ಸಂಸದೀಯ ಗಾಂಭೀರ್ಯವನ್ನೇ ಮರೆತ ನಡವಳಿಕೆ

ಸಂಸದೀಯ ಗಾಂಭೀರ್ಯವನ್ನೇ ಮರೆತ ನಡವಳಿಕೆ
ಸಂಸದೀಯ ಗಾಂಭೀರ್ಯವನ್ನೇ ಮರೆತ ನಡವಳಿಕೆ
Published on
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)
ಇಷ್ಟೆಲ್ಲಾ ಆಗಿಹೋದ ಮೇಲೆ ಆ ಕೃತಿ ಪ್ರಕಟವಾಗಿಲ್ಲವೆಂದು ಲೇಖಕರು ಹಾಗೂ ಪ್ರಕಾಶಕರು ಹೇಳಿದ ಮೇಲೆ ಆ ತಥಾಕಥಿತ ಪುಸ್ತಕದ ಪ್ರದರ್ಶನವನ್ನು ರಾಹುಲ್ ನಿಲ್ಲಿಸಿದರು. ಪ್ರಕರಣ ಅಷ್ಟಕ್ಕೆ ನಿಲ್ಲಲಿಲ್ಲ. ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೆಹರೂ-ಗಾಂಧಿ ಕುಟುಂಬದ ಹಿರಿಯರ ಕುರಿತಾಗಿ ಪ್ರಕಟವಾಗಿರುವ ಡಜನ್​ಗಟ್ಟಲೆ ಪುಸ್ತಕಗಳನ್ನು ಎರಡು ಚೀಲಗಳಲ್ಲಿ ತುಂಬಿಕೊಂಡು ಸದನಕ್ಕೆ ತಂದು ತೋರಿಸಿ ಅವುಗಳಲ್ಲಿನ ವಿಷಯಗಳನ್ನು ಸದನದ ಮುಂದೆ ಪ್ರಸ್ತಾಪಿಸಿದರು.
ನೆಹರೂ ದೇಶದ ಮೊದಲ ಪ್ರಧಾನಿಯಾದ ವಿಧಾನದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಮತ್ತೆ ಮತ್ತೆ ಪ್ರಶ್ನೆಗಳೇಳುತ್ತಿವೆ, ಆ ಕುರಿತಾಗಿ ಪುಸ್ತಕಗಳೂ ಪ್ರಕಟವಾಗಿವೆ. ನೆಹರೂ ದೇಶದ ವಿದೇಶಾಂಗ ಮತ್ತು ರಕ್ಷಣಾ ನೀತಿ ವಿಷಯದಲ್ಲಿ ತಳೆದ ನಿಲುವುಗಳು ಮತ್ತು ವರ್ತಿಸಿದ ಬಗೆ ರಾಷ್ಟ್ರಕ್ಕೆ ಹಾನಿ ತಂದೊಡ್ಡಿದ ಬಗೆಗಂತೂ ದಶಕಗಳಿಂದಲೂ ವಿವರಣಾತ್ಮಕ ಕೃತಿಗಳು ಪ್ರಕಟವಾಗುತ್ತಲೇ ಇವೆ. ಹಾಗೆಯೇ, ಎಡ್ವಿನಾ ಮೌಂಟ್​ಬ್ಯಾಟನ್ ಸೇರಿದಂತೆ ಹಲವಾರು ಮಹಿಳೆಯರ ಜತೆ ನೆಹರೂ ಹೊಂದಿದ್ದ ಸಂಬಂಧಗಳ ಕುರಿತಾಗಿಯೂ ಸಾಕಷ್ಟು ಪುಸ್ತಕಗಳು ಪ್ರಕಟವಾಗಿವೆ. ಅವುಗಳಲ್ಲಿ ಹಲವನ್ನು ನೆಹರೂ ಸರ್ಕಾರ ನಿರ್ಬಂಧಿಸಿತ್ತು. ಆದರೂ ಅವು ಜನರಿಗೆ ಓದಲು ಲಭ್ಯವಾಗಿರುವುದು ರಹಸ್ಯವೇನಲ್ಲ. ಆದರೆ ಆ ಪುಸ್ತಕಗಳು ಮೊತ್ತಮೊದಲ ಬಾರಿಗೆ ಲೋಕಸಭೆಯಲ್ಲಿ ಪ್ರದರ್ಶನಗೊಂಡದ್ದು ಈಗ!
