Bihar Cabinet | ಮುಂದಿನ ತಿಂಗಳು ಬಿಹಾರ ಸಚಿವ ಸಂಪುಟ ಪುನಾರಚನೆ ಸಾಧ್ಯತೆ; ಈ ಪಕ್ಷಕ್ಕೆ ಸಿಂಹಪಾಲು!

Bihar Cabinet | ಮುಖ್ಯಮಂತ್ರಿ ನಿತೀಶ್ ಕುಮಾರ್
Bihar Cabinet | ಮುಖ್ಯಮಂತ್ರಿ ನಿತೀಶ್ ಕುಮಾರ್
Published on
ಪಟನಾ: ಬಿಹಾರದಲ್ಲಿ ಸಚಿವ ಸಂಪುಟವನ್ನು ಮುಂದಿನ ತಿಂಗಳು ಪುನಾರಚಿಸುವ ನಿರೀಕ್ಷೆ ಇದ್ದು, ಖಾಲಿ ಇರುವ ಒಂಬತ್ತು ಸಚಿವ ಸ್ಥಾನಗಳನ್ನು ಭರ್ತಿ ಮಾಡುವ ಸಾಧ್ಯತೆ ಇದೆ.
ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಆರು, ಉಳಿದ ಮೂರು ಸ್ಥಾನಗಳನ್ನು ಬಿಜೆಪಿ ಪಡೆಯುವ ಸಾಧ್ಯತೆ ಇದೆ. ಮಂತ್ರಿ ಮಂಡಲಕ್ಕೆ ಶಾಸಕರನ್ನು ಪರಿಗಣಿಸುವಾಗ ಜಾತಿ ಸಮೀಕರಣವು ಪ್ರಮುಖ ಪಾತ್ರ ವಹಿಸಲಿದ್ದು, ಜೆಡಿಯು ಹೊಸ ಮುಖಗಳಿಗೆ, ಅದರಲ್ಲೂ ಅತ್ಯಂತ ಹಿಂದುಳಿದ ವರ್ಗಗಳನ್ನು ಆದ್ಯತೆ ನೀಡಬಹುದು ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಸಂಪುಟದಲ್ಲಿ ಬಿಜೆಪಿಯ 17, ಜೆಡಿಯುನ 15 (ಮುಖ್ಯಮಂತ್ರಿ ಸೇರಿದಂತೆ), ಚಿರಾಗ್​ ಪಾಸ್ವಾನ್​ರ ಲೋಕ ಜನಶಕ್ತಿ ಪಕ್ಷದಿಂದ ಇಬ್ಬರು, ಹಿಂದೂಸ್ತಾನ್ ಅವಾಮ್ ಮೋರ್ಚಾದಿಂದ ಒಬ್ಬರು ಮತ್ತು ರಾಷ್ಟ್ರೀಯ ಲೋಕ ಸಮತಾ ಪಕ್ಷ ಒಬ್ಬರು ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯುದ ಬಿಜೇಂದ್ರ ಪ್ರಸಾದ್ ಯಾದವ್ ಆರು, ವಿಜಯ್ ಚೌಧರಿ ನಾಲ್ಕು, ಶ್ರವಣ್ ಕುಮಾರ್​ ಮತ್ತು ಸುನಿಲ್ ಕುಮಾರ್ ಎರಡು ಖಾತೆಗಳನ್ನು ನಿಭಾಯಿಸುತ್ತಿದ್ದಾರೆ. ಇತ್ತ ಮಿತ್ರಪಕ್ಷ ಬಿಜೆಪಿಯಲ್ಲಿ, ಸಾಮ್ರಾಟ್ ಚೌಧರಿ ಗೃಹ ಸಚಿವಾಲಯ ಮತ್ತು ಉಪಮುಖ್ಯಮಂತ್ರಿ ಸ್ಥಾನವನ್ನು ಹೊಂದಿದ್ದಾರೆ. ವಿಜಯ್ ಸಿಂಗ್, ಮಂಗಲ್ ಪಾಂಡೆ, ನಿತಿನ್ ನವೀನ್ ಮತ್ತು ಅರುಣ್ ಶಂಕರ್ ಸೇರಿದಂತೆ ಕೆಲ ನಾಯಕರು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿದ್ದಾರೆ. ಪುನಾರಚನೆ ಸಂದರ್ಭದಲ್ಲಿ ಕೆಲವು ಜವಾಬ್ದಾರಿಗಳು ನೂತನ ಸಚಿವರ ಹೆಗಲೇರಬಹುದು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net