ಗ್ರಾಹಕರಿಗೆ 'ಟಿಪ್' ಆಮಿಷವೊಡ್ಡಿದ ಓಲಾಗೆ ಬಿಗ್ ಶಾಕ್: 10 ಲಕ್ಷ ರೂ. ದಂಡ ವಿಧಿಸಿ ಬಿಸಿ ಮುಟ್ಟಿಸಿದ ಕೇಂದ್ರ ಗ್ರಾಹಕ ಪ್ರಾಧಿಕಾರ! Ola Cabs

The Central Consumer Protection Authority has imposed a fine of Rs 10 lakh on Ola for misleading customers by prompting them to provide extra tips and make advance payments while booking cabs.
ಕ್ಯಾಬ್ ಬುಕಿಂಗ್ ವೇಳೆ ಹೆಚ್ಚುವರಿ ಟಿಪ್ ಮತ್ತು ಮುಂಗಡ ಪಾವತಿಗೆ ಪ್ರೇರೇಪಿಸಿ ಗ್ರಾಹಕರ ದಾರಿ ತಪ್ಪಿಸುತ್ತಿದ್ದ ಓಲಾ ಕಂಪನಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ 10 ಲಕ್ಷ ರೂ. ದಂಡ ವಿಧಿಸಿದೆ.
Published on: 

ನವದೆಹಲಿ: ಕ್ಯಾಬ್​ ಬುಕ್​ ಮಾಡುವಾಗ ಹೆಚ್ಚುವರಿ ಟಿಪ್​ ಅಥವಾ ಕೂಡಲೇ ಹಣ ಪಾವತಿಸಿದರೆ ಬೇಗ ರೈಡ್​ ಬುಕ್​ ಆಗುತ್ತದೆ ಎಂದು ಗ್ರಾಹಕರಿಗೆ ಪುಸಲಾಯಿಸುವುದನ್ನು ನೋಡಿರುತ್ತೇವೆ. ಆದರೆ, ಇದಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಓಲಾ ಕಂಪನಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ವು 10 ಲಕ್ಷ ರೂಪಾಯಿಗಳ ದಂಡ ವಿಧಿಸಿ ಆದೇಶಿಸಿದೆ.

ಹಣವನ್ನು ಹೆಚ್ಚು ನೀಡಿದರೆ, ಅಥವಾ ರೈಡ್ ಪೂರ್ಣಗೊಳ್ಳುವ ಮೊದಲೇ ಪಾವತಿ ಮಾಡುವುದು ತಪ್ಪುದಾರಿಗೆಳೆಯುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಸಿಸಿಪಿಎ ಇಂತಹ ವರ್ತನೆ ತೋರುತ್ತಿದ್ದ ಕಂಪನಿಗೆ ದಂಡ ವಿಧಿಸಿ ಬಿಸಿ ಮುಟ್ಟಿಸಿದೆ.

ಇದು ಮಾರ್ಗಸೂಚಿ ಉಲ್ಲಂಘನೆ!

ಟಿಪ್​ ಅಥವಾ ಹೆಚ್ಚುವರಿ ಹಣ ನೀಡುವುದು ಗ್ರಾಹಕರ ವೈಯಕ್ತಿಕ ನಿಲುವಾಗಿದೆ. ಆದರೆ, ಸೇವೆ ಪಡೆಯುವ ಮುನ್ನವೇ ಹೆಚ್ಚುವರಿ ಹಣ ನೀಡಿದರೆ ರೈಡ್​ ಬೇಗ ಕನ್ಫರ್ಮ್​ ಆಗುತ್ತದೆ, ಬೇಗ ನಿಗದಿತ ಸ್ಥಳವನ್ನು ತಲುಪುತ್ತೀರಿ, ರೈಡ್​ಗೂ ಮೊದಲೇ ಪಾವತಿ ಮಾಡಿದರೆ ಉತ್ತಮ ಎಂಬ ತಂತ್ರಾಂಶ ಅಥವಾ ಪಾಪ್​ಅಪ್​ಗಳನ್ನು ಬಳಸುವುದು ಮೋಟರ್​ ವಾಹನ ಅಗ್ರಿಮೆಂಟ್​ನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪ್ರಾಧಿಕಾರ ತನ್ನ ಆದೇಶದಲ್ಲಿ ತಿಳಿಸಿದೆ.