ನೆಹರೂರ ಆಪ್ತ ಕಾರ್ಯದರ್ಶಿಯಾಗಿದ್ದ ಎಂ.ಓ. ಮಥಾಯ್ ತಮ್ಮ ‘ರೆಮಿನಿಸೆನ್ಸಸ್ ಆಫ್ ನೆಹ್ರೂ ಇರಾ’ ಎಂಬ ಕೃತಿಯಲ್ಲಿನ ಶಿ ಎಂಬ ಅಧ್ಯಾಯ ಕೃತಿಯ ಪ್ರಾರಂಭಿಕ ಆವೃತ್ತಿಗಳಲ್ಲಿ ಕತ್ತರಿಸಲ್ಪಟ್ಟಿತ್ತು. ಇತ್ತೀಚಿನ ಆವೃತ್ತಿಗಳಲ್ಲಿ ಅದು ಸೇರ್ಪಡೆಗೊಂಡಿದೆ ಮತ್ತು ಅದರಲ್ಲಿ ತಾವು ಇಂದಿರಾರೊಂದಿಗೆ ಸಾಮೀಪ್ಯ ಹೊಂದಿದ್ದುದಾಗಿ ಮಥಾಯ್ ಬರೆದಿದ್ದಾರೆ. ಆ ಕೃತಿಯೂ ಈಗ ಲೋಕಸಭೆಯಲ್ಲಿ ಮೊತ್ತಮೊದಲ ಬಾರಿಗೆ ಪ್ರದರ್ಶನಗೊಂಡಿದೆ!
ಕೆರಳಿಸಿರುವ ವ್ಯಕ್ತಿಗಳಲ್ಲಿ ಅಗ್ರಗಣ್ಯರು. ಸೋವಿಯೆತ್ ಯೂನಿಯನ್ ಬಗ್ಗೆ ಮಾಜಿ ಬ್ರಿಟಿಷ್ ಪ್ರಧಾನಿ ವಿನ್​ಸ್ಟನ್ ರ್ಚಚಿಲ್ ಹೇಳಿದ It is a riddle wrapped in a mystery inside an enigma 
ಎಂಬ ಮಾತನ್ನು ಕೆಲವರು ಸೋನಿಯಾರ ಬಗ್ಗೆಯೂ ಹೇಳುವುದುಂಟು. ಸೋನಿಯಾ ಒಂದು ಒಡೆಯಬಾರದ ಒಗಟು ಎಂದೂ ದೇಶ ತಿಳಿದ ಹಾಗಿದೆ. ಅವರ ಕುರಿತಾಗಿನ ‘ದ ರೆಡ್ ಸ್ಯಾರೀ’ ಎಂಬ ಕೃತಿಯ ಬಗ್ಗೆ ಕೇಳಿದವರು ಬಹಳ ಕಡಿಮೆ. ಓದಿದವರಂತೂ ಇನ್ನೂ ಕಡಿಮೆ. ಆದರೆ ಈಗ ಆ ಕೃತಿಯೂ ಲೋಕಸಭೆಯಲ್ಲಿ ಪ್ರದರ್ಶನಗೊಂಡಿದೆ!
