ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ನಾನು ನೆಹರು ಅವರ ಅಭಿಮಾನಿ. ಅವರನ್ನು ಮೆಚ್ಚುತ್ತೇನೆ. ಅವರ ಬಗ್ಗೆ ನನಗೆ ತುಂಬಾ ಗೌರವವಿದೆ. ಆದರೆ, ನಾನು ಅವರ ಎಲ್ಲಾ ನಂಬಿಕೆಗಳು ಮತ್ತು ನೀತಿಗಳನ್ನು ಕುರುಡಾಗಿ ಬೆಂಬಲಿಸಲ್ಲ. ಆದರೆ ಅವರು ತೆಗೆದುಕೊಂಡ ಕೆಲವು ನಿರ್ಧಾರಗಳು ಶ್ಲಾಘನೀಯ. ವಿಶೇಷವಾಗಿ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಬಹಳ ದೃಢವಾಗಿ ಸ್ಥಾಪಿಸಿದರು ಎಂದು ಹೊಗಳಿದ್ದಾರೆ.