Bengaluru to Pune ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಮುಹೂರ್ತ ಫಿಕ್ಸ್: ಟಿಕೆಟ್ ದರವೆಷ್ಟು, ಏನೆಲ್ಲ ಸೌಲಭ್ಯವಿರಲಿದೆ?
Bengaluru to Pune vande bharat sleeper
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
2026 ಡಿಸೆಂಬರ್‌ನಿಂದ ಬೆಂಗಳೂರು-ಪುಣೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆ
ಪುಣೆಯಿಂದ ಬೆಂಗಳೂರಿಗೆ ತಲುಪಲು ಇನ್ಮುಂದೆ 13 ಗಂಟೆ ಸಾಕು
ರೈಲಿನಲ್ಲಿ ಒಟ್ಟು 16 ಬೋಗಿಗಳಿದ್ದು, ಪ್ರಯಾಣಿಕರಿಗೆ ವ್ಯವಸ್ಥಿತವಾಗಿ ಸೌಲಭ್ಯ ಇರಿಸಲಾಗಿದೆ.
ನವದೆಹಲಿ: ಮುಂಬೈ-ಬೆಂಗಳೂರು ಸ್ಲೀಪರ್ ವಂದೇ ಭಾರತ್ ರೈಲು(vande bharat sleeper) ಪ್ರಯಾಣದ ಬಗ್ಗೆ ಇತ್ತೀಚೆಗೆ ಅಪ್ಡೇಟ್ ಕೊಟ್ಟು ಗುಡ್ನ್ಯೂಸ್ ಕೊಟ್ಟಿದ್ದ ಭಾರತಿಯ ರೈಲ್ವೆ ಇಲಾಖೆ ಮತ್ತೊಂದು ಸಿಹಿಸುದ್ದಿಯನ್ನು ಪ್ರಯಾಣಿಕರಿಗೆ ಕೊಟ್ಟಿದೆ. ಹೌದು, 2026 ಡಿಸೆಂಬರ್‌ನಿಂದ ಬೆಂಗಳೂರಿನಿಂದ ಪುಣೆಗೆ ಹೈ-ಸ್ಪೀಡ್ ಸ್ಲೀಪರ್ ರೈಲು ಸಂಚಾರಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಅನುಮೋದನೆ ನೀಡಿರುವ ಬಗ್ಗೆ ಮಾಹಿತಿ ನೀಡಲಾಗಿದೆ.
ಸಾಮಾನ್ಯವಾಗಿ ಬೆಂಗಳೂರಿನಿಂದ ಪುಣೆಗೆ ಪ್ರಯಾಣಿಸುವ ಉದ್ಯಾನ್ ಎಕ್ಸ್‌ಪ್ರೆಸ್ ಅಥವಾ ಕೊಯಮತ್ತೂರು ಎಕ್ಸ್‌ಪ್ರೆಸ್‌ನಂತಹ ರೈಲುಗಳು ಆಯಾ ಗಮ್ಯಸ್ಥಾನಕ್ಕೆ ತಲುಪಲು 18 ರಿಂದ 19 ಗಂಟೆ ತೆಗೆದುಕೊಳ್ಳುತ್ತವೆ. ಆದರೆ, ವಂದೇ ಭಾರತ್ ಸ್ಲೀಪರ್ ಬಸ್ನಿಂದಾಗಿ ಕೇವಲ 13 ಗಂಟೆಗಳಲ್ಲಿ ಬೆಂಗಳೂರು-ಪುಣೆ ಪ್ರಯಾಣಿಸಬಹುದು ಎಂದು ಭಾರತೀಯ ರೈಲ್ವೆ ಇಲಾಖೆ ಮಾಹಿತಿ ಹಂಚಿಕೊಂಡಿದೆ.
130 ಕಿ.ಮೀ ವೇಗದಲ್ಲಿ ಚಲಿಸುತ್ತೆ
ಹೊಸ ವಂದೇ ಭಾರತ್ ಸ್ಲೀಪರ್ ರೈಲು ಗಂಟೆಗೆ ಗರಿಷ್ಠ 130 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ದೌಂಡ್-ವಾಡಿ ಮತ್ತು ವಾಡಿ-ಗುಂತಕಲ್ ವಿಭಾಗಗಳಲ್ಲಿ ಹಳಿಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಮಾಹಿತಿ ಹೇಳಿದೆ.
