ನನಗಷ್ಟು ತಾಳ್ಮೆ, ಸಮಯ... 'ರಾಮಾಯಣ' ಹಾಡು ಕಾಪಿ ಆರೋಪಗಳ ಬೆನ್ನಲ್ಲೇ ಎ.ಆರ್​. ರೆಹಮಾನ್ ಖಡಕ್​ ಉತ್ತರ ​| AR Rahman

ಬಿಗ್ ಬಜೆಟ್ 'ರಾಮಾಯಣ' ಸಿನಿಮಾದ 'ಮಂಗಳ ರಂಗ್' ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಮತ್ತು ಟೀಕೆಗಳಿಗೆ ಗ್ರಾಸವಾಗಿದೆ.
 AR Rahman
ನನಗಷ್ಟು ತಾಳ್ಮೆ, ಸಮಯ... 'ರಾಮಾಯಣ' ಹಾಡು ಕಾಪಿ ಆರೋಪಗಳ ಬೆನ್ನಲ್ಲೇ ಎ.ಆರ್​. ರೆಹಮಾನ್ ಖಡಕ್​ ಉತ್ತರ ​| AR Rahman
Published on: 

ಮುಂಬೈ: ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಚಿತ್ರದ ಹಾಡೊಂದು ಇದೀಗ ಭಾರಿ ವಿವಾದಕ್ಕೆ ಗುರಿಯಾಗಿದೆ. ಭಾರತದ ಖ್ಯಾತ ಸಂಗೀತ ಮಾಂತ್ರಿಕ ಎ.ಆರ್​. ರೆಹಮಾನ್​ (AR Rahman) ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟ್ಯೂನ್​ ಕಾಪಿ ಆರೋಪ, ಟೀಕೆಗಳು ವ್ಯಾಪಕವಾಗಿ ಹರಿದುಬಂದ ಬೆನ್ನಲ್ಲೇ ಸ್ವತಃ ರೆಹಮಾನ್ ಅವರೇ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.​ ​

ಬಿಗ್ ಬಜೆಟ್ 'ರಾಮಾಯಣ' ಸಿನಿಮಾದ 'ಮಂಗಳ ರಂಗ್' ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಮತ್ತು ಟೀಕೆಗಳಿಗೆ ಗ್ರಾಸವಾಗಿದೆ. ಆಸ್ಕರ್ ವಿಜೇತ, ಖ್ಯಾತ ಮ್ಯೂಸಿಕ್​ ಡೈರೆಕ್ಟರ್​ ಎ.ಆರ್. ರೆಹಮಾನ್ ಅವರ ಸಂಗೀತ ಸಂಯೋಜನೆ ಮತ್ತು ಅರಿಜಿತ್ ಸಿಂಗ್ ಹಾಗೂ ಶ್ರೇಯಾ ಘೋಷಾಲ್ ಹಾಡಿರುವ ಹಾಡು ಈಗ ಕಾಪಿ ಎಂಬ ಆರೋಪಗಳು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮತ್ತೊಂದೆಡೆ, ಈ ಹಾಡು ರಾಮ ಮತ್ತು ಸೀತಾ ದೇವಿಯ ಪವಿತ್ರ ಪ್ರೀತಿ ಮತ್ತು ಅವರ ಪ್ರಯಾಣವನ್ನು ವೈಭವೀಕರಿಸುತ್ತದೆ. ಹೀಗಿದ್ದಮೇಲೆ, ಈ ಹಾಡಿಗೆ ಬಳಸಿರುವ ಸೂಫಿ ಕವ್ವಾಲಿ ಶೈಲಿಯ ಸಂಗೀತಕ್ಕೆ ನೆಟ್ಟಿಗರು ತೀವ್ರ ಸಿಟ್ಟಾಗಿದ್ದಾರೆ.

ರಾಮಾಯಣ ಹಾಡಿನಲ್ಲಿ ಸೂಫಿ ಕವ್ವಾಲಿ ಶೈಲಿಯ ಸಂಗೀತ ಬೇಕಿತ್ತಾ? ಇದನ್ಯಾಕೆ ಇಲ್ಲಿ ಬಳಸಿಕೊಂಡಿದ್ದೀರಾ ಎಂದು ಸಂಗೀತ ಮಾಂತ್ರಿಕನಿಗೆ ನೆಟ್ಟಿಗರು ಕ್ಲಾಸ್​ ತೆಗೆದುಕೊಂಡಿದ್ದಾರೆ. ಸೂಫಿ ಕವ್ವಾಲಿ ಭಕ್ತಿ ಮತ್ತು ಆಧ್ಯಾತ್ಮಿಕ ಭಾವನೆಗಳನ್ನು ಹೊಂದಿರುವ ಸಂಗೀತ ಪ್ರಕಾರವಾಗಿದೆ. ಈ ಸಾಂಗ್​ನಲ್ಲಿ ಬಳಸಿರುವ ಟ್ಯೂನ್‌ಗಳು ರಾಮಾಯಣದಂತಹ ಪವಿತ್ರ ಮಹಾಕಾವ್ಯಕ್ಕೆ ಸೂಕ್ತವಲ್ಲ ಎಂದು ಪೋಸ್ಟ್​, ಕಮೆಂಟ್​ಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಕೆಲವರು ಈ ಹಳೆಯ ಸಿನಿಮಾದ ಟ್ಯೂನ್​ಗಳನ್ನು ಸ್ಪೂಫ್ ಎಂದು ಟೀಕಿಸುತ್ತಿದ್ದಾರೆ. ಈ ಹಾಡಿಗೆ ಬರುತ್ತಿರುವ ಟೀಕೆ, ವ್ಯಂಗ್ಯಗಳ ಪೈಕಿ ಎ.ಆರ್. ರೆಹಮಾನ್ ಆಯ್ಕೆಯ ಬಗ್ಗೆಯೇ ಹೆಚ್ಚಿನ ಪ್ರಶ್ನೆಗಳು ಕೇಳಿಬಂದಿವೆ. ವಾಲ್ಮೀಕಿ ರಾಮಾಯಣದಲ್ಲಿ ಸೂಫಿ ಕವ್ವಾಲಿ ಬಾರಿಸಿರುವುದು ಬಾಲಿವುಡ್‌ನ ಮರೆವಿನ ಗುರುತಾ ಎಂದು ನೆಟ್ಟಿಗರೊಬ್ಬರು ಕಟುವಾಗಿ ಟೀಕಿಸಿದ್ದು, ಇಲ್ಲಿಯೂ ಹಳೆ ಟೆಂಪ್ಲೇಟ್‌ಗಳನ್ನು ನಕಲು ಮಾಡಲಾಗಿದೆ ಎಂದಿದ್ದಾರೆ.

