Ayan Ahmed Tanveer Case : ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿರುವ ಕ್ರೂರ ಘಟನೆ ದೇಶವನ್ನೇ ಬೆಚ್ಚಿಬೀಳಿಸಿದೆ. ನಾವು ಎಂತಹ ರಾಕ್ಷಸರ ನಡುವೆ ಬದುಕುತ್ತಿದ್ದೇವೆ ಎಂಬುದನ್ನು ಈ ಘಟನೆ ಬಯಲು ಮಾಡಿದೆ. ಹೊರಗೆ ಒಳ್ಳೆಯವನಂತೆ ಕಾಣುವ ವ್ಯಕ್ತಿ ದುಷ್ಕೃತ್ಯ ಎಸಗಿದಾಗ ಅವನೊಳಗೆ ಎಂತಹ ವಿಕೃತ ಆಲೋಚನೆಗಳು ಅಡಗಿವೆ ಎಂಬುದು ಬಯಲಾಗುತ್ತದೆ. ಇಂತಹ ಘಟನೆಗಳು ನಂಬಿಕೆ ಅನ್ನೋ ಪದಕ್ಕೆ ಕೊಡಲಿ ಏಟು ನೀಡುತ್ತಿವೆ. 20 ವರ್ಷ ಕೂಡ ತುಂಬದ ಹುಡುಗನೊಬ್ಬ ಪ್ರೀತಿಯ ಹೆಸರಿನಲ್ಲಿ ಅಪ್ರಾಪ್ತ ಹುಡುಗಿಯರನ್ನು ಬಲೆಗೆ ಬೀಳಿಸಿ, ಸುಳ್ಳು ಹೇಳಿ ಅವರನ್ನು ತನ್ನ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದ. ಅಲ್ಲದೆ, ಕಾಮದಾಟದ ವಿಡಿಯೋಗಳನ್ನು ಮಾಡಿ, ಅದನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತಿದ್ದ. ಈತನ ಕಾಮದ ಕಣ್ಣಿಗೆ ಸಿಲುಕಿದ್ದು, ಒಬ್ಬಿಬ್ಬರಲ್ಲ, ಸುಮಾರು 180 ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಲ್ಲದೆ, 350ಕ್ಕೂ ಹೆಚ್ಚು ವಿಡಿಯೋಗಳನ್ನು ಮಾಡಿದ್ದಾನೆ.