ಜ. ಎಂ.ಎಂ. ನರವಣೆಯವರ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಇನ್ನೂ ಪ್ರಕಟವಾಗಿಲ್ಲ. ಅದರಲ್ಲಿದೆಯೆಂದು ರಾಹುಲ್ ಹೇಳುವ ಮಾತು ತಪ್ಪೆಂದೂ ಕಾಣುವುದಿಲ್ಲ. ಆದರೆ ಅದನ್ನು ಹಿಡಿದುಕೊಂಡು ಮೋದಿಯವರನ್ನು ಅವಮಾನಿಸಲು ರಾಹುಲ್ ಹೊರಟಿದ್ದರಿಂದಾಗಿ ಅವರ ಕುಟುಂಬದ ಹಿರಿಯರ ನಕಾರಾತ್ಮಕ ಚರಿತ್ರೆಯನ್ನು ವಿವರವಾಗಿ ಬಿಚ್ಚಿಡುವ ಪ್ರಕಟಿತ ಕೃತಿಗಳು ಇಂದು ಲೋಕಸಭೆಯಲ್ಲೇ ಪ್ರದರ್ಶಿತವಾಗುತ್ತಿವೆ. ರಾಹುಲ್ ತಮ್ಮ ಕೃತ್ಯಗಳಿಂದಾಗಿ ತಮ್ಮ ಕುಟುಂಬಕ್ಕೆ ಕಳಂಕ ಹಚ್ಚುವ ಕೆಲಸ ಮಾಡಿದ್ದಾರೆ. ಇಂದು ನೆಹರೂ, ಇಂದಿರಾ ಬದುಕಿಲ್ಲ. ಬದುಕಿರುವ ಸೋನಿಯಾರಿಗೆ ಪುತ್ರನ ಈ ತಿಳಿಗೇಡಿ, ಹೊಣೆಗೇಡಿ, ಸ್ವಕುಲಘಾತಕ ಕೃತ್ಯ ಸಮ್ಮತವೆನಿಸಲಾರದು.
ರಾಹುಲ್​ರನ್ನು ಕಾಂಗ್ರೆಸ್ ಮೇಲೆ ಸೋನಿಯಾ ಹೇರಿದ್ದು ಅವರ ಪುತ್ರವ್ಯಾಮೋಹಕ್ಕಷ್ಟೇ ಅಲ್ಲ, ನೆಹರೂ-ಗಾಂಧಿ ಪರಿವಾರದ ನಡವಳಿಕೆಗೂ ಅನುಗುಣವಾಗಿಯೇ ಇದೆ. ಹಿಂದೆ ಆ ಪ್ರಭಾವದಿಂದ ಅಧಿಕಾರಕ್ಕೇರಿದ ಇಂದಿರಾ ಆ ಸ್ಥಾನಕ್ಕೆ ತಾವು ಅರ್ಹರು ಎಂದು ಒಂದಕ್ಕಿಂತ ಹೆಚ್ಚು ಬಗೆಯಲ್ಲಿ ಸಾಬೀತುಗೊಳಿಸಿದರು. ತುಸುಮಟ್ಟಿಗೆ ರಾಜೀವ್ ಸಹ ಹಾಗೇ ನಡೆದುಕೊಂಡರು. ಆದರೆ ತಮ್ಮ ಅತ್ತೆ ಹಾಗೂ ಪತಿಯ ಹಾಗೆ ಮಗ ಇಲ್ಲ ಎಂದು ಸೋನಿಯಾಗೆ ಬಹಳ ತಡವಾಗಿ ಅರಿವಾದಂತಿದೆ. ಹೀಗಾಗಿಯೇ ಪ್ರಿಯಾಂಕಾ ರಾಜಕೀಯಕ್ಕಿಳಿಯುವುದು ಇಷ್ಟು ತಡವಾಯಿತು. ಆ ಆಯ್ಕೆಯೂ ನೆಹರೂ-ಗಾಂಧಿ ಕುಟುಂಬ ರೂಢಿಸಿಕೊಂಡ, ಕಾಂಗ್ರೆಸ್ ಅನುಸರಿಸುತ್ತ ಬಂದಿರುವ ಸಂಪ್ರದಾಯಕ್ಕೆ ಅನುಗುಣವಾಗಿಯೇ ಇದೆ. ಇಷ್ಟಾಗಿಯೂ ಇಂದಿನ ಸನ್ನಿವೇಶದಲ್ಲಿ ಕಾಂಗ್ರೆಸ್​ನ ಹೊರಗಷ್ಟೇ ಅಲ್ಲ, ಒಳಗೂ ಸಹ ಪ್ರಿಯಾಂಕಾ ಸಾಗಬೇಕಾದ ಹಾದಿ ದುಸ್ತರವಾದದ್ದೇ. ಪಕ್ಷದೊಳಗಿನ ದುರಂತವೆಂದರೆ ರಾಹುಲ್​ರನ್ನು ಪಕ್ಕಕ್ಕಿಡುವುದಿರಲಿ, ಅವರಿಗೆ ಬುದ್ಧಿಮಾತು ಹೇಳುವ ಸಾಮರ್ಥ್ಯವನ್ನೂ ಪಕ್ಷದ ಹಿರಿಯರು ತೋರುತ್ತಿಲ್ಲ. ಬದಲಿಗೆ ರಾಹುಲ್​ರ ಹಾದಿಯನ್ನೇ ಅವರೂ ತುಳಿಯುತ್ತಿರುವಂತಿದೆ. 
