ಪ್ರತಿವರ್ಷದ ಆ ಸಂಪ್ರದಾಯ ಈ ಬಾರಿಯೂ ಕಂಟಿನ್ಯೂ! ಯೋಧರ ಜತೆ ದೀಪಾವಳಿ ಆಚರಿಸಲಿದ್ದಾರೆ ಪ್ರಧಾನಿ ಮೋದಿ... Narendra Modi

ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. ಬೆಳಕಿನ ಹಬ್ಬ ಪ್ರತಿಯೊಬ್ಬರ ಬದುಕಿನಲ್ಲೂ ಸಂತೋಷ, ನೆಮ್ಮದಿ, ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸಿದ್ದಾರೆ. ಈ ಬಾರಿ ಕೂಡ ಎಂದಿನ ಸಂಪ್ರದಾಯದಂತೆ ದೇಶದ ಗಡಿಗಳನ್ನು ಕಾಯುತ್ತಿರುವ ವೀರ ಯೋಧರೊಂದಿಗೆ ದೀಪಾವಳಿ ಆಚರಿಸುವುದಾಗಿ ತಿಳಿಸಿದ್ದಾರೆ.Narendra Modi
ಯೋಧರ ಜತೆ ದೀಪಾವಳಿ
ಯೋಧರ ಜತೆ ದೀಪಾವಳಿWEB
Published on: 

ನವದೆಹಲಿ: ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. ಬೆಳಕಿನ ಹಬ್ಬ ಪ್ರತಿಯೊಬ್ಬರ ಬದುಕಿನಲ್ಲೂ ಸಂತೋಷ, ನೆಮ್ಮದಿ, ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸಿದ್ದಾರೆ. ಈ ಬಾರಿ ಕೂಡ ಎಂದಿನ ಸಂಪ್ರದಾಯದಂತೆ ದೇಶದ ಗಡಿಗಳನ್ನು ಕಾಯುತ್ತಿರುವ ವೀರ ಯೋಧರೊಂದಿಗೆ ದೀಪಾವಳಿ ಆಚರಿಸುವುದಾಗಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ದೀಪಾವಳಿ ಶುಭಾಶಯ ಹಂಚಿಕೊಂಡಿರುವ ಪ್ರಧಾನಿ ಮೋದಿ, ಎಲ್ಲರಿಗೂ ದೀಪಾವಳಿಯ ಶುಭಾಶಯಗಳು. ದೇಶದಾದ್ಯಂತ ಇರುವ ನನ್ನ ಕುಟುಂಬದ ಸದಸ್ಯರಿಗೆ ಅನಂತ ದೀಪಾವಳಿ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ದೇಶದ ಪ್ರತಿಯೊಂದು ಮನೆ, ಬೀದಿ ಹಾಗೂ ಸಾರ್ವಜನಿಕ ಸ್ಥಳಗಳು ದೀಪಗಳ ಬೆಳಕಿನಿಂದ ಕಂಗೊಳಿಸುತ್ತಿರುವ ಈ ಸಂದರ್ಭದಲ್ಲಿ ಅವರ ಸಂದೇಶ ಜನರ ಗಮನ ಸೆಳೆದಿದೆ.

ಕತ್ತಲೆಯ ವಿರುದ್ಧ ಬೆಳಕಿನ ಸಂಕಲ್ಪದ ಸಂಕೇತ

ದೀಪಾವಳಿ ಕೇವಲ ದೀಪಗಳನ್ನು ಬೆಳಗಿಸುವ ಹಬ್ಬವಲ್ಲ, ಅದು ಕತ್ತಲೆಯ ವಿರುದ್ಧ ಬೆಳಕಿನ ಸಂಕಲ್ಪವನ್ನು ಸಾರುವ ಆಚರಣೆ ಎಂದು ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ. ದೇಶಾದ್ಯಂತ ಮನೆಗಳು, ದೇವಾಲಯಗಳು ಹಾಗೂ ಸಾರ್ವಜನಿಕ ಸ್ಥಳಗಳು ಮಣ್ಣಿನ ಹಣತೆ, ವಿದ್ಯುತ್ ದೀಪಗಳು ಮತ್ತು ಬಣ್ಣಬಣ್ಣದ ಅಲಂಕಾರಗಳಿಂದ ಕಂಗೊಳಿಸುತ್ತಿವೆ. ಇಂತಹ ಸಂಭ್ರಮದ ಸಂದರ್ಭದಲ್ಲಿ ಪ್ರತಿಯೊಬ್ಬರ ಜೀವನದಲ್ಲೂ ಸಂತೋಷ, ಆರೋಗ್ಯ, ನೆಮ್ಮದಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಅವರು ಹಾರೈಸಿದ್ದಾರೆ.

