದುಕೊಳ್ಳಲು ಜಮಾಯಿಸಿದ್ದರು. ಮಾಲ್ ಆಡಳಿತ ಮಂಡಳಿ ಭಾರೀ ಭದ್ರತೆಯನ್ನು ಏರ್ಪಡಿಸಿದ್ದರೂ, ಅಭಿಮಾನಿಗಳ ನೂಕು ನುಗ್ಗಲನ್ನು ತಡೆಯುವುದು ಕಷ್ಟಕರವಾಗಿತ್ತು. ಉದ್ಘಾಟನೆಯನ್ನು ಮುಗಿಸಿ, ಹನಿ ರೋಸ್ ಹೊರಬರುತ್ತಿದ್ದಾಗ, ಕೆಲ ಯುವಕರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಧಾವಿಸಿದರು. ಹನಿ ರೋಸ್ ಕೂಡ ಅವರೊಂದಿಗೆ ತಾಳ್ಮೆಯಿಂದ ಮತ್ತು ನಗುವಿನೊಂದಿಗೆ ಫೋಟೋಗಳಿಗೆ ಪೋಸ್ ನೀಡಿದರು. ಆದರೆ, ಅದೇ ಸಮಯದಲ್ಲಿ, ವ್ಯಕ್ತಿಯೊಬ್ಬ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಹನಿ ರೋಸ್ ಹತ್ತಿರ ಬಂದು, ಅವರ ಸೊಂಟದ ಮೇಲೆ ಕೈಯಿಟ್ಟು ಅಸಭ್ಯವಾಗಿ ಮುಟ್ಟಿದನು.