ರಾತ್ರಿ ಬಿರಿಯಾನಿ ಊಟ, ಮಧ್ಯರಾತ್ರಿ ಕಲ್ಲಂಗಡಿ ಹಣ್ಣು ತಿಂದು ಅಸ್ವಸ್ಥ; ಒಂದೇ ಕುಟುಂಬದ ನಾಲ್ವರು ಸಾವು | died

ಮೃತರು
ಮೃತರು
Published on
ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿ ಭಾನುವಾರ(ಏ. 26) ಒಂದೇ ದಿನ ಗಂಡ-ಹೆಂಡತಿ ಮತ್ತು ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳು ಮೃತಪಟ್ಟಿದ್ದು(died), ವಿಷ ಆಹಾರ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮುಂಬೈನ ಪೈಧುನಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶನಿವಾರ ರಾತ್ರಿ ಸಂಬಂಧಿಕರೊಂದಿಗೆ ಔತಣಕೂಟ ಏರ್ಪಡಿಸಿ ಬಿರಿಯಾನಿ ಊಟ ಸೇವಿಸಿದ್ದು, ಮಧ್ಯರಾತ್ರಿ ಕಲ್ಲಂಗಡಿ ಹಣ್ಣು ತಿಂದಿದ್ದಾರೆ. ಭಾನುವಾರ ಮುಂಜಾನೆ ನಾಲ್ವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಾಲ್ವರು ಅಸುನೀಗಿದ್ದಾರೆ.
ಮೃತರನ್ನು 40 ವರ್ಷದ ಅಬ್ದುಲ್ಲಾ ದೋಕಾಡಿಯಾ ಅವರು ತಮ್ಮ ಪತ್ನಿ 35 ವರ್ಷದ ನಸ್ರೀನ್ ಮತ್ತು ಇಬ್ಬರು ಹೆಣ್ಣುಮಕ್ಕಳಾದ 16 ವರ್ಷದ ಆಯೇಷಾ ಮತ್ತು 13 ವರ್ಷದ ಜೈನಾಬ್ ಎಂದು ಗುರುತಿಸಲಾಗಿದೆ. ಪೊಲೀಸರು ನಾಲ್ವರ ಸಾವನ್ನು ಅನುಮಾನಸ್ಪದ ಪ್ರಕರಣ ದಾಖಲಿಸಿಕೊಂಡಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net