ಚುನಾವಣಾ ರಾಜ್ಯಗಳಾದ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂಗೆ ಬಜೆಟ್​ನಲ್ಲಿ ಭರ್ಜರಿ ಕೊಡುಗೆ! Central Budget 2026

ಕೇಂದ್ರ ಬಜೆಟ್ 2026
ಕೇಂದ್ರ ಬಜೆಟ್ 2026
Published on

ಪ್ರಮುಖ ಮುಖ್ಯಾಂಶಗಳು

  • ಚುನಾವಣೆಗಳು ಎದುರಾಗುವ ರಾಜ್ಯಗಳಿಗೆ ಬಜೆಟ್​ನಲ್ಲಿ ಬಂಪರ್​ ಕೊಡಿಗೆಗಳು ಸಿಗುವುದು ಸಹಜ
  • ಇಂದು ಮಂಡನೆಯಾದ ಕೇಂದ್ರ ಬಜೆಟ್​ನಲ್ಲಿಯೂ ಈ ಮಾತು ನಿಜವಾಗಿದೆ
  • ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಅಸ್ಸಾಂ ರಾಜ್ಯಗಳಿಗೆ ಭರಪೂರ ಕೊಡುಗೆ
ನವದೆಹಲಿ: ಯಾವುದೇ ರಾಜ್ಯಗಳಲ್ಲಿ ಚುನಾವಣೆಗಳು ಎದುರಾಗುವ ಸಮಯದಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಂದ ಬಜೆಟ್ ( Central Budget 2026 )​ ಮಂಡನೆಯಾದರೆ, ಆಯಾ ರಾಜ್ಯಗಳಿಗೆ ಭರಪೂರ ಕೊಡುಗೆಗಳು ಸಿಗುತ್ತವೆ. ಇದು ವಾಸ್ತವ ಕೂಡ ಹೌದು. ಇದು ಹೊಸ ಪದ್ಧತಿಯೇನಲ್ಲ, ಇದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಈ ಮಾತು ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಇಂದು ಮಂಡನೆಯಾದ ಕೇಂದ್ರ ಬಜೆಟ್​ನಲ್ಲಿ ಚುನಾವಣಾ ರಾಜ್ಯಗಳಾದ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಅಸ್ಸಾಂ ರಾಜ್ಯಗಳಿಗೆ ಭರಪೂರ ಕೊಡುಗೆಗಳನ್ನು ಘೋಷಣೆ ಮಾಡಲಾಗಿದೆ.
ಕಳೆದ ವರ್ಷ ಅಂದರೆ, 2025ರ ಬಜೆಟ್​ ಮಂಡನೆ ವೇಳೆ ಬಿಹಾರ ರಾಜ್ಯದ ಮೇಲೆ ವಿಶೇಷ ಗಮನ ಹರಿಸಲಾಗಿತ್ತು. ಅದೇ ರೀತಿ, ಈ ಬಾರಿ ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ ಹಾಗೂ ಕೇರಳ ಮೇಲೆ ಕೇಂದ್ರಿಕರಿಸಲಾಗಿದೆ. ಮುಂಬರುವ ಏಪ್ರಿಲ್​ ತಿಂಗಳಲ್ಲಿ ಈ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು, ಜವಳಿ, ರಸ್ತೆ ಮತ್ತು ರೈಲು ಸೌಕರ್ಯ ಮತ್ತು ರೇರ್​ ಅರ್ಥ್​ ಮೈನಿಂಗ್​ ಕ್ಷೇತ್ರಗಳಲ್ಲಿ ಈ ರಾಜ್ಯಗಳಿಗೆ ಬಂಪರ್​ ಘೋಷಣೆ ಮಾಡಲಾಗಿದೆ. ಇದಿಷ್ಟೇ ಅಲ್ಲದೆ, ಪ್ರವಾಸೋದ್ಯಮ ಮತ್ತು ತೀರ್ಥಯಾತ್ರೆಗಳನ್ನು ಮುಂದಿಟ್ಟುಕೊಂಡು ವಿಶೇಷ ಕೊಡುಗೆಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಇಂದು ಘೋಷಣೆ ಮಾಡಿದ್ದಾರೆ. ಹಾಗಾದರೆ, ಯಾವ ರಾಜ್ಯಗಳಿಗೆ ಏನೆಲ್ಲ ಕೊಡುಗೆಗಳು ಸಿಕ್ಕಿವೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಪಶ್ವಿಮ ಬಂಗಾಳ

