ಪಿಣರಾಯಿ ನೇತೃತ್ವದ ಎಲ್ಡಿಎಫ್ ಅನ್ನು ಮತ್ತೆ ಅಧಿಕಾರಕ್ಕೆ ಏರದಂತೆ ಮಾಡುವ, ರಾಹುಲ್ ಗಾಂಧಿ ನಾಯಕತ್ವದ ಕಾಂಗ್ರೆಸ್ ನಾಗಾಲೋಟಕ್ಕೂ ಅಂಕುಶ ಹಾಕುವ ಉದ್ದೇಶದಿಂದ ಎನ್ಡಿಎ ವಿಕಸಿತ ಕೇರಳಂ ಎಂಬ ಪರಿಕಲ್ಪನೆಯೊಂದಿಗೆ ಮತದಾರರನ್ನು ಓಲೈಸುತ್ತಿದೆ. ಮೂಲಸೌಕರ್ಯ, ಸಂಚಾರ ಸೌಲಭ್ಯ, ಕೊಚ್ಚಿ ಮೆಟ್ರೋ-ನಗರ ಸಾರಿಗೆ, ಆರೋಗ್ಯ, ಶಿಕ್ಷಣ, ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮ, ಉತ್ತಮ ಆಡಳಿತ ಎಂಬ ಭರವಸೆಯ ಮಾತುಗಳಿಗೆ ಮತದಾರನ ಕಿವಿಗೊಟ್ಟಾನೇ? ಪ್ರಧಾನಿ ನರೇಂದ್ರ ಮೋದಿ, ನಾಯಕಿ ಸ್ಮೃತಿ ಇರಾನಿ, ಬೆಂಗಳೂರು ಸಂಸದ ತೇಜಸ್ವಿ ಸೂರ್ಯ, ತಮಿಳುನಾಡಿನ ಫೈರ್ ಬ್ಯ್ರಾಂಡ್ ಅಣ್ಣಾಮಲೈ, ನಟಿ ಖುಷ್ಬೂ ಕೇರಳದಲ್ಲಿ ಸುತ್ತಾಡಿದ್ದಾರೆ. ಇವರ ಈ ನಡೆ ಮತವಾಗಿ ಬದಲಾದೀತೇ? ಶಬರಿಮಲೆ ವಿವಾದ ಕಮಲ ಪಡೆಗೆ ಶಕ್ತಿ ತುಂಬೀತೇ? ಕಾದುನೋಡಬೇಕು.