ಯಾವ್ಯಾವ ಮಾರ್ಗದಲ್ಲಿ ಚಲಿಸುತ್ತೆ ವೇಳಾಪಟ್ಟಿ ಏನು?
ಪುಣೆ-ಬೆಂಗಳೂರು ಪ್ರಯಾಣಿಸುವ ವಂದೇ ಭಾರತ್ ರೈಲು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ನಿಂದ ಹೊರಟು ಪುಣೆ, ಸೊಲ್ಲಾಪುರ ಮತ್ತು ವಾಡಿ ಮೂಲಕ ಬೆಂಗಳೂರಿನ ಕೆಎಸ್‌ಆರ್ ನಿಲ್ದಾಣವನ್ನು ತಲುಪಲಿದೆ. ವಾರದಲ್ಲಿ 6 ದಿನ ಸಂಚರಿಸಲಿರುವ ಈ ರೈಲು, ರಾತ್ರಿ ಸುಮಾರು 9 ಗಂಟೆಗೆ ನಿಲ್ದಾಣದಿಂದ ಹೊರಡಲಿದೆ.
ಈ ನೂತನ ರೈಲಿನಲ್ಲಿ ಪ್ರಯಾಣಿಸುವುದರಿಂದಾಗಿ ಐಟಿ ಉದ್ಯೋಗಿಗಳಿಗೆ ಮತ್ತು ವ್ಯಾಪಾರಸ್ಥರಿಗೆ ರಾತ್ರೋರಾತ್ರಿ ಪ್ರಯಾಣಿಸಲು ಅತ್ಯಂತ ಅನುಕೂಲಕರ ಎಂದು ರೈಲ್ವೆ ಇಲಾಖೆ ಹೇಳಿದೆ.
ಟಿಕೆಟ್ ದರ ಎಷ್ಟು?
ಎಸಿ ಟೈರ್ ಪ್ರಯಾಣಕ್ಕೆ 2,500 ರೂಪಾಯಿಯಾದರೆ, ಎಸಿ 2 ಟೈರ್ಗೆ 3,000 ರಿಂದ 3,200 ಇನ್ನು ಫಸ್ಟ್ ಎಸಿ: 3,600 ರಿಂದ 3,900 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಈ ದರದಲ್ಲಿ ಊಟದ ವ್ಯವಸ್ಥೆಯು ಇರಲಿದೆ. ದರ ಏರಿಳಿತ ಇರುವುದಿಲ್ಲ ಇರುವುದಿಲ್ಲ ಎಂದು ಹೇಳಲಾಗಿದೆ.
ಏನೆಲ್ಲ ಸೌಲಭ್ಯ ಇರಲಿದೆ?
ನೂತನ ಸ್ಲೀಪರ್ ರೈಲಿನಲ್ಲಿ ಒಟ್ಟು 823 ಪ್ರಯಾಣಿಕರು ಪ್ರಯಾಣಿಸಲು ಆಸನಗಳಿವೆ.11 ಎಸಿ 3-ಟೈರ್, 4 ಎಸಿ 2-ಟೈರ್ ಮತ್ತು 1 ಫಸ್ಟ್ ಎಸಿ ಕೋಚ್ ಇರಲಿವೆ. ಓದಲು ಪ್ರತ್ಯೇಕ ಲೈಟ್ಸ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳು, ಸಿಸಿಟಿವಿ ಕ್ಯಾಮೆರಾಗಳು ಮತ್ತು ರೈಲುಗಳ ಡಿಕ್ಕಿ ತಪ್ಪಿಸುವ 'ಕವಚ್' ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಫಸ್ಟ್ ಎಸಿ ಪ್ರಯಾಣಿಕರಿಗೆ ಶವರ್ ಮತ್ತು ಮಕ್ಕಳ ಆರೈಕೆಗಾಗಿ ವ್ಯವಸ್ಥೆ ಮಾಡಲಾಗಿದೆ, (ಏಜೆನ್ಸೀಸ್)