ರಾಹುಲ್​ರನ್ನು ಹುಮ್ಮಸ್ಸುಗೊಳಿಸುತ್ತಿರುವುದು, ತಮ್ಮ ತಪ್ಪುಗಳು ಅವರಿಗೆ ಅರಿವಾಗದಂತೆ ಮಾಡುತ್ತಿರುವುದು ಇದೇ. ಆದಾಗ್ಯೂ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರನೇಕರ ಮುಖಭಾವ ಹೇಳುವುದು ರಾಹುಲ್​ರನ್ನು ನಿರೋಧಿಸಲಾಗದ ಅಸಹಾಯ ಸ್ಥಿತಿಯಲ್ಲಿ ಅವರಿದ್ದಾರೆ ಎನ್ನುವುದನ್ನು. ತಾವು ಮಾತಾಡಿದರೆ ಭೂಕಂಪವಾಗುತ್ತದೆ, ತಮ್ಮ ಮಾತು ಕೇಳಲು ಮೋದಿ ಹೆದರುತ್ತಾರೆ ಎಂದೇನೋ ರಾಹುಲ್ ಹೇಳುತ್ತಾರೆ. ಆದರೆ ಅವರ ಮಾತುಗಳಿಂದಾಗಿ ಭೂಕಂಪವಾಗುವುದು ಹಲವಾರು ಕಾಂಗ್ರೆಸ್ ಸಂಸದರ ಎದೆಗಳಲ್ಲಿ, ಹೆದರಿಕೆಯಾಗುವುದು ಅವರಿಗೇ. ಇದಕ್ಕೊಂದು ಉದಾಹರಣೆಯಾಗಿ ಇದೇ ಬಜೆಟ್ ಅಧಿವೇಶನದ ಮೊದಲ ಹಂತದ ಒಂದು ಸನ್ನಿವೇಶವನ್ನು ಗಮನಿಸಬಹುದು. ಮೋದಿಯವರನ್ನು ಟ್ರಂಪ್ ಹೇಗೆ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ ಎಂದು ಸಂಸದರಿಗೆ ‘ಮನದಟ್ಟು’ ಮಾಡಲು ರಾಹುಲ್ ಮಾರ್ಷಲ್ ಆರ್ಟ್​ಗಳ ಪಟ್ಟುಗಳನ್ನು ಒಂದೊಂದಾಗಿ ಹೇಳುತ್ತಾ, ಜುಜುತ್ಸು ಎಂದೆಲ್ಲ ಹೇಳತೊಡಗಿದಾಗ ಹಿಂದಿದ್ದ ಕಾಂಗ್ರೆಸ್ ಸಂಸದರ ಮುಖಗಳಲ್ಲಿ ಕಳವಳ ಮೂಡಿತ್ತು, ಸಂಸದೆಯೊಬ್ಬರು ನಗೆ ತಡೆಯಲು ಪ್ರಯತ್ನಿಸುತ್ತಿದ್ದರು!
