ರಾಮರಾಜ್ಯದಲ್ಲಿ ಎಣ್ಣೆ ಪಾರ್ಟಿ: ಪವಿತ್ರ ಸರಯೂ ನದಿಯಲ್ಲಿ ಬಿಯರ್ ಹೀರಿದ ಯುವಕರು; ವಿಡಿಯೋ ವೈರಲ್ ಬೆನ್ನಲ್ಲೇ ಮೂವರ ಬಂಧನ​! Beer Party in Sarayu River

ಅಯೋಧ್ಯೆಯ ಪವಿತ್ರ ಸರಯೂ ನದಿಯ ಗುಪ್ತಾರ್ ಘಾಟ್‌ನಲ್ಲಿ ಮಟನ್ ಹಾಗೂ ಬಿಯರ್ ಪಾರ್ಟಿ
ಅಯೋಧ್ಯೆಯ ಪವಿತ್ರ ಸರಯೂ ನದಿಯ ಗುಪ್ತಾರ್ ಘಾಟ್‌ನಲ್ಲಿ ಮಟನ್ ಹಾಗೂ ಬಿಯರ್ ಪಾರ್ಟಿ
Published on

ಪ್ರಮುಖ ಮುಖ್ಯಾಂಶಗಳು

  • ಅಯೋಧ್ಯೆಯ ಪವಿತ್ರ ಸರಯೂ ನದಿಯ ಗುಪ್ತಾರ್ ಘಾಟ್‌ನಲ್ಲಿ ಮಟನ್ ಹಾಗೂ ಬಿಯರ್ ಪಾರ್ಟಿ
  • ವಿಡಿಯೋ ಹಂಚಿಕೊಂಡಿದ್ದ ಮೂವರು ಯುವಕರನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸ್​
  • ಮೂವರು ಯುವಕರ ಬಂಧನ; ಒಬ್ಬ ಪರಾರಿ
ಅಯೋಧ್ಯೆ: ಭಾರತದಲ್ಲಿರುವ ಪುಣ್ಯ ಕ್ಷೇತ್ರಗಳಲ್ಲಿ ಅಯೋಧ್ಯಾ ರಾಮ, ಮಥುರಾದ ಕೃಷ್ಣ ಹಾಗೂ ಕಾಶಿಯ ಮಹಾದೇವ (ಶಿವ) ನ ದೇವಸ್ಥಾನಗಳು ಪ್ರತಿಯೊಬ್ಬ ಹಿಂದೂವಿಗೆ ಧಾರ್ಮಿಕವಾಗಿ ಅತ್ಯಂತ ಪವಿತ್ರವಾದ ಸ್ಥಳಗಳಾಗಿವೆ.
ಆದರೆ, ಇತ್ತೀಚೆಗೆ ಅಯೋಧ್ಯಾ ರಾಮ ಮಂದರಿ ನೆಲೆ ನಿಂತಿರುವ ಸರಯೂ ನದಿಯಲ್ಲಿ ಯುವಕರ ಗುಂಪೊಂದು, ಮಟನ್​ ಹಾಗೂ ಬಿಯರ್​ ಕುಡಿಯುತ್ತಾ ಪಾರ್ಟಿ (Beer Party in Sarayu River) ಮಾಡುವ ವಿಡಿಯೋವೊಂದು ಸೋಷಿಯಲ್​ ಮೀಡಿಯಾನಲ್ಲಿ ಸಂಚಲನಕ್ಕೆ ಕಾರಣವಾಗಿತ್ತು.
ಈ ಘಟನೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾದ ಹಿನ್ನಲೆಯಲ್ಲಿ ವಿಡಿಯೋದಲ್ಲಿದ್ದ ಯುವಕರನ್ನು ಪೊಲೀಸರು ಬಂಧಿಸಿದ್ದಾರೆಂದು ತಿಳಿದು ಬಂದಿದೆ.

ಮೂವರ ಬಂಧನ; ಒಬ್ಬ ಪರಾರಿ!