ಇದನ್ನೂ ಓದಿ : ಬಿಜೆಪಿಯ ಭೀಷ್ಮ ಎಲ್ ಕೆ ಆಡ್ವಾಣಿಗೆ 100ರ ಸಂಭ್ರಮ: ದೀರ್ಘಾಯುಷ್ಯಕ್ಕಾಗಿ ಪಕ್ಷದ ಕಚೇರಿಯಲ್ಲಿ ಹೋಮ-ಹವನ! | LK Advani

ನಿಮ್ಮೆಲ್ಲರಂತೆ ನಾನೂ ಕೂಡ ದೀಪಾವಳಿಯನ್ನು ಅತ್ಯಂತ ಉತ್ಸಾಹದಿಂದ ಆಚರಿಸುತ್ತೇನೆ. ಪ್ರತಿವರ್ಷದಂತೆ ಈ ವರ್ಷವೂ ನಮ್ಮ ಧೈರ್ಯಶಾಲಿ ರಕ್ಷಣಾ ಪಡೆಗಳ ಯೋಧರೊಂದಿಗೆ ದೀಪಾವಳಿ ಆಚರಿಸಲಿದ್ದೇನೆ’ ಎಂದು ಪ್ರಧಾನಿ ತಿಳಿಸಿದ್ದಾರೆ. ದೇಶದ ಗಡಿಗಳಲ್ಲಿ ಕುಟುಂಬದಿಂದ ದೂರವಿದ್ದು, ಹಗಲಿರುಳು ರಾಷ್ಟ್ರದ ಭದ್ರತೆಗಾಗಿ ಶ್ರಮಿಸುವ ಸೈನಿಕರ ಸೇವೆಯನ್ನು ಸ್ಮರಿಸುವುದರ ಜೊತೆಗೆ ಅವರೊಂದಿಗೆ ಹಬ್ಬ ಆಚರಿಸುವ ತಮ್ಮ ಸಂಪ್ರದಾಯವನ್ನು ಮುಂದುವರಿಸಲಿದ್ದಾರೆ.

ಉಪರಾಷ್ಟ್ರಪತಿಯನ್ನು ಭೇಟಿ ಮಾಡಿ ಶುಭಾಶಯ ವಿನಿಮಯ

ದೀಪಾವಳಿ ಹಬ್ಬದ ಮುನ್ನಾದಿನ ಪ್ರಧಾನಿ ನರೇಂದ್ರ ಮೋದಿ ಅವರು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರನ್ನು ಭೇಟಿಯಾಗಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ. ಈ ಕುರಿತು ಉಪರಾಷ್ಟ್ರಪತಿ ಕಚೇರಿ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಉಪರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ದೀಪಾವಳಿ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು ಎಂದು ತಿಳಿಸಿದೆ.

ದೀಪಾವಳಿ
ದೀಪಾವಳಿWEB

ದೇಶಾದ್ಯಂತ ಬೆಳಕಿನ ಹಬ್ಬದ ಸಂಭ್ರಮ

ಕಾರ್ತಿಕ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ನವೆಂಬರ್ 8ರಂದು ದೇಶದಾದ್ಯಂತ ದೀಪಾವಳಿ ಆಚರಿಸಲಾಗುತ್ತಿದೆ. ಮನೆಗಳು ಮತ್ತು ದೇವಾಲಯಗಳಲ್ಲಿ ಹಣತೆಗಳನ್ನು ಬೆಳಗಿಸಿ, ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಸಂಜೆ ವೇಳೆ ವಿಘ್ನನಿವಾರಕ ಗಣೇಶ ಮತ್ತು ಸಂಪತ್ತಿನ ಅಧಿದೇವತೆ ಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವುದು ಹಬ್ಬದ ಪ್ರಮುಖ ಸಂಪ್ರದಾಯವಾಗಿದೆ. ಸಿಹಿ ಹಂಚಿಕೆ, ಹೊಸ ಬಟ್ಟೆ ಧರಿಸುವುದು, ಬಂಧುಮಿತ್ರರೊಂದಿಗೆ ಸಂಭ್ರಮಿಸುವುದು ಹಾಗೂ ಪಟಾಕಿ ಸಿಡಿಸುವ ಮೂಲಕ ಜನರು ಹಬ್ಬವನ್ನು ಆಚರಿಸುತ್ತಿದ್ದಾರೆ. ವಿವಿಧ ಸಂಸ್ಕೃತಿ ಮತ್ತು ಸಂಪ್ರದಾಯಗಳ ಜನರನ್ನು ಒಂದೆಡೆ ಸೇರಿಸುವ ದೀಪಾವಳಿ ಹಬ್ಬವು ಬೆಳಕು, ಭರವಸೆ, ಸೌಹಾರ್ದತೆ ಮತ್ತು ಹೊಸ ಆರಂಭದ ಸಂದೇಶವನ್ನು ಸಾರುತ್ತದೆ.