ಗೋಧಿ ಹಿಟ್ಟು ರಫ್ತಿಗೆ ಕೇಂದ್ರ ಒಪ್ಪಿಗೆ

ಗೋಧಿ ಹಿಟ್ಟು ರಫ್ತಿಗೆ ಕೇಂದ್ರ ಒಪ್ಪಿಗೆ
ಗೋಧಿ ಹಿಟ್ಟು ರಫ್ತಿಗೆ ಕೇಂದ್ರ ಒಪ್ಪಿಗೆ
Published on
ನವದೆಹಲಿ: 5 ಲಕ್ಷ ಟನ್​ನಷ್ಟು ಗೋಧಿ ಹಿಟ್ಟು ಮತ್ತು ಸಂಬಂಧಿತ ಉತ್ಪನ್ನಗಳನ್ನು ರಫ್ತು ಮಾಡಲು ಕೇಂದ್ರ ಸರ್ಕಾರ ಸೋಮವಾರ ಅನುಮತಿ ನೀಡಿದೆ. 2022ರಲ್ಲಿ ಕೇಂದ್ರ ಸರ್ಕಾರ ಗೋಧಿ ಹಿಟ್ಟು ರಫ್ತನ್ನು ನಿರ್ಬಂಧಿಸಿತ್ತು. ಪ್ರಸ್ತುತ, ರಫ್ತು ಮೇಲಿನ ನಿರ್ಬಂಧಗಳನ್ನು ಭಾಗಶಃ ತೆಗೆದುಹಾಕಲಾಗಿದೆ. ‘ಗೋಧಿ ಹಿಟ್ಟು ಮತ್ತು ಸಂಬಂಧಿತ ಉತ್ಪನ್ನಗಳ ರಫ್ತು ನಿಷೇಧ ಮುಂದುವರಿಯುತ್ತದೆ. ಆದರೆ 5 ಲಕ್ಷ ಟನ್​ವರೆಗೆ ಗೋಧಿ ಹಿಟ್ಟು ಮತ್ತು ಸಂಬಂಧಿತ ಉತ್ಪನ್ನಗಳ ರಫ್ತಿಗೆ ಅನುಮತಿ ನೀಡಲಾಗಿದೆ’ ಎಂದು ವಿದೇಶ ವ್ಯಾಪಾರಗಳ ಮಹಾನಿರ್ದೇಶನಾಲಯ (ಡಿಜಿಎಫ್​ಟಿ) ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಈ ಉತ್ಪನ್ನಗಳನ್ನು ರಫ್ತು ಮಾಡುವ ರಫ್ತುದಾರರು ಡಿಜಿಎಫ್​ಟಿನಿಂದ ಅನುಮತಿ ಪಡೆಯಬೇಕಿರುತ್ತದೆ ಎಂದು ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net