ಬಿಹಾರದ ಇತ್ತೀಚಿನ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಇತರ ಕಾರಣಗಳೊಂದಿಗೆ ನಾನು ಹೊಣೆಗಾರನಾಗಿದ್ದೇನೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿರುವುದಾಗಿ ವರದಿಯಾಗಿದೆ. ಬಿಹಾರ ಕಾಂಗ್ರೆಸ್ನ ಪರಾಜಿತ ಅಭ್ಯರ್ಥಿಗಳ ಸಭೆಯಲ್ಲಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದ್ದು, ಪಕ್ಷದ ಸೋಲಿಗೆ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯೂ ಒಂದು ಕಾರಣ ಎಂದು ಸ್ಥಳೀಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಹುಲ್, ಈ ಸೋಲಿನ ಬಗ್ಗೆ ಇನ್ನು ಆಲೋಚಿಸುವುದು ಬೇಡ, ಮುಂಬರುವ ಇತರ ವಿಧಾನಸಭಾ ಚುನಾವಣೆಗಳ ಕಡೆ ಗಮನ ನೀಡಿ ಎಂದಿದ್ದಾರೆ.