ರೈಲು ಹಳಿಗಳ ಮೇಲೆ ಮಲಗಿದ ಖ್ಯಾತ ನಟ ಮನ್ಸೂರ್ ಅಲಿ ಖಾನ್: ಆತ ಕೊಟ್ಟ ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಿ! Mansoor Ali Khan
ರೈಲು ಹಳಿಗಳ ಮೇಲೆ ಮಲಗಿದ ಖ್ಯಾತ ನಟ ಮನ್ಸೂರ್ ಅಲಿ ಖಾನ್: ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಿ! Mansoor Ali Khan
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಯಾಗುವ ಕಾಲಿವುಡ್ ನಟ ಮನ್ಸೂರ್ ಅಲಿ ಖಾನ್
ಚುನಾವಣಾ ಪ್ರಚಾರದ ವೇಳೆ ರೈಲ್ವೆ ಹಳಿಗಳ ಮೇಲೆ ಮಲಗಿ ಮತ್ತೊಂದು ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ
ರೈಲು ಹಳಿಗಳನ್ನು ಅತಿಕ್ರಮಣ ಮಾಡಿಕೊಂಡಿದ್ದು, ಅನಗತ್ಯ ಗೊಂದಲ ಸೃಷ್ಟಿಸಿದ ಆರೋಪದ ಮೇಲೆ ಪ್ರಕರಣ ದಾಖಲು
ಚುನಾವಣಾ ಪ್ರಚಾರದ ಭಾಗವಾಗಿ ಕರುಣಾನಿಧಿ ಪ್ರತಿಭಟನೆಯನ್ನು ಮರುಸೃಷ್ಟಿಸಿದೆ ಎಂದ ಮನ್ಸೂರ್ ಅಲಿ ಖಾನ್
Mansoor Ali Khan : ಸದಾ ವಿವಾದಗಳಿಂದಲೇ ಸುದ್ದಿಯಾಗುವ ಕಾಲಿವುಡ್ ನಟ ಮನ್ಸೂರ್ ಅಲಿ ಖಾನ್, ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಚುನಾವಣಾ ಪ್ರಚಾರದ ವೇಳೆ ರೈಲ್ವೆ ಹಳಿಗಳ ಮೇಲೆ ಮಲಗಿದ್ದಕ್ಕಾಗಿ ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.
ರೈಲು ಹಳಿಗಳನ್ನು ಅತಿಕ್ರಮಣ ಮಾಡಿಕೊಂಡಿದ್ದು, ಅನಗತ್ಯ ಗೊಂದಲ ಸೃಷ್ಟಿ ಮಾಡಿದ್ದು ಮತ್ತು ಅಸಭ್ಯ ರೀತಿಯಲ್ಲಿ ವರ್ತಿಸಿದ ಆರೋಪದ ಮೇಲೆ ಮನ್ಸೂರ್ ಅಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅಂದಹಾಗೆ, ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಏಪ್ರಿಲ್ 23ರಂದು ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಹೊರಬೀಳಲಿದೆ. ಸದ್ಯ ರಾಜ್ಯದೆಲ್ಲೆಡೆ ಭರ್ಜರಿ ಪ್ರಚಾರ ನಡೆಯುತ್ತಿದೆ. ತಿರುಚಿರಾಪಳ್ಳಿ ಲಾಲ್ಗುಡಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಮನ್ಸೂರ್ ಅಲಿ ಖಾನ್, ತಮ್ಮ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಮಂಗಳವಾರ (ಮಾರ್ಚ್ 31) ಚುನಾವಣಾ ಪ್ರಚಾರದ ಸಮಯದಲ್ಲಿ ಲಾಲ್ಗುಡಿ ತಾಲೂಕಿನ ಕಲ್ಲಕುಡಿಯ ಪಟ್ಟಣದಲ್ಲಿ ಪಳಂಕನಾಥಂ ದೇವಸ್ಥಾನದ ಬಳಿ ಇರುವ ರೈಲ್ವೆ ಹಳಿಯಲ್ಲಿ ಮನ್ಸೂರ್ ಅಲಿ ಖಾನ್ ಮಲಗಿದರು. ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ಸಹ ವೈರಲ್ ಆಗುತ್ತಿವೆ. ರೈಲು ಹಳಿಗಳ ಮೇಲೆ ಮಲಗಿರುವುದನ್ನು ಗಮನಿಸಿದ ಪೊಲೀಸರು ತಕ್ಷಣ ಮನ್ಸೂರ್ ಅವರನ್ನು ಹಳಿಯಿಂದ ಹೊರಹಾಕಿದರು.
ಈ ಬಗ್ಗೆ ಮಾತನಾಡಿದ ಮನ್ಸೂರ್, 1953 ರಲ್ಲಿ, ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ಕಲ್ಲಕುಡಿಯಲ್ಲಿ ರೈಲ್ವೆ ಹಳಿಯಲ್ಲಿ ಮಲಗಿ ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿ ಪ್ರತಿಭಟಿಸಿದರು. ಚುನಾವಣಾ ಪ್ರಚಾರಕ್ಕಾಗಿ ಕಲ್ಲಕುಡಿಗೆ ಬಂದಾಗ, ಕರುಣಾನಿಧಿಯವರ ಪ್ರತಿಭಟನೆ ನನ್ನ ಮನಸ್ಸಿಗೆ ಬಂದಿತು ಮತ್ತು ಅದನ್ನು ಪ್ರಚಾರದ ಭಾಗವಾಗಿ ಮರುಸೃಷ್ಟಿಸಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಂದಹಾಗೆ, ಮನ್ಸೂರ್ ಅಲಿ ಖಾನ್ 'ಭಾರತ ಜನನಾಯಕ ಪುಲಿಕಲ್ ಕಾಕ್ಷಿ'ಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಈ ಪಕ್ಷವನ್ನು ಅವರೇ ರಚಿಸಿದ್ದಾರೆ. ಸೋಮವಾರ ಲಾಲ್ಗುಡಿಯಲ್ಲಿ ನಾಮಪತ್ರ ಸಲ್ಲಿಸಿದ ಮನ್ಸೂರ್ ಅಲಿ ಖಾನ್, ಆ ಪ್ರದೇಶದ ತಮ್ಮ ನಿವಾಸದಿಂದ ಪ್ರಚಾರ ನಡೆಸುತ್ತಿದ್ದಾರೆ.
ಅಂದಹಾಗೆ, ಮನ್ಸೂರ್ ಅಲಿ ಖಾನ್ ಅವರು ಕನ್ನಡಿಗರಿಗೂ ಪರಿಚಿತರು. ಬ್ಲಾಕ್ಬಸ್ಟರ್ ದಿಗ್ಗಜರು ಸಿನಿಮಾದಲ್ಲಿ ನಟಿಸಿ, ಕನ್ನಡಿಗರಿಗೆ ಪರಿಚಿತರಾಗಿದ್ದಾರೆ. ದಿಗ್ಗಜರು ಮಾತ್ರವಲ್ಲದೆ, ಬಾಸ್, ಯುವ ಶಕ್ತಿ, ಲೇಡಿ ಕಮಿಷನರ್ ಹಾಗೂ ಮಸ್ತಿ ಸಿನಿಮಾಗಳಲ್ಲಿ ನಟಿಸಿದ್ದಾರೆ, (ಏಜೆನ್ಸೀಸ್).