ದೇವರುಗಳ ಬಗ್ಗೆ ಅಪಮಾನಕರ ಹೇಳಿಕೆ; ವೇದಿಕೆ ಹಂಚಿಕೊಂಡು ಸಿಎಂ ರೇವಂತ್ ರೆಡ್ಡಿಯನ್ನು ಹೊಗಳಿದ ಬಿಜೆಪಿ ಶಾಸಕ & ಸಂಸದ | CM Revanth Reddy

ಸಿಎಂ ರೇವಂತ್ ರೆಡ್ಡಿ ಜೊತೆ ಬಿಜೆಪಿ ಶಾಸಕ ಮತ್ತು ಸಂಸದರು
ಸಿಎಂ ರೇವಂತ್ ರೆಡ್ಡಿ ಜೊತೆ ಬಿಜೆಪಿ ಶಾಸಕ ಮತ್ತು ಸಂಸದರು
Published on
ಹೈದರಾಬಾದ್: ಇತ್ತೀಚೆಗೆ ಹಿಂದೂ ಧರ್ಮದಲ್ಲಿ ಕುಡಕರಿಗೆ ಒಬ್ಬರು, ಇಬ್ಬರು ಪತ್ನಿಯರಿರುವವರಿಗೆ ಒಬ್ಬರು ದೇವರು ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಿಎ ರೇವಂತ್ ರೆಡ್ಡಿ(CM Revanth Reddy) ವಿರುದ್ದ ಬಿಜೆಪಿ ಮತ್ತು ಹಿಂದುತ್ವ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಅದರ ನಡುವೆ ಬಿಜೆಪಿ ಶಾಸಕ & ಸಂಸದ ಸಿಎಂ ಜೊತೆ ವೇದಿಕೆ ಹಂಚಿಕೊಂಡು, ಅವರನ್ನು ಹೊಗಳಿ ಅಚ್ಚರಿ ಮೂಡಿಸಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಎರಡು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಗುರುವಾರ ಆದಿಲಾಬಾದ್​ನಲ್ಲಿ ಆಯೋಜಿಸಿದ್ದ ಪ್ರಜಾ ಪಲಾನ ಆಚರಣೆಯಲ್ಲಿ ಆದಿಲಾಬಾದ್‌ನ ಇಬ್ಬರು ಪ್ರಮುಖ ಬಿಜೆಪಿ ನಾಯಕರಾದ ಶಾಸಕ ಪಾಯಲ್ ಶಂಕರ್ ಮತ್ತು ಸಂಸದ ಗೋಡಂ ನಾಗೇಶ್ ಭಾಗವಹಿಸಿ ಎಲ್ಲರನ್ನೂ ಹುಬ್ಬೇರಿಸಿದ್ದಾರೆ.
ಸಿಎಂ ಜೊತೆ ಶಾಸಕ ಪಾಯಲ್ ಶಂಕರ್ ಮತ್ತು ಆದಿಲಾಬಾದ್ ಸಂಸದ ನಾಗೇಶ್ ವೇದಿಕೆ ಹಂಚಿಕೊಂಡದ್ದಲ್ಲದೇ ಕ್ಷೇತ್ರದ ಅಭಿವೃದ್ಧಿಗೆ ಹಣವನ್ನು ಮಂಜೂರು ಮಾಡಿದ್ದಕ್ಕೆ ಅವರನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ.
ಈ ಕುರಿತು ಕಾರ್ಯಕ್ರಮದ ಬಳಿಕ ಮಾತನಾಡಿರುವ ಬಿಜೆಪಿ ಶಾಸಕ ಶಂಕರ್, ಸಿಎಂ ಕ್ಷೇತ್ರದ ಅಭಿವೃದ್ಧಿಗೆ ಹಣವನ್ನು ನೀಡಿದ್ದಾರೆ. ಸರ್ಕಾರಿ ಕಾರ್ಯಕ್ರಮಕ್ಕೆ ಹಾಜರಾಗುವುದರಲ್ಲಿ ಏನು ತಪ್ಪಿದೆ. ರಾಜ್ಯದ ಅಭಿವೃದ್ಧಿಗೆ ಹಣ ಪಡೆಯಲು ಸಿಎಂ ಮೋದಿಯನ್ನು ಭೇಟಿಯಾಗಿದ್ದಾರೆ. ಅದೇ ರೀತಿ ನಾವು ಆದಿಲಾಬಾದ್ ಅಭಿವೃದ್ಧಿಗಾಗಿ ಕೆಲಸ ಮಾಡ್ತಿದ್ದೇವೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net