2014ರಲ್ಲಿ ತೀವ್ರವಾಗಿ ಇಳಿಯತೊಡಗಿದ ಕಾಂಗ್ರೆಸ್ ಜನಪ್ರಿಯತೆ 2024ರಲ್ಲಿ ತುಸು ಚೇತರಿಸಿಕೊಂಡಂತೆ ಕಂಡಿತು. ಇಳಿಕೆಗೆ ಕಾರಣ ರಾಹುಲ್ ಎನ್ನುವುದು ಕಾಂಗ್ರೆಸ್ಸಿಗರಿಗೂ ಗೊತ್ತಿದೆ. ಆದರೆ ಏರಿಕೆಗೆ ರಾಹುಲ್ ಕಾರಣ ಅಲ್ಲ ಎನ್ನುವುದು ದೇಶಕ್ಕೇ ಗೊತ್ತಿದೆ. ಬಿಜೆಪಿಯದೇ ಕೆಲವು ತಪ್ಪುಗಳು, ಭಾರತದ ರಾಜಕಾರಣದಲ್ಲಿ ವಿದೇಶಿ ಶಕ್ತಿಗಳ, ಮುಖ್ಯವಾಗಿ ಯುಎಸ್​ಎಐಡಿ ಹಾಗೂ ಜಾರ್ಜ್ ಸೊರೋಸ್​ರಂಥವರ ಕುನೀತಿಗಳು ಆಡಳಿತ ಪಕ್ಷಕ್ಕೆ ಹಾದಿಮುಳ್ಳಾದವು ಎನ್ನುವುದೀಗ ಸರ್ವವಿದಿತ. ತನ್ನ ‘ತಪ್ಪು’ಗಳನ್ನು ಬಿಜೆಪಿ ಅತ್ಯಲ್ಪ ಕಾಲದಲ್ಲೇ ಗುರುತಿಸಿಕೊಂಡಿತು ಹಾಗೂ ಪರಿಹಾರಾತ್ಮಕ ಯೋಜನೆಗಳನ್ನೂ ನಿಷ್ಠೆಯಿಂದ ಅನುಷ್ಠಾನಗೊಳಿಸಿಕೊಂಡಿತು. ಅದರ ಪರಿಣಾಮವನ್ನು ನಂತರದ ವಿಧಾನಸಭೆ ಚುನಾವಣೆಗಳಲ್ಲಿ ನೋಡಿದ್ದೇವೆ. ಇಂತಹ ಸನ್ನಿವೇಶದಲ್ಲಿ ರಾಹುಲ್ ಲೋಕಸಭೆಯ ಒಳಗೆ ಹೊರಗೆ ಋಣಾತ್ಮಕ ರಾಜಕಾರಣದಲ್ಲಿ ತೊಡಗಿರುವುದು, ಎಐ ಸಮಾವೇಶದಲ್ಲಿ ಅನುಚಿತವಾಗಿ ವರ್ತಿಸಿದ ಯುವ ಕಾಂಗ್ರೆಸ್ ನೇತಾರರನ್ನು ಹೊಗಳಿ, ಬೆಂಬಲಿಸಿ ಮಾತಾಡಿದ್ದು ಪಕ್ಷದ ಮುಖಕ್ಕೆ ಇನ್ನಷ್ಟು ಮಸಿ ಹಚ್ಚಿದೆ. ತಾವು ಪಕ್ಷಕ್ಕೆ ಕಂಟಕ ಎನ್ನುವುದನ್ನು ರಾಹುಲ್ ಈಗಲೂ ತಿಳಿದಂತೆ ಕಾಣುತ್ತಿಲ್ಲ.
