ಇನ್ನೊಂದೆಡೆ ಬಿಜೆಪಿಯ ಎಸ್‌ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಬಲಬೀರ್ ಘುನಿಯಾಲ್ ಮಾತನಾಡಿ, ಉತ್ತರಾಖಂಡದ ಜನರಿಗೆ ಖರ್ಗೆ ಅವರ ಜಾತಿಯೇ ತಿಳಿದಿಲ್ಲ, ಆದರೂ ರಾಹುಲ್ ಗಾಂಧಿ ಈ ವಿಚಾರಕ್ಕೆ ಜಾತೀಯ ಬಣ್ಣ ಬಳಿದು ಸಾಮಾಜಿಕ ಸೌಹಾರ್ದತೆ ಕದಡಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ರಾಜ್ಯಾದ್ಯಂತ ಸರಣಿ ಪ್ರತಿಭಟನೆ ನಡೆಸಿ ಅವರ ಪೋಸ್ಟರ್ ಹಾಗೂ ಪತ್ರಿಕೆಗಳನ್ನು ದಹಿಸುವುದಾಗಿ ತಿಳಿಸಿರುವ ಬಿಜೆಪಿ, ಮಂಗಳವಾರ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರಾಹುಲ್ ಗಾಂಧಿ ವಿರುದ್ಧ ಧರಣಿ ನಡೆಸಿ ಆಕ್ರೋಶ ಹೊರಹಾಕಿದೆ(ಏಜೆನ್ಸೀಸ್).