'ತಂತ್ರಜ್ಞಾನ ದಿಗ್ಗಜನಾಗಿ ಬೆಳೆದಿದ್ದು ಸ್ವಂತ ಬಲದಿಂದ, ಕಳ್ಳತನದಿಂದಲ್ಲ': ಅಮೆರಿಕದ ಗೂಢಚರ್ಯೆ ಆರೋಪಕ್ಕೆ ಚೀನಾ ಕೌಂಟರ್! Nvidia

Chinese Foreign Ministry spokesperson Mao Ning has dismissed the espionage allegations made by the United States, in connection with a case involving former Nvidia CEO Jensen Huang.
ಎನ್ವಿಡಿಯಾ ಮಾಜಿ ಸಿಇಒ ಜೆನ್ಸೆನ್ ಹುವಾಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಮಾಡುತ್ತಿರುವ ಗೂಢಚರ್ಯೆ ಆರೋಪಗಳನ್ನು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೋ ನಿಂಗ್ ತಳ್ಳಿಹಾಕಿದ್ದಾರೆ.
Published on: 

ಬೀಜಿಂಗ್​: ಸದ್ಯ ವಿಶ್ವದಾದ್ಯಂತ ಭಾರೀ ಚರ್ಚೆಯ ವಿಷಯವಾಗಿ ಮಾರ್ಪಟ್ಟಿರುವ ಎನ್ವಿಡಿಯಾ ಮಾಜಿ ಸಿಇಒ ಜೆನ್ಸನ್ ಹುವಾಂಗ್ ಹಾಗೀ ಆಲಿಸ್​ ಹುವಾಂಗ್​ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಚೀನಾ ತನ್ನ ಮೊದಲ ಪ್ರತಿಕ್ರಿಯೆ ನೀಡಿದೆ.

ಅಮೆರಿಕದ ಉದ್ಯಮಿ ಮೇಲೆ ಚೀನಾ ಗೂಢಚರ್ಯೆಯರನ್ನು ಬಿಟ್ಟು ತಂತ್ರಜ್ಞಾನ ಲೋಕದ ಸೂಕ್ಷ್ಮ ಸಂಗತಿಗಳನ್ನು ಕಳ್ಳತನ ಮಾಡುತ್ತಿದೆ ಎಂಬ ಆರೋಪಕ್ಕೆ ಚೀನಾದ ವಿದೇಶಾಂಗ ಸಚಿವಾಲಯ ತಿರುಗೇಟನ್ನ ನೀಡಿದ್ದಾರೆ.

ಸುಳ್ಳು ಆರೋಪ ಮಾಡಬೇಡಿ!

ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೋ ನಿಂಗ್ (Mao Ning), ಎನ್ವಿಡಿಯಾ ಕಂಪನಿಗೆ ಸಂಬಂಧಿಸಿದಂತೆ ಕೆಲ ಗಂಭೀರ ಆರೋಪಗಳನ್ನು ಚೀನಾ ಮೇಲೆ ಅಮೆರಿಕ ಮಾಡುತ್ತಿದೆ. ಚೀನಾ ತನ್ನ ಸ್ವಂತ ಬಲದಿಂದ ಇಂದು ತಂತ್ರಜ್ಞಾನ ಲೋಕದ ದಿಗ್ಗಜನಾಗಿ ಬೆಳೆದಿದೆ.

ನಾವು ಯಾವುದೇ ಗೂಢಾಚಾರರನ್ನು ಬಿಟ್ಟಿಲ್ಲ. ಹೀಗಾಗಿ ಸರಿಯಾದ ಪುರಾವೆಗಳಿಲ್ಲದೆ ಅಮೆರಿಕ ನಮ್ಮ ಮೇಲೆ ಆರೋಪ ಮಾಡಬಾರದು, ಇದರಿಂದ ನಮ್ಮ ದೇಶದ ಹೆಸರು ಜಾಗತಿಕ ಮಟ್ಟದಲ್ಲಿ ಹಾಳಾಗುತ್ತಿದೆ ಎಂದಿದ್ದಾರೆ.

