ದೀರ್ಘ 16 ತಿಂಗಳುಗಳ ಬಳಿಕ ನಡೆದ ಈ ಮಹತ್ವದ ಮೋದಿ-ಟ್ರಂಪ್ ದ್ವಿಪಕ್ಷೀಯ ಸಭೆಯಲ್ಲಿ, ಹೊರ್ಮುಜ್ ಜಲಸಂಧಿ ಸೇರಿದಂತೆ ಇಡೀ ಗಲ್ಫ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ನಾವಿಕರ ಭದ್ರತೆಯ ಬಗ್ಗೆ ಪ್ರಧಾನಿ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಇದೇ ವೇಳೆ ಪ್ರಧಾನಿಯವರ ರಾಜತಾಂತ್ರಿಕ ನಡೆಯನ್ನು ಮೆಚ್ಚಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೋದಿಯವರನ್ನು ಉತ್ತಮ ವ್ಯಕ್ತಿತ್ವದ ನಾಯಕ ಮತ್ತು ಕಠಿಣ ಸಂಧಾನಕಾರ ಎಂದು ಬಣ್ಣಿಸಿದ್ದರು. ಗಲ್ಫ್ ಪ್ರದೇಶದ ಪ್ರಸ್ತುತ ಉದ್ವಿಗ್ನ ಪರಿಸ್ಥಿತಿಯ ನಡುವೆ, ಅಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಭಾರತೀಯ ನಾವಿಕರ ಸುರಕ್ಷತೆಯೇ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಪ್ರಧಾನಿ ಮೋದಿ ಈ ಸಭೆಯಲ್ಲಿ ಒತ್ತಿಹೇಳಿದ್ದರು(ಏಜೆನ್ಸೀಸ್).