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಲವ್ಕುಶ ನಿಶಾದ್, ರಾಜಕುಮಾರ್ ನಿಶಾದ್ ಮತ್ತು ಜಿತೇಂದ್ರ ನಿಶಾದ್ ಎನ್ನುವವರು ಬಂಧಿತ ಆರೋಪಿಗಳಾಗಿದ್ದು, ಅಮರ್‌ಜೀತ್ ನಿಶಾದ್ ಎನ್ನುವವನು ತಲೆ ಮರೆಸಿಕೊಂಡಿದ್ದಾನೆಂದು ಹೇಳಿದ್ದಾರೆ.
ಮಾಹಿತಿ ಪ್ರಕಾರ, ಈ ನಾಲ್ವರು ಯುವಕರು ಸರಿಯೂ ನದಿಯ ಗುಪ್ತಾರ್ ಘಾಟ್​ನಲ್ಲಿ ದೋಣಿಯೊಂದನ್ನು ಏರಿ ನದಿ ಮಧ್ಯದಲ್ಲಿ ಮಟನ್​ ಬೇಯಿಸಿಕೊಂಡು, ತಣ್ಣನೆಯ ಬಿಯರ್​ ಹಿರಿದ್ದಾರೆ. ಹಾಗೂ ಇದನ್ನು ವಿಡಿಯೋ ಮಾಡಿ ತಮ್ಮ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರ ಧಾರ್ಮಿಕ ಭಾವನೆಗೆ ಘಾಸಿ ಉಂಟಾದ ಹಿನ್ನಲೆಯಲ್ಲಿ ಈ ಯುವಕರ ಮೇಲೆ ದೂರು ದಾಖಲಾಗಿತ್ತು. ದೂರನ್ನು ಆಧರಿಸಿ ತನಿಖೆ ನಡೆಸಿದ ಉತ್ತರ ಪ್ರದೇಶ ಪೊಲೀಸರು ವಿಡಿಯೋನಲ್ಲಿದ್ದ ಮೂವರು ಯುವಕರನ್ನು ಬಂಧಿಸಿದ್ದು, ನಾಲ್ಕನೆಯವನಿಗಾಗಿ ಬಲೆ ಬೀಸಿದ್ದಾರೆಂದು ಹೇಳಲಾಗುತ್ತಿದೆ.
ನೆಟ್ಟಿಗರ ರಿಯಾಕ್ಷನ್​ ಹೇಗಿದೆ?
ಈ ಯುವಕರು ಬಿಯರ್ ಹೀರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್​ ವೈರಲ್​ ಆಗಿ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿತ್ತು. ಏ..ಹುಚ್ಚರ ನೀವು ಪ್ರಭು ಶ್ರೀರಾಮನ ಆಸ್ಥಾನದಲ್ಲಿ ಬಿಯರ್​ ಕುಡಿಯುತ್ತಿದ್ದಿರಿ, ನಿಮಗೆ ಖಂಡಿತ ತಕ್ಕ ಶಿಕ್ಷೆಯಾಗುತ್ತೆ ಎಂದು ಒಬ್ಬರು ಕಮೆಂಟ್​ ಮಾಡಿದ್ದರು.
ಉತ್ತರ ಪ್ರದೇಶ ಪೊಲೀಸರು ನಿಮ್ಮನ್ನು ಖಂಡಿತ ಸುಮ್ಮನೆ ಬಿಡುವುದಿಲ್ಲ ಎಂದು ಇನ್ನೊಬ್ಬರು ಹೇಳಿದ್ದರು. ಆಯ್ತು ಬಿಯರ್​ ಕುಡಿಯಿರಿ, ಮಟನ್​ ತಿನ್ನಿರಿ; ಆದರೆ ಇದನ್ನು ಸೋಷಿಯಲ್​ ಮೀಡಿಯಾನಲ್ಲಿ ಏಕೆ ಹಂಚಿಕೊಳ್ಳುತ್ತಿರಿ. ಮುಂದೆ ತೊಂದತೆಯಾದರೆ ಯಾರು ಸಹಾಯಕ್ಕೆ ಬರುತ್ತಾರೆ? ಎಂದು ಮತ್ತೊಬ್ಬರು ಅಂದು ಪ್ರಶ್ನಿಸಿದ್ದರು, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net