ರಾಹುಲ್ ಮಾತುಕೃತಿಗಳು ದೇಶಹಿತಕ್ಕೆ ಮಾರಕವೆನ್ನುವುದು ಹಲವು ಬಾರಿ ಸಾಬೀತಾಗಿದೆ. ಜನತಾ ಆಡಳಿತದ ದಿನಗಳಲ್ಲಿ ದೇಶದ ಕುರಿತಾಗಿ ಲಂಡನ್​ನಲ್ಲಿ ಪ್ರಶ್ನೆಯೊಂದು ಎದುರಾದಾಗ ಇಂದಿರಾ ಪ್ರತಿಕ್ರಿಯಿಸಿದ್ದು ತಮ್ಮ ದೇಶದ ಅಂದಿನ ವಾಸ್ತವಗಳ ಬಗ್ಗೆ ವಿದೇಶಿ ನೆಲದಲ್ಲಿ ನಕಾರಾತ್ಮಕವಾಗಿ ಮಾತಾಡಲು ತಾವು ತಯಾರಿಲ್ಲ ಎಂದು. ಆ ವಿವೇಕ ರಾಹುಲ್​ರಲ್ಲಿಲ್ಲ. ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿದಂತೆ ಕಳೆದ 12 ವರ್ಷಗಳಲ್ಲಿ ರಾಹುಲ್ 260 ವಿದೇಶಯಾತ್ರೆಗಳನ್ನು ಕೈಗೊಂಡಿದ್ದಾರೆ! ಯುಕೆ, ಜರ್ಮನಿ, ಸಿಂಗಪುರ, ಅಮೆರಿಕ ಸೇರಿದಂತೆ ಹಲವೆಡೆ ಅವರು ದೇಶದ ವಿರುದ್ಧ ಮಾತಾಡಿದ್ದಾರೆ, ಇಂದಿನ ಭಾರತದಲ್ಲಿ ಸಿಖ್ಖರಿಗೆ ತಮ್ಮ ಪಗಡಿಗಳನ್ನು ಧರಿಸುವ ಅವಕಾಶವಿಲ್ಲ ಎಂಬ ವಾಸ್ತವವಲ್ಲದ ಮಾತುಗಳನ್ನು ಹಿಂಜರಿಕೆಯಿಲ್ಲದೇ ಆಡಿದ್ದಾರೆ, ಪಶ್ಚಿಮದ ರಾಷ್ಟ್ರಗಳು ಭಾರತದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೆ ಮುಂದಾಗಬೇಕು ಎಂಬ ತರ್ಕಹೀನ ಹಾಗೂ ದೇಶವಿರೋಧಿ ಮಾತುಗಳನ್ನು ಆಡಿದ್ದಾರೆ. ಹೀಗೆ ಒಂದು ಭಾಷಣ ಮಾಡಿದ ನಂತರ ವಿದೇಶಿ ನೆಲದಲ್ಲಿ ವಾರಗಟ್ಟಲೆ ಮಾಯವಾಗಿಬಿಡುವುದು ಭಾರತದ ರಾಜಕಾರಣಿಯಾಗಿ ರಾಹುಲ್​ರ ಜೀವನಕ್ರಮದ ಬಗ್ಗೆ ಅನುಮಾನಗಳನ್ನೂ, ಪ್ರಶ್ನೆಗಳನ್ನೂ ಮೂಡಿಸುತ್ತಲೇ ಇದೆ. ಅವರ ಚೀನಾ-ಪ್ರೀತಿಯಂತೂ ಅವರ ರಾಷ್ಟ್ರನಿಷ್ಠೆಯನ್ನೇ ಅನುಮಾನಕ್ಕೀಡಾಗಿಸಿದೆ. ಗಾಂಧಿ ಕುಟುಂಬ ಹಿಂದೆ ಸ್ವಿಸ್ ಬ್ಯಾಂಕ್​ಗಳಲ್ಲಿಟ್ಟಿದ್ದ ಹಣವನ್ನೂ ಈಗ ಮಕಾವೋಗೆ ಸ್ಥಳಾಂತರಿಸಿದೆ ಎಂದು ಗೋವಾದ ಆಂಗ್ಲ ಪತ್ರಕರ್ತ ಸಾವಿಯೋ ರಾಡ್ರಿಗಸ್ ಹೇಳುವುದು ಇಲ್ಲಿ ಉಲ್ಲೇಖನೀಯ.
