SIR ಕಾರ್ಯಕ್ಕೆ ಅಡ್ಡಿ, ಬಂಗಾಳ ಸರ್ಕಾರಕ್ಕೆ ಸುಪ್ರೀಂ ತರಾಟೆ; 'ನನ್ನ ಕೈನಲ್ಲಿ ಆಡಳಿತವಿಲ್ಲ, ಎಲ್ಲ ಬಿಜೆಪಿ ಗೇಮ್‌ಪ್ಲಾನ್' ಎಂದ ಮಮತಾ ಬ್ಯಾನರ್ಜಿ.. Malda Violence

Mamata Banerjee on Malda Violence
Mamata Banerjee on Malda Violence
Published on

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಂಗ ಅಧಿಕಾರಿಗಳ ರಕ್ಷಣೆ ಮಾಡುವಲ್ಲಿ ಬಂಗಾಳ ಸರ್ಕಾರ ವಿಫಲ ಎಂದು ಸುಪ್ರೀಂ ಕೋರ್ಟ್ ಆಕ್ರೋಶ
  • ಮುತ್ತಿಗೆ ಹಾಕಿದವರು ಯಾರೆಂದು ಗೊತ್ತಿಲ್ಲ ಎಲ್ಲವೂ ಬಿಜೆಪಿ ಗೇಮ್​ ಪ್ಲ್ಯಾನ್​ ಎಂದ ಸಿಎಂ ಮಮತಾ ಬ್ಯಾನರ್ಜಿ
  • ಚುನಾವಣೆ ಲಾಭಕ್ಕಾಗಿ ಬಿಜೆಪಿ ಇಂತಹ ಕೃತ್ಯ ಎಸಗುತ್ತಿದೆ ಎಂದು ಮಮತಾ ಕಿಡಿ
ಕೋಲ್ಕತ್ತಾ: ನ್ಯಾಯಾಂಗ ಅಧಿಕಾರಿಗಳನ್ನು ಒತ್ತೆಯಾಳನ್ನಾಗಿ ಇರಿಸಿರುವ ಬಗ್ಗೆ ಮಾಹಿತಿಯೇ ಇಲ್ಲ.. ಇದರ ಹೊಣೆಗಾರರು ಯಾರು ಅನ್ನೋದು ಗೊತ್ತಿಲ್ಲ. ಇಂತದ್ದೆಲ್ಲ ಬಿಜೆಪಿಯವರ ಗೇಮ್​ ಪ್ಲ್ಯಾನ್​ (BJP Gameplan) ಎಂದು ಪಶ್ಚಿಮ ಬಂಗಾಳದ ಸಿಎಂ  ಮಮತಾ ಬ್ಯಾನರ್ಜಿ  
ಪಶ್ಚಿಮ ಬಂಗಾಳಧ ಮಾಲ್ಡಾದಲ್ಲಿ Special Intensive Revision (SIR) ಅಧಿಕಾರಿಗಳ ಕಾರಿಗೆ ಮುತ್ತಿಗೆ ಹಾಕಿ, ಏಳು ನ್ಯಾಯಾಂಗ ಅಧಿಕಾರಿಗಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡ ಘಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಛೀಮಾರಿ ಹಾಕಿತ್ತು. ಈ ಬೆನ್ನಲ್ಲೇ ಮಮತಾ ಬ್ಯಾನರ್ಜಿ  ಹೇಳಿಕೆ ಸದ್ಯ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಬ್ಯಾನರ್ಜಿ ಏನಂದ್ರು?

