_1776878081581.webp?w=480&auto=format%2Ccompress&fit=max)
_1776878081581.webp?w=480&auto=format%2Ccompress&fit=max)
ಚಾರಧಾಮ್ ಯಾತ್ರೆಯ ಅವಧಿ ಆರು ತಿಂಗಳು. ಸಾಮಾನ್ಯವಾಗಿ ಅಕ್ಷಯತೃತೀಯದ ದಿನ ದೇವಾಲಯದ ಬಾಗಿಲು ತೆರೆದರೆ ಅದು ದೀಪಾವಳಿಯ ಬಲಿಪಾಡ್ಯಮಿ ತನಕ ತೆರೆದಿರುತ್ತದೆ (ಪ್ರಾಕೃತಿಕ ಸ್ಥಿತಿಯ ಅನಿವಾರ್ಯತೆಯನ್ನು ಹೊರತುಪಡಿಸಿ). ಚಳಿಗಾಲ ಕಾಲಿಡುತ್ತಿದ್ದಂತೆ ದೇವಾಲಯಗಳು ಮುಚ್ಚಲ್ಪಡುತ್ತವೆ. ಚಳಿಗಾಲದಲ್ಲಿ ಇವೆಲ್ಲ ಮಂಜುಗಡ್ಡೆಯಿಂದ ಆವರಿಸಿರುತ್ತವೆ. ನೀರ್ಗಲ್ಲ ಪ್ರದೇಶವಾಗಿ ಬದಲಾಗುತ್ತದೆ. ಆಗ ಚಾರ್ಧಾಮ್ನಲ್ಲಿರುವ ಜನರು ಜೋಷಿಮಠ್, ಉತ್ತರಕಾಶಿ ಅಥವಾ ರುದ್ರಪ್ರಯಾಗ್ ನಲ್ಲಿರುವ ತಮ್ಮ ಮನೆಗಳಿಗೆ ವಾಪಸಾಗುತ್ತಾರೆ. ನಾಲ್ಕೂ ಧಾಮಗಳಲ್ಲಿ ಚಟುವಟಿಕೆ ಸ್ತಬ್ಧವಾಗುತ್ತದೆ.
ಮಹಾನದಿ ಯಮುನೆಯ ಉಗಮಸ್ಥಾನವೇ ಯಮುನೋತ್ರಿ. ಸಮುದ್ರ ಮಟ್ಟದಿಂದ 10,708 ಅಡಿ ಎತ್ತರದಲ್ಲಿದೆ. ಸೂರ್ಯಪುತ್ರಿ, ಯಮನ ಸೋದರಿ ಯಮುನೆಗೊಂದು ದೇಗುಲವೂ ಇದೆ. ಯಮುನೋತ್ರಿಗೆ ಹೋಗಬೇಕಾದರೆ ಉತ್ತರಕಾಶಿಯಿಂದ ಪ್ರಯಾಣ ಮಾಡಬಹುದು. ಉತ್ತರಕಾಶಿಯಿಂದ ಹೊರಟರೆ 120 ಕಿ.ಮೀ. ಸಾಗಿದ ನಂತರ ಹನುಮಾನ್ ಚಟ್ಟಿ ಎಂಬ ಊರು ಸಿಗುತ್ತದೆ. ಇಲ್ಲಿಂದ 10 ಕಿ.ಮೀ. ದೂರ ಹೋದರೆ ‘ಜಾನಕಿಚಟ್ಟಿ’ ಸಿಗುವುದು. ಇಲ್ಲಿಂದ ಮುಂದೆ ಇರುವುದೇ ‘ಯಮುನೋತ್ರಿ’. ಇಲ್ಲಿ ಬಿಸಿನೀರಿನ ಬುಗ್ಗೆಯೂ ಇದೆ.
ಭಾರತದ ಜೀವನದಿ ಪವಿತ್ರ ಗಂಗೆಯ ಉಗಮ ಸ್ಥಾನವೇ ಗಂಗೋತ್ರಿ. ಇದು ಸಮುದ್ರ ಮಟ್ಟದಿಂದ 11,204 ಅಡಿ ಎತ್ತರದಲ್ಲಿದೆ. ಗಂಗೆಯ ದೇವಸ್ಥಾನವೂ ಇಲ್ಲಿದೆ. ಇಲ್ಲಿ ಇದಕ್ಕೆ ಭಾಗೀರಥಿ ಎಂದು ಕರೆಯುತ್ತಾರೆ. ಗಂಗೋತ್ರಿಗೆ ಹರಿದ್ವಾರ-ಋಷಿಕೇಶದ ಮೂಲಕ ಹೋಗಬೇಕು. ಹರಿದ್ವಾರದಿಂದ ಮಿನಿ ಬಸ್ಸು, ಜೀಪು, ಕಾರ
ಇಲ್ಲಿರುವುದು ಜ್ಯೋತಿರ್ಲಿಂಗ. ಗಂಗೋತ್ರಿ ಶ್ರೇಣಿಗೆ ಸೇರುವ ಇದು ಸಮುದ್ರಮಟ್ಟದಿಂದ 11,755 ಅಡಿ (ನಿಖರತೆಗಾಗಿ) ಎತ್ತರದಲ್ಲಿದೆ. ನೇರ ಬಸ್ ಸಂಪರ್ಕ ಇಲ್ಲ. ದೇವಸ್ಥಾನವಿರುವ ಪರ್ವತದಿಂದ 14 ಕಿ.ಮೀ. ಕೆಳಗೆ ಗೌರಿಕುಂಡ್ ಎಂಬ ಪ್ರದೇಶವಿದ್ದು, ಅಲ್ಲಿಂದ ಪರ್ವತದ ಕಡಿದಾದ ಕಾಲುದಾರಿಯಲ್ಲಿ ನಡೆದುಕೊಂಡು ಇಲ್ಲವೆ ಡೋಲಿ ಅಥವಾ ಕುದುರೆ ಮೇಲೆ ಸವಾರಿ ಮಾಡಿಕೊಂಡು ಹೋಗಬೇಕು. ಇಲ್ಲಿ ಆಮ್ಲಜನಕದ ಕೊರತೆ ಇರುತ್ತದೆ. ಸುತ್ತಲೂ ನಿರ್ಗಲ್ಲುಗಳಿಂದ ಆವರಿಸಿದ ಪರ್ವತಗಳು. ಈ ಮಂದಿರವು ಪ
