ಅಯೋಧ್ಯೆಯ ಮೆಡಿಕಲ್ ಕಾಲೇಜಿನಲ್ಲಿ ಬಾಂಬ್ ತಯಾರಿಕೆಯ ನೋಟ್ಸ್ ಪತ್ತೆ: ಓರ್ವ ವಿದ್ಯಾರ್ಥಿಯನ್ನು ಬಂಧಿಸಿದ ಪೊಲೀಸರು | Bomb making notes
ಬಾಂಬ್ ತಯಾರಿಕೆ ನೋಟ್ಸ್
Published on:
Copied
Follow Us
ಲಖನೌ: ಅಯೋಧ್ಯೆಯ ರಾಜರ್ಷಿ ದಶರಥ್ ಸ್ವಾಯತ್ತ ರಾಜ್ಯ ವೈದ್ಯಕೀಯ ಕಾಲೇಜಿನಲ್ಲಿ ಬಾಂಬ್ ತಯಾರಿಸುವ ಸೂಚನೆಗಳನ್ನು ಹೊಂದಿರುವ ನೋಟ್ಸ್(Bomb making notes) ಪತ್ತೆಯಾದ ಬಳಿಕ ಶನಿವಾರ(ಆ. 01) ಎಂಬಿಬಿಎಸ್ ಪ್ರಥಮ ವರ್ಷದ ಓರ್ವ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ವೈದ್ಯಕೀಯ ಕಾಲೇಜಿನ ಎಕ್ಸ್-ರೇ ಕೊಠಡಿಯಿಂದ ಈ ನೋಟ್ಟ್ ವಶಪಡಿಸಿಕೊಳ್ಳಲಾಗಿದ್ದು, ಬಳಿಕ ಕಾಲೇಜು ಅಧಿಕಾರಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ವರದಿ ಪ್ರಕಾರ, ಶುಕ್ರವಾರ ರಾತ್ರಿ ಎಕ್ಸ್-ರೇ ಕೋಣೆಯಲ್ಲಿ ಕರ್ತವ್ಯದಲ್ಲಿದ್ದ ಪ್ರಥಮ ವರ್ಷದ ವಿದ್ಯಾರ್ಥಿ ಸರ್ಫರಾಜ್ ಆ ನೋಟ್ಸ್ ಬರೆದಿರಬಹುದು ಎಂದು ತಿಳಿದುಬಂದಿದೆ.
ಉತ್ತರ ಪ್ರದೇಶದ ಬಲರಾಂಪುರದ ನಿವಾಸಿಯಾದ ಸರ್ಫರಾಜ್‌ನನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಜೊತೆಗೆ ಸರ್ಫರಾಜ್ ಜೊತೆ ಕರ್ತವ್ಯದಲ್ಲಿದ್ದ ಇನ್ನಿಬ್ಬರನ್ನು ಸಹ ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಕೈಬರಹದ ನೋಟ್ಸ್ ಬರಹವು, ಸ್ಫೋಟಕವನ್ನು ತಯಾರಿಸಲು ಬೇಕಾದ ಪದಾರ್ಥಗಳನ್ನು ವಿವರಿಸುತ್ತದೆ. ಇದು ಗೇಜ್ ತಂತಿ, ಅಮೋನಿಯಂ ಕಾರ್ಬೋನೇಟ್, ಕೆಂಪು ರಂಜಕ, ಕೆಂಪು ಸಲ್ಫೈಡ್, ನೈಟ್ರಿಕ್ ಆಮ್ಲ, ಇತ್ಯಾದಿ ವಸ್ತುಗಳನ್ನು ಬಾಂಬ್ ತಯಾರಿಕೆಗೆ ಬೇಕಾದ ಮತ್ತು ಮಾಡುವ ವಿಧಾನವನ್ನು ಪಟ್ಟಿ ಮಾಡುತ್ತದೆ.
ಇನ್ನೂ ಈ ಕುರಿತು ಮಾತನಾಡಿರುವ ಮೆಡಿಕಲ್ ಕಾಲೇಜು ಸಂಸ್ಥೆಯ ಮುಖ್ಯ ವೈದ್ಯಕೀಯ ಅಧೀಕ್ಷಕ(ಸಿಎಂಎಸ್) ಡಾ. ಅರವಿಂದ್ ಸಿಂಗ್, ದಾಖಲೆ ಪತ್ತೆಯಾದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಯಿತು. ತನಿಖೆ ನಡೆಯುತ್ತಿದೆ, ಮತ್ತು ಅದರ ಸಂಶೋಧನೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಪೊಲೀಸ್ ಅಧಿಕಾರಿಗಳು ಸಹ, ಈ ದಾಖಲೆಯು ಯಾವುದೇ ಕ್ರಿಮಿನಲ್ ಉದ್ದೇಶಕ್ಕೆ ಸಂಬಂಧಿಸಿದೆ ಎಂದು ಇಲ್ಲಿಯವರೆಗೆ ದೃಢಪಡಿಸಿಲ್ಲ. ಎಲ್ಲಾ ಸಂಭಾವ್ಯ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).