ಬಿಗ್ ಬ್ಯಾಷ್ ಲೀಗ್‌ನ ಕಾರ್ಯನಿರ್ವಾಹಕ ಜನರಲ್ ಮ್ಯಾನೇಜರ್ ಅಲಿಸ್ಟೇರ್ ಡಾಬ್ಸನ್ ಮಾತನಾಡಿ, ಬಿಬಿಎಲ್‌ನ ಜನಪ್ರಿಯತೆ ಆಸ್ಟ್ರೇಲಿಯಾದ ಗಡಿಗಳನ್ನು ಮೀರಿದೆ. ನಾವು ಕ್ರೀಡಾಂಗಣ ಭರ್ತಿಯಾಗುವುದನ್ನು ನೋಡಲು ಬಯಸುತ್ತೇವೆ. ಪ್ರೇಕ್ಷಕರು, ಬಣ್ಣ, ಸಂಗೀತ, ಗದ್ದಲದೊಂದಿಗೆ ಇದು ಅಪ್ಪಟ ಬಿಬಿಎಲ್ ಅನುಭವವನ್ನು ಭಾರತೀಯ ಅಭಿಮಾನಿಗಳಿಗೆ ನೀಡಲಿದ್ದು, ಈ ಪಂದ್ಯ ಇತಿಹಾಸ ಸೃಷ್ಟಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.