Attack on BSF: ಗಡಿಯಲ್ಲಿ BSF ಯೋಧರ ಮೇಲೆ ಭೀಕರ ದಾಳಿ: ಕೋಲುಗಳಿಂದ ಹಲ್ಲೆ, 8 ಮಂದಿ ಅರೆಸ್ಟ್

BSF jawans attacked Tripura
ಕಳ್ಳಸಾಗಣೆ ತಡೆಯಲು ಹೋದ BSF ಸಿಬ್ಬಂದಿ ಮೇಲೆ ಅಟ್ಯಾಕ್​
Published on: 
Summary

ಕಳ್ಳ ಸಾಗಣೆ ಬೆನ್ನಟ್ಟಿದ್ದ ಬೆಟಾಲಿಯನ್ ಸಿಬ್ಬಂದಿಯಿಂದ ಶಂಕಿತ ತಸ್ಕರನ ಬಂಧನ

ಯೋಧರ ಮೇಲೆ ಹಲ್ಲೆ ನಡೆಸಿ ವಾಹನ ಜಖಂಗೊಳಿಸಿದ ಕಳ್ಳಸಾಗಣೆದಾರ ಗುಂಪು

ಹಲ್ಲೆಯಲ್ಲಿ ಕಮಾಂಡರ್ ಸೇರಿದಂತೆ ಮೂವರು ಬಿಎಸ್‌ಎಫ್ ಯೋಧರಿಗೆ ಗಾಯ

Sepahijala Tripura BSF: ಭಾರತ-ಬಾಂಗ್ಲಾದೇಶ ಗಡಿ ಪ್ರದೇಶದಲ್ಲಿ ಅಕ್ರಮ ಕಳ್ಳಸಾಗಣೆಯನ್ನು ತಡೆಯಲು ತೆರಳಿದ್ದ ಗಡಿ ಭದ್ರತಾ ಪಡೆಯ (BSF) ಯೋಧರ ಮೇಲೆ ತಸ್ಕರರ ಗುಂಪೊಂದು ಭೀಕರವಾಗಿ ದಾಳಿ ನಡೆಸಿರುವ ಘಟನೆಯು ತ್ರಿಪುರಾದಲ್ಲಿ ವರದಿಯಾಗಿದೆ.

ಬಿಎಸ್‌ಎಫ್‌ನ 49ನೇ ಬೆಟಾಲಿಯನ್ ಸಿಬ್ಬಂದಿ ಗಡಿಯಲ್ಲಿ ಅಕ್ರಮ ಸರಕು ಸಾಗಣೆಯಲ್ಲಿ ತೊಡಗಿದ್ದ ತಸ್ಕರರನ್ನು ಬೆನ್ನಟ್ಟಿ, ಹೆಫ್ಜುರ್ ರೆಹಮಾನ್ ಎಂಬಾತನನ್ನು ವಶಕ್ಕೆ ಪಡೆದಿದ್ದರು. ಇದರಿಂದ ಕೆರಳಿದ ಸ್ಥಳೀಯ ದುಷ್ಕರ್ಮಿಗಳ ಗುಂಪು ರಸ್ತೆ ತಡೆ ನಡೆಸಿ, ಅದೇ ಮಾರ್ಗವಾಗಿ ವಾಹನದಲ್ಲಿ ತೆರಳುತ್ತಿದ್ದ ಬಿಎಸ್‌ಎಫ್ ಜವಾನರ ಮೇಲೆ ಬಾಂಬ್, ಲಾಠಿ ಹಾಗೂ ಬಿದಿರಿನ ಕೋಲುಗಳಿಂದ ಏಕಾಏಕಿ ಭೀಕರ ದಾಳಿ ನಡೆಸಿದೆ.

ಕಮಾಂಡರ್ ಮೇಲೂ ಹಲ್ಲೆ

ಈ ಹಠಾತ್ ದಾಳಿಯಲ್ಲಿ ಕಂಪನಿ ಕಮಾಂಡರ್ ಸೇರಿದಂತೆ ಮೂವರು ಬಿಎಸ್‌ಎಫ್ ಯೋಧರು ತೀವ್ರವಾಗಿ ಗಾಯಗೊಂಡಿದ್ದಾರೆ. ದಾಳಿಕೋರರು ಯೋಧರ ಸೇನಾ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ಯತ್ನಿಸಿದ್ದಲ್ಲದೆ, ಅವರು ಬಂದಿದ್ದ ಸರ್ಕಾರಿ ವಾಹನವನ್ನು ಸಂಪೂರ್ಣವಾಗಿ ಜಖಂಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಅಮ್ಮಾ ಮನೆಗೆ ಕರ್ಕೊಂಡು ಹೋಗು! ಕೊನೆಗೂ 3 ವರ್ಷದ ಕಂದನ ಕಣ್ಣೀರಿಗೆ ಸಿಕ್ಕಿತಾ ನ್ಯಾಯ? | Child Custody

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಆದೇಶ

ಈ ಘಟನೆಯನ್ನು ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ತೀವ್ರವಾಗಿ ಖಂಡಿಸಿದ್ದಾರೆ. ದೇಶದ ಗಡಿ ಕಾಯುವ ಯೋಧರ ಮೇಲೆ ದಾಳಿ ನಡೆಸಿದ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 8 ಮಂದಿ ಆರೋಪಿಗಳನ್ನು ಬಂಧಿಸಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ.