ಒಂದೆಡೆ ಎಸ್ಎಸ್ಎಲ್‌ಸಿ ಪರೀಕ್ಷೆಯ ಸಿದ್ಧತೆ ನಡೆಯುತ್ತಿದ್ದರೂ, ಜೆಸ್ಸಿ ಪ್ರತಿದಿನ ಶಾಲೆಯ ನಂತರ ತಪ್ಪದೇ ಆನ್‌ಲೈನ್ ತರಗತಿಗಳಿಗೆ ಹಾಜರಾಗಿ ಈಗಾಗಲೇ ಈ ತರಬೇತಿಯ ಶೇ. 50 ರಿಂದ 60 ರಷ್ಟು ಭಾಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಉಪಗ್ರಹ ವ್ಯವಸ್ಥೆಗಳು, ಪ್ರೊಪಲ್ಷನ್, ಥರ್ಮೋಡೈನಾಮಿಕ್ಸ್ ಮತ್ತು ಬಾಹ್ಯಾಕಾಶ ತಂತ್ರಜ್ಞಾನವನ್ನು ಒಳಗೊಂಡಿರುವ 'ಮಿಷನ್ ಶಕ್ತಿಸ್ಯಾಟ್'ನ 550ಕ್ಕೂ ಹೆಚ್ಚು ಸೆಷನ್‌ಗಳು ಮತ್ತು 21 ಮಾಡ್ಯೂಲ್‌ಗಳು ಶಾಲಾ ಪಠ್ಯಕ್ರಮಕ್ಕಿಂತ ಅತ್ಯಂತ ಕ್ಲಿಷ್ಟಕರವಾಗಿದ್ದರೂ, ತಾವು ಸತತ ಪ್ರಯತ್ನ ಹಾಗೂ ಆಸಕ್ತಿಯಿಂದ ಪ್ರತಿದಿನ ತರಗತಿಗಳಿಗೆ ಹಾಜರಾಗಿ ಇವುಗಳನ್ನು ಕರಗತ ಮಾಡಿಕೊಳ್ಳುತ್ತಿರುವುದಾಗಿ ಜೆಸ್ಸಿ ಸಂತಸದಿಂದ ಹಂಚಿಕೊಂಡಿದ್ದಾರೆ.