ಬ್ರಿಟಿಷ್ ಹಿಡಿತದಲ್ಲಿದ್ದು ಚೀನಾಗೆ ವರ್ಗಾವಣೆಯಾದ ಹಾಂಕಾಂಗ್​ನಂತೇ ಹಿಂದೆ ಪೋರ್ಚುಗಲ್​ನ ಹಿಡಿತದಲ್ಲಿದ್ದು ಕಳೆದ ಶತಮಾನದ ಅಂತ್ಯದಲ್ಲಿ ಚೀನಾಗೆ ವರ್ಗಾವಣೆಗೊಂಡ ಪುಟ್ಟ ಪ್ರದೇಶ ಮಕಾವೋ. ರಾಹುಲ್ ಥಾಯ್ಲೆಂಡ್, ಕಾಂಬೋಡಿಯಾ, ವಿಯೆಟ್ನಾಂಗೆ ಪ್ರಯಾಣಿಸುತ್ತಾರೆ; ವಿಯೆಟ್ನಾಂನಿಂದ ಟಾಂಕಿನ್ ಕೊಲ್ಲಿ ಹಾರಿದರೆ ಮಕಾವೋದಲ್ಲಿ ಇಳಿಯಬಹುದು! ಈ ವಿಷಯಗಳೂ ರಾಹುಲ್​ರ ವಿದೇಶಯಾತ್ರೆಗಳು ಮತ್ತು ಈ ದೇಶದ ಬಗ್ಗೆ ಪೂರ್ಣನಿಷ್ಠೆಯ ಬಗ್ಗೆ ಪ್ರಶ್ನೆಗಳನ್ನು ಉಂಟುಮಾಡುತ್ತಿವೆ. ಅವರ ನಡವಳಿಕೆಗಳು ದೇಶದ ಹಿತಾಸಕ್ತಿಗೆ ಮಾರಕವಾಗುತ್ತಿರಬಹುದೇ ಎಂಬ ಪ್ರಶ್ನೆಗಳೂ ಕೇಳಿಬರತೊಡಗಿವೆ. ಇವುಗಳೊಂದಿಗೆ ಅವರು ಬ್ರಿಟಿಷ್ ಪೌರತ್ವವನ್ನೂ ಹೊಂದಿರಬಹುದೇ ಎಂಬ ಪ್ರಶ್ನೆಯೂ ಎದ್ದಿರುವುದು ಕಾಂಗ್ರೆಸ್​ನಲ್ಲೇ ಆತಂಕವುಂಟುಮಾಡಿರುವ ಸಾಧ್ಯತೆ ಇದೆ.
ಆದರೆ ತಾವು ಇದಾವುದರ ಬಗ್ಗೆಯೂ ಚಿಂತಿತರಾಗಿಲ್ಲ ಎಂದು ರಾಹುಲ್ ಲೋಕಸಭೆಯ ಒಳಹೊರಗೆ ತಮ್ಮ ಮಾತುಗಳಿಂದ ತೋರಿಸುತ್ತಿದ್ದಾರೆ. ಅವರು ಎಚ್ಚ್ಚೆತ್ತುಕೊಳ್ಳಬೇಕಾದ ಸಮಯ ಬಂದಿದೆ, ಆ ಸಮಯ ಮೀರುತ್ತಿರುವಂತೆಯೂ ಇದೆ. ಇಂಡಿ ಒಕ್ಕೂಟದ ನಾಯಕನ ಸ್ಥಾನಕ್ಕೆ ಅವರು ಯೋಗ್ಯರಲ್ಲ, ಅದಕ್ಕೆ ಅರ್ಹ ವ್ಯಕ್ತಿ ಮಮತಾ ಬ್ಯಾನರ್ಜಿ ಎಂಬ ಅಭಿಪ್ರಾಯ ವಿರೋಧಪಕ್ಷಗಳ ಪಾಳಯದಲ್ಲಿ ವ್ಯಕ್ತವಾಗ ತೊಡಗಿದ್ದರೆ ಲೋಕಸಭೆಯಲ್ಲಿ ಅವರು ನಡೆದುಕೊಳ್ಳುತ್ತಿರುವ ರೀತಿ ಅವರು ಅಲ್ಲಿರಲು ಯೋಗ್ಯರಲ್ಲ ಎಂಬ ಅಭಿಪ್ರಾಯವನ್ನು ಆಡಳಿತ ವಲಯದಲ್ಲಿ ದಟ್ಟವಾಗಿಸುತ್ತಿದೆ. ಅವರ ವಿರುದ್ಧ ಸಬ್​ಸ್ಟಾ್ಯಂಟಿವ್ ಮೋಷನ್ ತಂದು ಅವರನ್ನು ಲೋಕಸಭೆಯಿಂದ ಹೊರಹಾಕಬೇಕೆಂದು ಸಂಸದ ನಿಶಿಕಾಂತ್ ದುಬೆ ಬಿಟ್ಟ ವಾಗ್ಬಾಣ ದೇಶದ ರಾಜಕಾರಣದಲ್ಲಿ ರಾಹುಲ್​ರ ಪಾತ್ರವನ್ನು ಸೀಮಿತಗೊಳಿಸಬಹುದೇ? (ಮುಕ್ತಾಯ)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net