ಈ ವಿವಾದಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು, ಸ್ಥಳೀಯ ಪತ್ರಿಕೆಯೊಂದರಲ್ಲಿ ಅನುರಾಗ್ ಅವರ ತಂದೆ ನೀಡಿರುವ ಪ್ರಕಟಣೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ನೋಟಿಸ್ನಲ್ಲಿ, ನನಗೆ ನನ್ನ ಮಗ ಅನುರಾಗ್ ಮತ್ತು ಸೊಸೆ ರಿತಿಕಾ ಚೌಹಾಣ್ ಅವರೊಂದಿಗೆ ಇನ್ನು ಮುಂದೆ ಯಾವುದೇ ಸಂಬಂಧವಿಲ್ಲ. ಭವಿಷ್ಯದಲ್ಲಿ ಅವರ ಯಾವುದೇ ಕ್ರಿಯೆಗಳಿಗೆ ನಮ್ಮ ಕುಟುಂಬ ಜವಾಬ್ದಾರಿಯಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಈ ಪ್ರಕಟಣೆ ನಿಜವೇ ಅಥವಾ ಸುಳ್ಳೇ ಎಂಬ ಚರ್ಚೆ ಒಂದು ಕಡೆ ನಡೆಯುತ್ತಿದ್ದರೆ, ಕುಟುಂಬದ ಈ ಕಠಿಣ ನಿರ್ಧಾರ ಎಲ್ಲರನ್ನು ಬೆಚ್ಚಿಬೀಳಿಸಿದೆ.