ಸಮುದ್ರ ಮಟ್ಟದಿಂದ 10,800 ಅಡಿ ಎತ್ತರದಲ್ಲಿರುವ ಬದರಿಗೆ ನೇರ ಬಸ್ ಸಂಪರ್ಕ ಇದೆ. ಇಲ್ಲಿ ಬದರಿ ನಾರಾಯಣನ ದೇವಸ್ಥಾನವಿದೆ. ಚೀನಾ ಗಡಿಗೆ ಹತ್ತಿರವಿರುವ ಬದರಿಗೆ ಸಮೀಪದಲ್ಲಿರುವ ಮಾಣ ಗ್ರಾಮ ಭಾರತದ ಕೊನೆ ಗ್ರಾಮ. ಪ್ರಖ್ಯಾತ ವ್ಯಾಸ ಗುಹೆ ಇರುವುದೂ ಇಲ್ಲೇ. ಬದರಿನಾಥದಲ್ಲಿ ರಾತ್ರಿ ಆರತಿ ವಿಶೇಷ. ಇಲ್ಲಿ ನರ ಹಾಗೂ ನಾರಾಯಣ ಎಂಬ ಬೆಟ್ಟವಿದೆ. ಮುಖ್ಯವಾಗಿ
2026ರ ಯಾತ್ರೆಗೆ ಹಲವಾರು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಕೇದಾರನಾಥ, ಬದರಿನಾಥ ಮತ್ತು ಗಂಗೋತ್ರಿ ಕ್ಷೇತ್ರಗಳಲ್ಲಿ ಹಿಂದೂಯೇತರರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಯಮುನೋತ್ರಿಗೆ ಎಲ್ಲ ಧರ್ಮದ ಜನರು ಮುಕ್ತವಾಗಿ ಭೇಟಿ ನೀಡಬಹುದಾಗಿದೆ.
ದೇವಾಲಯದ ಆವರಣದೊಳಗೆ ಮೊಬೈಲ್ ಫೋನ್ ಮತ್ತು ಕ್ಯಾಮೆರಾಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಭಕ್ತರು ದೇವರ ದರ್ಶನ ಮತ್ತು ಆಧ್ಯಾತ್ಮಿಕ ಅನುಭವದಲ್ಲಿ ಸಂಪೂರ್ಣ ತಲ್ಲೀನರಾಗಲಿ ಎಂಬ ಉದ್ದೇಶದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ.
ಹಿಮಾಲಯದಲ್ಲಿರುವ ಚಾರ್ಧಾಮ್ಗೆ ತೆರಳಲು ಆರಂಭದ ಬಿಂದು ಹರಿದ್ವಾರ. ಇದು ಹೃಷಿಕೇಶ ಪರ್ವತದ ತಪ್ಪಲಿನಲ್ಲಿದೆ. ಇಲ್ಲಿಂದ ಬದರಿ ಅಥವಾ ಕೇದಾರನಾಥ ತಲುಪಲು ಅಗಲ ಕಿರಿದಾದ ರಸ್ತೆಯಲ್ಲಿ 12ರಿಂದ 14 ಗಂಟೆ ವಾಹನದಲ್ಲಿ ಪ್ರಯಾಣ ಮಾಡಬೇಕು. ಆಳವಾದ ಕಂದಕಗಳು, ಪ್ರಪಾತಗಳು ಭಯ ಹುಟ್ಟಿಸುವಂತಿರುತ್ತವೆ. ಈ ಚಾರ್ಧಾಮ್ ಯಾತ್ರೆಯಲ್ಲಿ ಶೈವ ಹಾಗೂ ವೈಷ್ಣವ ಸಂಪ್ರದಾಯಗಳ ಬೆಸುಗೆ ಇದೆ. ಹಿಮಾಲಯದಲ್ಲಿ ಚಾರಣ (ಯಾತ್ರೆ) ಮಾಡುವುದು ಒಂದು ಸಾಹಸದ ಕೆಲಸ
ಉತ್ತರಾಖಂಡ ಸರ್ಕಾರವು ನೋಂದಣಿಯನ್ನು ಕಡ್ಡಾಯಗೊಳಿಸಿದ್ದು, ಯಾತ್ರಿಕರು ಅಧಿಕೃತ ವೆಬ್ಸೈಟ್ (