ಖಾಸಗಿ ಸುದ್ದಿ ಚಾನಲ್ನ ಸಂದರ್ಶನದಲ್ಲಿ ಮಾತನಾಡಿರುವ ಅವರು, ಅಖಂಡ ಮಹಾರಾಷ್ಟ್ರ ಚಳುವಳಿಗೆ ಧುಮುಕಿದವರೇ ನಾವು, ಜನಸಂಘ ಆ ಬಳಿಕ ಸೇರಿಕೊಂಡಿತು. ಬಿಜೆಪಿ ಮಹಾರಾಷ್ಟ್ರದ ರಾಜಕೀಯ ಸಂಸ್ಕೃತಿಯನ್ನು ನಾಶಪಡಿಸುತ್ತಿದೆ. ಬಿಜೆಪಿ ಹಿಂದುತ್ವ ಪಕ್ಷವಲ್ಲ, ಅದು ಅಧಿಕಾರದ ಗೀಳಿನ ಪಕ್ಷ. ಅವರ ಡಿಎನ್ಎದಲ್ಲೇ ಅವಕಾಶವಾದ ಬೇರೂರಿದೆ. ಬಿಜೆಪಿಯವರು ಕೇವಲ ಸಂತರಂತೆ ನಟಿಸುತ್ತಾರೆ ಎಂದಿದ್ದಾರೆ.