ಯೂಟ್ಯೂಬ್​ ನೋಡಿ ಕಾರು ಓಡಿಸಿದೆ! ಸ್ಕೂಟರ್​ ಗುದ್ದಿ ಓರ್ವನ ಪ್ರಾಣವನ್ನೇ ಕಸಿದ ಜಡ್ಜ್​ ಪುತ್ರ ಖಾಕಿ ಮುಂದೆ ಹೇಳಿದ್ದಿಷ್ಟು | Cheranallur Accident

ಕೇವಲ ಯೂಟ್ಯೂಬ್ ವಿಡಿಯೋಗಳನ್ನು ನೋಡುವುದರ ಮೂಲಕವೇ ಒಬ್ಬ ವ್ಯಕ್ತಿ ವಾಹನ ಚಲಾಯಿಸಲು ಸಾಧ್ಯವಿಲ್ಲ. ಈತ ಈ ಹಿಂದೆಯೂ ವಾಹನ ಚಲಾಯಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
 Cheranallur Accident
ಯೂಟ್ಯೂಬ್​ ನೋಡಿ ಕಾರು ಓಡಿಸಿದೆ! ಸ್ಕೂಟರ್​ ಗುದ್ದಿ ಓರ್ವನ ಪ್ರಾಣವನ್ನೇ ಕಸಿದ ಜಡ್ಜ್​ ಪುತ್ರ ಖಾಕಿ ಮುಂದೆ ಹೇಳಿದ್ದಿಷ್ಟು | Cheranallur Accident
Published on: 

ಕೊಚ್ಚಿ: ಚೆರನಲ್ಲೂರು ರಸ್ತೆ ಅಪಘಾತ ಪ್ರಕರಣದಲ್ಲಿ ಸ್ಕೂಟರ್ ಸವಾರರೊಬ್ಬರ ಸಾವಿಗೆ ಕಾರಣನಾದ 17 ವರ್ಷದ ಆರೋಪಿಯ ತಂದೆಯನ್ನು ಇದೀಗ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದ ವಿವರಗಳ ಬಗ್ಗೆ ಪೊಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ. ವೇಗದಲ್ಲಿ ಬಂದು ಬೈಕ್​ ಸವಾರನಿಗೆ ಗುದ್ದಿದ ಕಾರಣ, ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಈ ಪ್ರಕರಣದ ಆರೋಪಿಯನ್ನು ಪ್ರಸ್ತುತ ನ್ಯಾಯಾಲಯಕ್ಕೆ ಒಪ್ಪಿಸಿರುವ ಪೊಲೀಸರಿಗೆ, ಆತನ ತಂದೆ ನ್ಯಾಯಾಧೀಶರು ಎಂಬ ವಿಚಾರವೂ ಗೊತ್ತಾಗಿದೆ. ತಾನು ಯೂಟ್ಯೂಬ್ ನೋಡಿ ಕಾರು ಚಲಾಯಿಸಲು ಕಲಿತೆ. ಮತ್ತು ತಂದೆಗೆ ತಿಳಿಯದಂತೆ ಕಾರನ್ನು ತೆಗೆದುಕೊಂಡು ಹೋಗಿದ್ದಾಗಿ ಬಾಲಕ ನೀಡಿದ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಬಾಲಕನ ಈ ಹೇಳಿಕೆಯನ್ನು ಸಂಪೂರ್ಣವಾಗಿ ನಂಬದ ಪೊಲೀಸರು, ಕೇವಲ ಯೂಟ್ಯೂಬ್ ವಿಡಿಯೋಗಳನ್ನು ನೋಡುವುದರ ಮೂಲಕವೇ ಒಬ್ಬ ವ್ಯಕ್ತಿ ವಾಹನ ಚಲಾಯಿಸಲು ಸಾಧ್ಯವಿಲ್ಲ. ಈತ ಈ ಹಿಂದೆಯೂ ವಾಹನ ಚಲಾಯಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಲ್ಲದೆ, 'ಪ್ರತಿ ಭಾನುವಾರ ಅಪ್ಪ ತಡವಾಗಿ ಎದ್ದೇಳುತ್ತಾರೆ' ಎಂದು ವಾಟ್ಸ್​ಆ್ಯಪ್​ ಮೆಸೇಜ್​ ಕಳುಹಿಸಿರುವ ಮಾಹಿತಿಯೂ ಖಾಕಿಗೆ ಲಭ್ಯವಾಗಿದೆ.

ಜಡ್ಜ್​ ತಂದೆಯ ಮಾತು

ತನ್ನ ಮಗ ವಾಹನ ತೆಗೆದುಕೊಂಡು ಹೋಗಿರುವ ಬಗ್ಗೆ ನನಗೆ ಮಾಹಿತಿಯೇ ಇಲ್ಲ ಎಂದು ಕೊಟ್ಟಿರುವ ಹೇಳಿಕೆಯನ್ನೂ ನಂಬದ ಪೊಲೀಸರು, ಇದೀಗ ಈ ಪ್ರಕರಣದ ತನಿಖೆಯನ್ನು ಜಿಲ್ಲಾ ಅಪರಾಧ ವಿಭಾಗ (District Crime Branch) ವಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಲು ತನಿಖಾ ತಂಡ ಚುರುಕಾಗಿದ್ದು, ಇದರ ಭಾಗವಾಗಿ ವಿವಿಧ ರೀತಿಯ ಪರಿಶೀಲನೆಗಳನ್ನು ನಡೆಸುತ್ತಿದೆ.

Also Read
ನನಗಷ್ಟು ತಾಳ್ಮೆ, ಸಮಯ... 'ರಾಮಾಯಣ' ಹಾಡು ಕಾಪಿ ಆರೋಪಗಳ ಬೆನ್ನಲ್ಲೇ ಎ.ಆರ್​. ರೆಹಮಾನ್ ಖಡಕ್​ ಉತ್ತರ ​| AR Rahman
 Cheranallur Accident

ಏನಿದು ಪ್ರಕರಣ?

ಎರ್ನಾಕುಲಂ ಜಿಲ್ಲೆಯ ಚೆರನಲ್ಲೂರಿನಲ್ಲಿ ಭಾನುವಾರ (ಅ.25) ನಸುಕಿನ ಜಾವ 3 ಗಂಟೆ ಸುಮಾರಿಗೆ ನಡೆದ ಈ ಅಪಘಾತವು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ನ್ಯಾಯಾಧೀಶರೊಬ್ಬರ 17 ವರ್ಷದ ಮಗ ಅತಿವೇಗವಾಗಿ ಚಲಾಯಿಸುತ್ತಿದ್ದ ಬೆಂಜ್ ಕಾರು, ಸ್ಕೂಟರ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಅಂಗಡಿ ಮಾಲೀಕರಾದ ಜಯಬಾಲಕೃಷ್ಣನ್ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆಲಸ ಮುಗಿಸಿ ಸ್ಕೂಟರ್‌ನಲ್ಲಿ ಮನೆಗೆ ವಾಪಾಸ್​ ಆಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸಂಪೂರ್ಣವಾಗಿ ಜಖಂಗೊಂಡಿದೆ. ಅಪಘಾತ ನಡೆದ ದಿನವೇ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದಿದ್ದು, ಅಪಘಾತಕ್ಕೆ ಕಾರಣವಾದ ಬೆಂಜ್ ಕಾರನ್ನೂ ವಶಪಡಿಸಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net