ಹೀಗಾಗಿ, ಮೊದಲ ಹಂತವಾಗಿ ನಿಮಗೆ ಈ ಮೊಲದೇ ಎಚ್ಚರಿಕೆ ನೀಡಲಾಗಿತ್ತು, ಆದರೆ ಅದನ್ನು ನೀವು ಕೇಳಿಸಿಕೊಳ್ಳಲಿಲ್ಲ. ಹೀಗಾಗಿ ಈಗ ದಂಡ ವಿಧಿಸಿದ್ದೇವೆ. ಈಗಲೂ ನಿಮ್ಮ ಈ ಅನ್ಯಾಯದ ಕ್ರಮ ಮುಂದುವರಿದರೆ ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳಲಾಗುವುದೆಂದು ಪ್ರಾಧಿಕಾರ ಓಲಾ ಕಂಪನಿಗೆ ಎಚ್ಚರಿಕೆ ನೀಡಿದೆ. ಅಂತಯೇ, ಕೂಡಲೇ ಇದನ್ನು ಅಪ್ಲಿಕೇಶನ್​ನಿಂದ ತೆಗೆದು ಹಾಕಬೇಕಾಗಿ ಸೂಚಿಸಿದೆ.

Also Read
'ತಂತ್ರಜ್ಞಾನ ದಿಗ್ಗಜನಾಗಿ ಬೆಳೆದಿದ್ದು ಸ್ವಂತ ಬಲದಿಂದ, ಕಳ್ಳತನದಿಂದಲ್ಲ': ಅಮೆರಿಕದ ಗೂಢಚರ್ಯೆ ಆರೋಪಕ್ಕೆ ಚೀನಾ ಕೌಂಟರ್! Nvidia
The Central Consumer Protection Authority has imposed a fine of Rs 10 lakh on Ola for misleading customers by prompting them to provide extra tips and make advance payments while booking cabs.

ಆದೇಶ ಸ್ವಾಗತಿಸಿದ ಜೋಶಿ!

ಇನ್ನು ಓಲಾ ಕಂಪನಿ ವಿರುದ್ಧ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ವಿಧಿಸಿರುವ 10 ಲಕ್ಷ ರೂಪಾಯಿ ದಂಡವನ್ನು ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ ಜೋಶಿ ಸ್ವಾಗತಿಸಿ ಟ್ವೀಟ್ ಮಾಡಿದ್ದಾರೆ.

"ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು (CCPA), ಓಲಾ ಸಂಸ್ಥೆಯ ರೈಡ್‌ಗೆ ಮುನ್ನವೇ ಪಾವತಿ ಮಾಡುವಂತೆ ಗ್ರಾಹಕರನ್ನು ದಾರಿ ತಪ್ಪಿಸುವ ಸೂಚನೆಗಳನ್ನು ನೀಡಿದ್ದಕ್ಕಾಗಿ, ಓಲಾ ಸಂಸ್ಥೆಗೆ 10 ಲಕ್ಷ ದಂಡ ವಿಧಿಸಿದೆ ಮತ್ತು ಈ ವ್ಯವಸ್ಥೆಯನ್ನು ತಕ್ಷಣವೇ ನಿಲ್ಲಿಸುವಂತೆ ಆದೇಶಿಸಿದೆ. 'ಡಾರ್ಕ್ ಪ್ಯಾಟರ್ನ್‌ಗಳು', ಅನಗತ್ಯ ಹಾಗೂ ಅನ್ಯಾಯದ ಪದ್ಧತಿಗಳು ಮತ್ತು ದಾರಿ ತಪ್ಪಿಸುವ ಕ್ರಮಗಳ ವಿರುದ್ಧ ಕೈಗೊಂಡಿರುವ ಈ ಕಠಿಣ ಕ್ರಮವು, ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ಹಾಗೂ ಪಾರದರ್ಶಕತೆಯನ್ನು ಖಚಿತಪಡಿಸುವ ಬದ್ಧತೆಯನ್ನು ಪುನರುಚ್ಚರಿಸುತ್ತದೆ" ಎಂದು ಅವರು ಬರೆದುಕೊಂಡಿದ್ದಾರೆ.