

Asian Games: ಜಪಾನ್ನಲ್ಲಿ ನಡೆಯುತ್ತಿರುವ 2026 ಏಷ್ಯನ್ ಗೇಮ್ಸ್ನಲ್ಲಿ 4x400 ಮೀಟರ್ ರಿಲೇಯಲ್ಲಿ ಮಹಿಳೆಯರ ತಂಡ ಮೊದಲ ಚಿನ್ನದ ಪದಕ ಗೆದ್ದಿದ್ದು, ಭಾರತದ ಪದಕಗಳ ಸಂಖ್ಯೆ ಇಂದಿಗೆ 52ಕ್ಕೆ ಏರಿದೆ. ಮಂಗಳವಾರ ಒಂದೇ ದಿನವೇ ಒಟ್ಟು ಆರು ಪದಕಗಳನ್ನು ಗೆದ್ದಿದೆ.
4x100 ಮೀಟರ್ ರಿಲೇ ಸ್ಪರ್ಧೆಯಲ್ಲಿ ವಿತ್ಯ ರಾಮರಾಜ್, ಕಿರಣ್, ಪ್ರಾಚಿ ಹಾಗೂ ಪೂವಮ್ಮ ಮಚೆಟ್ಟಿರ ಅವರ ತಂಡವು 3:29.69 ಸಮಯದೊಂದಿಗೆ ಚಿನ್ನ ಗೆದ್ದಿದೆ. ಜೊತೆಗೆ ಮಹಿಳೆಯರ 'ಟ್ರ್ಯಾಪ್' ಸ್ಪರ್ಧೆಯಲ್ಲಿ ನೀರು ಧಾಂದಾ ಚಿನ್ನದ ಪದಕ ಗೆಲ್ಲುವ ಮೂಲಕ, ಕ್ರೀಡಾಕೂಟದಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಮೊದಲಿಗರಾದರು.
ಏತನ್ಮಧ್ಯೆ, ಭಾರತ ಪುರುಷರ 4x400 ಮೀಟರ್ ರಿಲೇ ಮತ್ತು ಮಿಶ್ರ 4x100 ಮೀಟರ್ ರಿಲೇ ಸ್ಪರ್ಧೆಗಳಲ್ಲಿಯೂ ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಇದಕ್ಕೂ ಮೊದಲು, ಮಹಿಳೆಯರ ಹೈಜಂಪ್ ಫೈನಲ್ ನಲ್ಲಿ 1.84 ಮೀಟರ್ ಜಿಗಿತದೊಂದಿಗೆ ಪೂಜಾ ಸಿಂಗ್ ಮತ್ತು ಪುರುಷರ 5000 ಮೀಟರ್ ಸ್ಪರ್ಧೆಯಲ್ಲಿ ಗುಲ್ವೀರ್ ಸಿಂಗ್ ಅವರು ಕಂಚಿನ ಪದಕವನ್ನು ಗೆದ್ದುಕೊಂಡರು (ಏಜೆನ್ಸೀಸ್).