ಟೀಕೆಗಳಿಗೆ ರೆಹಮಾನ್​ ಖಡಕ್ ತಿರುಗೇಟು

ಒಂದು ಮ್ಯೂಸಿಕ್​ ಅನ್ನು ಅಭ್ಯಾಸ ಮಾಡುವುದು ಮತ್ತು ಪ್ರಕ್ರಿಯೆಯು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಕಾಮೆಂಟ್‌ಗಳಿಗೆ ಗಮನ ಹರಿಸಲು ನನಗೆ ಅಷ್ಟು ತಾಳ್ಮೆ ಮತ್ತು ಸಮಯ ಎರಡೂ ಇಲ್ಲ. ನಾವು ತುಂಬ ಸಂಶೋಧನೆ ಮತ್ತು ವಿವಿಧ ಪ್ರಯೋಗಗಳನ್ನು ಮಾಡಿದ ನಂತರವೇ ಹಾಡನ್ನು ಪ್ರೇಕ್ಷಕರ ಮುಂದಿಡುತ್ತೇವೆ. ಹಾಗಾಗಿ ನಾನು ಆನ್‌ಲೈನ್ ಪ್ರತಿಕ್ರಿಯೆಯನ್ನು ಹುಡುಕುತ್ತಾ ಕೂರುವುದಿಲ್ಲ ಎಂದಿದ್ದಾರೆ.

Also Read
ಈ ಹೋಟೆಲ್​ನಲ್ಲಿ ನೀವು ಊಟ ಮಾಡಿದ್ರೆ ತಟ್ಟೆ ಜತೆ ಮನೆಗೆ ಹೋಗಬೇಕು! ಉಚಿತದ ಹಿಂದಿದೆ ಸಖತ್​ ಇಂಟ್ರೆಸ್ಟಿಂಗ್ ಸ್ಟೋರಿ | Restaurant
 AR Rahman

ನನ್ನ ಮಗ ಆಗಾಗ ಬಂದು ಹೇಳುತ್ತಿರುತ್ತಾನೆ. ಅಪ್ಪ, ನಿನ್ನೆ ನಿಮ್ಮನ್ನು ಟೀಕಿಸಿದ ಅದೇ ಜನರು, ಇಂದು ನಿಮಗೆ ಕ್ಷಮೆ ಕೇಳುತ್ತಿದ್ದಾರೆ ಅಂತ. ನಾನು ನನ್ನ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಪೂರ್ಣಗೊಳಿಸುತ್ತೇನೆ. ಪ್ರೇಕ್ಷಕರು ಈ ಸಂಗೀತವನ್ನು ಆನಂದಿಸುತ್ತಾರೆ ಎಂದು ಭಾವಿಸುತ್ತೇನೆ. ನನ್ನ ಮೂರು ದಶಕಗಳ ವೃತ್ತಿ ಜೀವನದಲ್ಲಿ ‘ರಾಮಾಯಣ’ದಂತಹ ಪೌರಾಣಿಕ ಸಿನಿಮಾ ಮಾಡುವ ಕೆಲಸ ವಿಶೇಷ ಜವಾಬ್ದಾರಿಯಾಗಿದೆ. ಮೊದಲ ಹತ್ತು ವರ್ಷಗಳ ನಂತರ, 'ರೋಜಾ' ಮತ್ತು 'ಬಾಂಬೆ' ಕಾಲದ ಸಂಗೀತವನ್ನು ಮತ್ತೆ ನೀಡಬೇಕೆಂದು ಅನೇಕರು ನನ್ನನ್ನು ಕೇಳಿದ್ದಾರೆ ಎಂದರು.

'ರಾಕ್‌ಸ್ಟಾರ್' ಅಥವಾ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರಗಳ ಹಳೆಯ ಸೂಪರ್​ ಹಿಟ್‌ಗಳನ್ನು ನಾನು ನಿಲ್ಲಿಸಲು ಸಾಧ್ಯವಿಲ್ಲ. ಒಬ್ಬ ಸಂಗೀತ ನಿರ್ದೇಶಕ ಹರಿಯುವ ನದಿಯಂತೆ ಹರಿಯಬೇಕು. ಈಗ ನಾನು ರಾಮಾಯಣದಂತಹ ಮಹಾಕಾವ್ಯಕ್ಕೆ ಐದು ಭಾಷೆಗಳಲ್ಲಿ ಹಾಡುಗಳನ್ನು ನೀಡುವ ಅವಕಾಶವನ್ನು ಪಡೆದಿರುವುದು ಖುಷಿ ತಂದಿದೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net