ಬುಡಕಟ್ಟು ಪ್ರದೇಶದಲ್ಲಿ ಧಾರ್ಮಿಕ ಮತಾಂತರಕ್ಕೆ ಯತ್ನಿಸಿದ್ರೆ, ಸೀದಾ ಜೈಲಿಗೆ: ಸಿಎಂ ಮೋಹನ್ ಯಾದವ್ ಎಚ್ಚರಿಕೆ | religious conversion
ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್
Published on:
Copied
Follow Us
ಭೋಪಾಲ್: ಬುಡಕಟ್ಟು ಪ್ರದೇಶಗಳಲ್ಲಿ ಜನರನ್ನು ಧಾರ್ಮಿಕವಾಗಿ ಮತಾಂತರಿಸಲು(religious conversion) ಪ್ರಯತ್ನಿಸುವ ಸಂಘಟನೆಗಳಿಗೆ ನೇರವಾಗಿ ಎಚ್ಚರಿಕೆ ನೀಡಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ಅಂತಹ ಚಟುವಟಿಕೆ ಕಂಡು ಬಂದ್ರೆ ಸೀದಾ ಜೈಲಿಗೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.
ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಝಬುವಾ ಜಿಲ್ಲೆಯಲ್ಲಿ ಜು. 31ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಮತಾಂತರದಲ್ಲಿ ಭಾಗಿಯಾಗಿರುವವರು ಎಚ್ಚರಿಕೆಯಿಂದ ಆಲಿಸಬೇಕು. ಧಾರ್-ಝಬುವಾದಲ್ಲಿ ಯಾವುದೇ ಮಿಷನರಿ ಜನರನ್ನು ಮತಾಂತರಿಸಲು ಅವಕಾಶವಿಲ್ಲ ಎಂದು ನೇರವಾಗಿ ಕ್ರಿಶ್ಚಿಯನ್ ಮಿಶನರಿಗಳಿಗೆ ಸಂದೇಶ ನೀಡಿದ್ದಾರೆ.
ಮಿಶನರಿಗಳು ಜನರನ್ನು ಧಾರ್ಮಿಕ ಮತಾಂತರಗೊಳಿಸಿದರೆ, ನಮ್ಮ ಸರ್ಕಾರ ಅವರನ್ನು ಜೈಲಿಗೆ ಕಳುಹಿಸುತ್ತದೆ. ನಾವು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಇನ್ನೂ ಬಲವಂತ, ವಂಚನೆ ಮತ್ತು ಪ್ರಚೋದನೆಯ ಮೂಲಕ ಮತಾಂತರವನ್ನು ತಡೆಗಟ್ಟಲು ಜಾರಿಗೆ ತರಲಾದ ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ, 2021, ತಪ್ಪಿತಸ್ಥರೆಂದು ಕಂಡುಬಂದವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲು ಅವಕಾಶ ನೀಡುತ್ತದೆ (ಏಜೆನ್ಸೀಸ್).