* ಪರಿಸರ ಸ್ನೇಹಿ ಸರಕು ಸಾಗಣೆಯನ್ನು ಉತ್ತೇಜಿಸಲು ಪೂರ್ವದ ಡಂಕುನಿಯಿಂದ ಪಶ್ಚಿಮದ ಸೂರತ್‌ವರೆಗೆ ಹೊಸ ಮೀಸಲಾದ ಸರಕು ಸಾಗಣೆ ಕಾರಿಡಾರ್ ನಿರ್ಮಾಣ.
* ಐದು ಪೂರ್ವೋದಯ ರಾಜ್ಯಗಳಲ್ಲಿ ಐದು ಪ್ರವಾಸೋದ್ಯಮ ತಾಣಗಳ ಸೃಷ್ಟಿ ಮತ್ತು 4,000 ಇ-ಬಸ್‌ಗಳಿಗೆ ಅವಕಾಶ ಕಲ್ಪಿಸಲಾಗುವುದು.
* ದುರ್ಗಾಪುರದಲ್ಲಿ ಉತ್ತಮ ಸಂಪರ್ಕ ಹೊಂದಿರುವ ಸಮಗ್ರ ಪೂರ್ವ ಕರಾವಳಿ ಕೈಗಾರಿಕಾ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸಲಾಗುವುದು.

ತಮಿಳುನಾಡು

* ಖನಿಜ ಸಮೃದ್ಧ ರಾಜ್ಯಗಳಾದ ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಿಗೆ ನಿರ್ಣಾಯಕ ಖನಿಜ ಸೌಲಭ್ಯಗಳನ್ನು ಸ್ಥಾಪಿಸಲು ಬೆಂಬಲ ನೀಡುವುದು.
* ನಗರಗಳ ನಡುವೆ ಬೆಳವಣಿಗೆಯ ಸಂಪರ್ಕ ಸೇತುವೆಯಾಗಿ ಏಳು ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು. ಮುಂಬೈನಿಂದ ಪುಣೆ, ಪುಣೆಯಿಂದ ಹೈದರಾಬಾದ್, ಹೈದರಾಬಾದ್​ನಿಂದ ಬೆಂಗಳೂರು, ಹೈದರಾಬಾದ್​ನಿಂದ ಚೆನ್ನೈ, ಚೆನ್ನೈನಿಂದ ಬೆಂಗಳೂರು, ದೆಹಲಿಯಿಂದ ವಾರಣಾಸಿ ಹಾಗೂ ವಾರಣಾಸಿಯಿಂದ ಸಿಲಿಗುರಿವರೆಗೆ ಹೈಸ್ಪೀಡ್​ ರೈಲು ಕಾರಿಡಾರ್​.
* ತಮಿಳುನಾಡು ಮತ್ತು ಆಂಧ್ರಪ್ರದೇಶದ ಗಡಿ ಪ್ರದೇಶಗಳಲ್ಲಿ ಪುಲಿಕಾಟ್ ಸರೋವರದಲ್ಲಿ ಪಕ್ಷಿ ವೀಕ್ಷಣೆಗಾಗಿ ಹಾದಿಗಳನ್ನು ಅಭಿವೃದ್ಧಿಪಡಿಸಲಾಗುವುದು.
* ದೇವಾಲಯಗಳ ಪಟ್ಟಣವಾದ ತಮಿಳುನಾಡು ಸೇರಿದಂತೆ ಟೈಯರ್ 2 ಮತ್ತು ಟೈಯರ್ 3 ನಗರಗಳಲ್ಲಿ ಮೂಲಸೌಕರ್ಯವನ್ನು ಬಲಪಡಿಸಲು ಮುಂದಿನ ಐದು ವರ್ಷಗಳಲ್ಲಿ 20,000 ಕೋಟಿ ರೂ.ಗಳ ಅನುದಾನ ಘೋಷಣೆ.

ಕೇರಳ

* ಖನಿಜ ಸಮೃದ್ಧ ರಾಜ್ಯಗಳಾದ ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಗೆ ನಿರ್ಣಾಯಕ ಖನಿಜ ಸೌಲಭ್ಯಗಳನ್ನು ಸ್ಥಾಪಿಸಲು ಬೆಂಬಲ ನೀಡಲು ಹಣಕಾಸು ಸಚಿವರು ಪ್ರಸ್ತಾಪಿಸಿದ್ದಾರೆ.
* ಆಮೆಗಳ ಗೂಡುಕಟ್ಟುವ ಸ್ಥಳಗಳು, ಆಮೆ ಹಾದಿಗಳನ್ನು ಅಭಿವೃದ್ಧಿಪಡಿಸಲಾಗುವುದು.

ಅಸ್ಸಾಂ

ದೇವಾಲಯಗಳ ಪಟ್ಟಣವಾದ ಅಸ್ಸಾಂ ಸೇರಿದಂತೆ ಟೈಯರ್ 2 ಮತ್ತು ಟೈಯರ್ 3 ನಗರಗಳಲ್ಲಿ ಮೂಲಸೌಕರ್ಯವನ್ನು ಬಲಪಡಿಸಲು ಮುಂದಿನ ಐದು ವರ್ಷಗಳಲ್ಲಿ 20,000 ಕೋಟಿ ರೂ.ಗಳ ವಿನಿಯೋಗ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net