"​ಮಾಲ್ಡಾದಲ್ಲಿ ನ್ಯಾಯಾಂಗ ಅಧಿಕಾರಿಗಳಿದ್ದ ಕಚೇರಿಗೆ ಮುತ್ತಿಗೆ ಹಾಕಿದ ಪ್ರಕರಣಕ್ಕೆ ಜವಾಬ್ದಾರರು ಯಾರೆಂದು ನನಗೆ ನಿಜಕ್ಕೂ ತಿಳಿದಿಲ್ಲ. ಈ ಬಗ್ಗೆ ಮಾಹಿತಿಯೇ ಇಲ್ಲ. ರಾಜ್ಯದ ಆಡಳಿತ ಈಗ ನಮ್ಮ ಕೈಯಲ್ಲಿಲ್ಲ. ಇದೆಲ್ಲ ಬಿಜೆಪಿಯ ಗೇಮ್​ ಪ್ಲ್ಯಾನ್"​ ಎಂದು  ಸ್ಫೋಟಕ ಹೇಳಿಕೆ ನೀಡಿದ್ದಾರೆ.
"​ಕೇಂದ್ರ ಗೃಹ ಸಚಿವ ಅಮಿತ್​ ಶಾ ಸೂಚನೆಯಂತೆ ಚುನಾವಣೆ ಆಯೋಗ ತನ್ನ ಕಾರ್ಯ ನಿರ್ವಹಿಸುತ್ತಿದೆ.ನನ್ನ ಕೈನಲ್ಲಿ ಆಡಳಿತವಿಲ್ಲ. ಚುನಾವಣಾ ಆಯೋಗ ಕಾನೂನು ಸುವ್ಯವಸ್ಥೆ ಕಾಪಾಡುತ್ತಿದೆ. ನನ್ನ ಅಧಿಕಾರವನ್ನು ಆಯೋಗಕ್ಕೆ ವರ್ಗಾಯಿಸಲಾಗಿದೆ. ಅಮಿತ್​ ಶಾ ಹೇಳಿದಂತೆ  ಅವರು ಕೇಳುತ್ತಾರೆ. ಇದು ರಾಜ್ಯದಲ್ಲಿ ಜಾರಿಯಲ್ಲಿರುವ ಸೂಪರ್ ರಾಷ್ಟ್ರಪತಿ ಆಳ್ವಿಕೆ"​ ಎಂದು ಲೇವಡಿ ಮಾಡಿದ್ದಾರೆ.

ಮಾಲ್ಡಾದಲ್ಲಿ ಆಗಿದ್ದೇನು?

SIR ವೇಳೆ ಮತದಾರರ ಪಟ್ಟಿಯಿಂದ ಹೆಸರು ಅಳಿಸಿದ್ದನ್ನು ವಿರೋಧಿಸಿ, ಮಾಲ್ಡಾದ ಕಾಲಿಯಾಚಕ್ II ಬ್ಲಾಕ್ ಅಭಿವೃದ್ಧಿ ಕಚೇರಿಗೆ ಬುಧವಾರ ಮುತ್ತಿಗೆ ಹಾಕಲಾಗಿತ್ತು. ನ್ಯಾಯಾಂಗ ಅಧಿಕಾರಿಗಳ ಜೊತೆಗೆ ಮಾತುಕತೆ ಸಭೆಗೆ ಹೋರಾಟಗಾರರು ಅನುಮತಿ ಕೇಳಿದರು. ಇದಕ್ಕೆ ನಿರಾಕರಿಸಿದ ಕಾರಣ  ಸಂಜೆ 4 ಗಂಟೆ ಸುಮಾರಿಗೆ ಕಚೇರಿ  ಮುತ್ತಿಗೆ ಹಾಕಿ ಮೂವರು ಮಹಿಳೆಯರು ಸೇರಿದಂತೆ ಏಳು ನ್ಯಾಯಾಂಗ ಅಧಿಕಾರಿಗಳನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು
 ಒತ್ತೆಯಾಳನ್ನಾಗಿಸಿದ ಒಂಬತ್ತು ಗಂಟೆಗಳ ನಂತರ,  ನಸುಕಿನ ಮುಂಜಾನೆ 1 ಗಂಟೆ ಸುಮಾರಿಗೆ ಪೊಲೀಸರು ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸಿದರು. ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಸಮಯದಲ್ಲಿ ಪ್ರತಿಭಟನಾಕಾರರು ಪೊಲೀಸ್ ವ್ಯಾನ್ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಬಗ್ಗೆ ಸುಪ್ರೀಂ ಕೋರ್ಟ್​ ಕಿಡಿಕಾರಿತು. (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net