ಜಮುಯಿಯಲ್ಲಿ ಅಪ್ರಾಪ್ತರಿಗೆ ಕಿರುಕುಳ ಪ್ರಕರಣ: ಮೂವರ ಬಂಧನ: ತನಿಖೆಗೆ ಎಸ್​ಐಟಿ ರಚಿಸಿದ ಬಿಹಾರ ಸರ್ಕಾರ | Jamui

ಬಿಹಾರದ ಜಮುಯಿ ಜಿಲ್ಲೆಯಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳಿಗೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಂಕಿತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಘಟನೆಯ ಬಗ್ಗೆ ಕೂಲಂಕೂಷ ತನಿಖೆಗೆಎಸ್​ಐಟಿ ರಚನೆ ಮಾಡಿ ಬಿಹಾರ ಸರ್ಕಾರ ಆದೇಶ ಹೊರಡಿಸಿದೆ.
Bihar Government
ಸಾಂದಾರ್ಭಿಕ ಚಿತ್ರ
Published on

ಪಾಟ್ನಾ: ಬಿಹಾರದ ಜಮುಯಿ ಜಿಲ್ಲೆಯಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳಿಗೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಂಕಿತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಘಟನೆಯ ಬಗ್ಗೆ ಕೂಲಂಕೂಷ ತನಿಖೆಗೆಎಸ್​ಐಟಿ ರಚನೆ ಮಾಡಿ ಬಿಹಾರ ಸರ್ಕಾರ ಆದೇಶ ಹೊರಡಿಸಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಜಮುಯಿ ಪಟ್ಟಣದ ನಿವಾಸಿಗಳಾದ 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಸೆ. 19ರಂದು ಶಾಲೆ ಮುಗಿದ ಬಳಿಕ ಮೋಟಾರ್ ಸೈಕಲ್‌ನಲ್ಲಿ ಮಡ್ವಾ ಬೆಟ್ಟಕ್ಕೆ ಹೋಗಿದ್ದರು. ಹಿಂತಿರುಗುವಾಗ, ಕೆಲವು ಯುವಕರು ಅವರನ್ನು ದಾರಿಯಲ್ಲಿ ತಡೆದು ಸಾಕಷ್ಟು ಸಮಯದವರೆಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಕಿರುಕುಳದ ವೀಡಿಯೊವನ್ನು ಚಿತ್ರೀಕರಿಸಲಾಗಿದೆ. ಮತ್ತು ಅದರಲ್ಲಿ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡುವುದಾಗಿ ಬಲಿಪಶುಗಳಿಗೆ ಬೆದರಿಕೆ ಹಾಕಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ವೀಡಿಯೊಗಳನ್ನು ಆಧಾರಿಸಿ ಸ್ವಯಂಪ್ರೇರಿತವಾಗಿ ಪೋಕ್ಸೊ ಕಾಯ್ದೆ ಮತ್ತು ಬಿಎನ್‌ಎಸ್‌ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್​ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Also Read
ಅಮೆರಿಕದ ಸಾಂಪ್ರದಾಯಿಕ ಮಾಧ್ಯಮಗಳಿಗೆ ಸೆಡ್ಡು ಹೊಡೆದ ಡೊನಾಲ್ಡ್ ಟ್ರಂಪ್: ತನ್ನದೇ ಹೆಸರಿನ ಟ್ರಂಪ್ ಟಿವಿ 24/7 ಸ್ಟ್ರೀಮಿಂಗ್ ಆರಂಭ | Donald Trump
Bihar Government

ಈ ಕುರಿತು ಮಾತನಾಡಿರುವ ಜಮುಯಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನವೀನ್, ಸೆಪ್ಟೆಂಬರ್ 19ರ ಸಂಜೆ ಜಮುಯಿ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆರಂಭದಲ್ಲಿ ಪೊಲೀಸರಿಗೆ ಯಾವುದೇ ದೂರು ಬಂದಿರಲಿಲ್ಲವಾದರೂ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ ಆಧಾರದ ಮೇಲೆ ತನಿಖೆ ಆರಂಭಿಸಲಾಗಿದೆ. ಆರೋಪಿಗಳನ್ನು ಗುರುತಿಸಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಎಸ್‌ಪಿ ವಿಶ್ವಜಿತ್ ದಯಾಳ್ ಅವರು, ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ದೀಪ್ತಿ ಮೊನಾಲಿ ಅವರ ನೇತೃತ್ವದಲ್ಲಿ ಎಸ್‌ಐಟಿ (SIT) ರಚಿಸಲಾಗಿದೆ. ಜಮುಯಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಸಂತ್ರಸ್ತರು ಆರೋಪಿಗಳ ಹೆಸರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲವಾದರೂ, ಆ ವಿಡಿಯೋ ಕ್ಲಿಪ್‌ನ ಸಹಾಯದಿಂದ ನಾವು ಸುಮಾರು ಏಳು ಮಂದಿ ಅಪರಾಧಿಗಳನ್ನು ಗುರುತಿಸಿದ್ದೇವೆ. ಮೂವರನ್ನು ಬಂಧಿಸಲಾಗಿದೆ ಮತ್ತು ಉಳಿದವರನ್ನು ಸೆರೆಹಿಡಿಯಲು ಬಲೆ ಬೀಸಲಾಗಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net