ಅಂತಯೇ, ಚೀನಾ ನಿಮ್ಮ (ಅಮೆರಿಕ) ಜೊತೆ ವ್ಯಾಪಾರ ಮಾಡಲು ಆಸಕ್ತಿ ಹೊಂದಿದೆ. ಆದರೆ ನೀವೇ ನಮ್ಮ ಮೇಲೆ ಆರ್ಥಿಕ ದಿಗ್ಬಂಧನ ಹೇರಿದ್ದಿರಾ. ಈಗ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಿರಾ ಎಂದು ತಿವಿದಿದ್ದಾರೆ. ಈ ಮೊದಲು ನೀವು ನಮ್ಮ ಮೇಲೆ ಈ ರೀತಿಯ ಆರೋಪ ಮಾಡಿದ್ದಿರಾ, ಆದರೆ ಅವುಗಳನ್ನು ನೀವು ಸಾಭೀತು ಪಡಿಸಿಲ್ಲ. ಹೀಗಾಗಿ ನೀವು ಇಲ್ಲ ಸಲ್ಲದ ಆರೋಪ ಮಾಡುವುದನ್ನು ಮೊದಲು ನಿಲ್ಲಿಸಿ ಎಂದು ಮಾವೋ ನಿಂಗ್ ಹೇಳಿದ್ದಾರೆ.

Also Read
ಎನ್ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​​: 'ಆಲಿಸ್ ಚೀನಿ ಗೂಢಚಾರಿ ಎಂಬುದಕ್ಕೆ ಸಾಕ್ಷ್ಯವಿಲ್ಲ': ಅಟಾರ್ನಿ ಜನರಲ್ ಹೇಳಿದ್ದೇನು? Jensen Huang
Chinese Foreign Ministry spokesperson Mao Ning has dismissed the espionage allegations made by the United States, in connection with a case involving former Nvidia CEO Jensen Huang.

ಏನಿದು ವಿವಾದ?

2025 ರಲ್ಲಿ ಎನ್ವಿಡಿಯಾ ಕಂಪನಿ ಸಿಇಒ ಜೆನ್ಸನ್ ಹುವಾಂಗ್ ಜೊತೆಗೆ ಸಿಂಗಾಪುರ ಮೂಲದ ಮೆಗಾಸ್ಪೀಡ್‌ ಕಂಪನಿಯ ಆಲಿಸ್​ ಹುವಾಂಗ್ ವ್ಯಾಪಾರದಲ್ಲಿ ಕೈ ಜೋಡಿಸಿದ್ದರು. ಈ ಆಲಿಸ್​ ಹುವಾಂಗ್ ಎನ್ವಿಡಿಯಾ ಕಂಪನಿಗೆ ಚಿಪ್​ಗಳನ್ನು ಪೂರೈಸುತ್ತಿದ್ದರು. ಆದರೆ, ಈ ಆಲಿಸ್​ ಹುವಾಂಗ್​ ಒಬ್ಬಳು ಚೀನಾ ಸ್ಪೈ ಹಾಗೂ ಚೀನಾ ಸರ್ಕಾರದೊಂದಿಗೆ ಸಂಪರ್ಕ ಹೊಂದಿದ್ದಾಳೆಂಬ ಆರೋಪ ಕೇಳಿಬಂದಿದೆ.

ಈ ಆಲಿಸ್​ ಹುವಾಂಗ್​ ಚೀನಾದ ಹುವೈ (Huawei) ಕಂಪನಿಯೊಂದಿಗೆ ನಂಟು ಹೊಂದಿದ್ದು, ಚಿಪ್‌ಗಳ ಮೂಲಕ ಎನ್ವಿಡಿಯಾದ ಅತ್ಯಂತ ಸೂಕ್ಷ್ಮ ತಂತ್ರಜ್ಞಾನದ ಮಾಹಿತಿಯನ್ನು ಚೀನಾಗೆ ರವಾನಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಈ ನಡುವೆ ಜೆನ್ಸನ್ ಹುವಾಂಗ್ ಅವರ ಅನೇಕ ಅನೈತಿಕ ಸಂಬಂಧಗಳ ಬಗ್ಗೆ ಕೂಡ ಮಾಹಿತಿ ಹೊರಬಿದ್ದ ಹಿನ್ನಲೆ ಅವರು ಎನ್ವಿಡಿಯಾದ ಸಿಇಒ ಹುದ್ದೆಗೆ ರಾಜೀನಾಮೆಯನ್ನು ಘೋಷಿಸಿದ್ದಾರೆ. ಈಗ ಹಂಗಾಮಿ ಸಿಇಒ ಆಗಿ ಕೊಲೆಟ್ ಕ್ರೆಸ್ (Colette Kress) ಅವರನ್ನು ನೇಮಿಸಲಾಗಿದೆ, (ಏಜೆನ್ಸೀಸ್​).