ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾರನ್ನು ನಕಲಿ ಸಿಎಂ ಎಂದು ಕರೆದ ಖರ್ಗೆ, 2021 ರ ಚುನಾವಣೆಯಲ್ಲಿ ಬುಡಕಟ್ಟು ನಾಯಕ ಸರ್ಬಾನಂದ ಸೋನೋವಾಲ್ ನೇತೃತ್ವದಲ್ಲಿ ಬಿಜೆಪಿ ಸ್ಪರ್ಧಿಸಿದ್ದರೂ, ಶರ್ಮಾ ಅಧಿಕಾರಕ್ಕಾಗಿ ಸೋನೋವಾಲ್ರನ್ನು ಕಡೆಗಣಿಸಿದ್ದಾರೆ ಎಂದು ದೂರಿದರು. ಶರ್ಮಾ ಸರ್ಕಾರ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ ಅಧ್ಯಕ್ಷರು, ಈ ಚುನಾವಣೆಯಲ್ಲಿ ಅಸ್ಸಾಂ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.