ಎಐಎಡಿಎಂಕೆಗೆ ಮತ್ತೊಂದು ಶಾಕ್​: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿ ವಿಜಯಭಾಸ್ಕರ್: ಅಂಗೀಕರಿಸಿದ ಸ್ಪೀಕರ್ | AIADMK

ಸಿ.ವಿಜಯಭಾಸ್ಕರ್ ರಾಜೀನಾಮೆ ಸಲ್ಲಿಸಿರುವುದು.
ಸಿ.ವಿಜಯಭಾಸ್ಕರ್ ರಾಜೀನಾಮೆ ಸಲ್ಲಿಸಿರುವುದು.
Published on
ಚೆನ್ನೈ: ತಮಿಳುನಾಡಿನ ಎಐಎಡಿಎಂಕೆ(AIADMK) ಪಕ್ಷದಲ್ಲಿ ರಾಜೀನಾಮೆ ಪರ್ವ ಮುಂದುವರೆದಿದ್ದು, ಇಂದು(ಜೂ. 16) ಮಾಜಿ ಸಚಿವ ಮತ್ತು ವಿರಳಿಮಲೈ ಶಾಸಕ ಸಿ ವಿಜಯಭಾಸ್ಕರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ವಿಧಾನಸಭೆ ಸ್ಪೀಕರ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಎಂದು ವರದಿಯಾಗಿದೆ.
ವಿಜಯಭಾಸ್ಕರ್ ಅವರು ತಮಿಳುನಾಡು ಸಚಿವಾಲಯದಲ್ಲಿ ವಿಧಾನಸಭಾ ಸ್ಪೀಕರ್ ಜೆಸಿಡಿ ಪ್ರಭಾಕರ್ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು. ನಂತರ ಸ್ಪೀಕರ್ ಅವರ ರಾಜೀನಾಮೆಯನ್ನು ಅಂಗೀಕರಿಸಿದರು. ಒಂದು ತಿಂಗಳೊಳಗೆ ರಾಜೀನಾಮೆ ನೀಡಿದ ಐದನೇ ಎಐಎಡಿಎಂಕೆ ಶಾಸಕರಿವರು.
ಎಐಎಡಿಎಂಕೆಯೊಳಗಿನ ಆಂತರಿಕ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದಕ್ಕೂ ಮೊದಲು ನಾಲ್ವರು ಶಾಸಕರು ರಾಜೀನಾಮೆ ನೀಡಿ ನಂತರ ಆಡಳಿತಾರೂಢ ಟಿವಿಕೆ ಸೇರಿದ್ದರು. ಪುದುಕೊಟ್ಟೈ ಜಿಲ್ಲೆಯ ಪ್ರಮುಖ ಎಐಎಡಿಎಂಕೆ ನಾಯಕರಾದ ವಿಜಯಭಾಸ್ಕರ್ ಅವರು ಮೊದಲು 2001 ರಲ್ಲಿ ವಿಧಾನಸಭೆ ಪ್ರವೇಶಿಸಿದರು ಮತ್ತು ನಂತರ 2011, 2016, 2021 ಮತ್ತು 2026 ರಲ್ಲಿ ವಿರಲಿಮಲೈ ಕ್ಷೇತ್ರದಿಂದ ಗೆದ್ದಿದ್ದರು.
ಕೋವಿಡ್ ಸಮಯದಲ್ಲಿ ತಮಿಳುನಾಡಿನ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದ ಸಿ ವಿಜಯಭಾಸ್ಕರ್ ರಾಜ್ಯದ ಪ್ರತಿಕ್ರಿಯೆಯನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಚುನಾವಣೆಯಲ್ಲಿ ಟಿವಿಕೆಯ ಅಲೆಯ ನಡುವೆಯೂ ವಿರಳಿಮಲೈ ಕ್ಷೇತ್ರದಿಂದ 62,073 ಮತಗಳ ವಿಧಾನಸಭೆಗೆ ಆಯ್ಕೆಯಾಗಿದ್ದರು.
2026ರ ವಿಧಾನಸಭಾ ಚುನಾವಣೆಯ ಬಳಿಕ ವಿಜಯಭಾಸ್ಕರ್ ಅವರು ಎಐಎಡಿಎಂಕೆ ಬಂಡಾಯ ಗುಂಪಿನೊಂದಿಗೆ ಗುರುತಿಸಿಕೊಂಡಿದ್ದರು. ಸಿಎಂ ವಿಜಯ್ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ಸಮಯದಲ್ಲಿ ಟಿವಿಕೆ ಪರವಾಗಿ ಮತ ಚಲಾಯಿಸಿದ್ದರು. ಬಳಿಕ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಎಐಎಡಿಎಂಕೆ ಜಿಲ್ಲಾ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಿದ್ದರು.
ಇನ್ನೂ ವಿಜಯಭಾಸ್ಕರ್ ಅವರು ತಮ್ಮ ಮುಂದಿನ ನಡೆಯನ್ನ ಬಿಟ್ಟುಕೊಟ್ಟಿಲ್ಲ. ಆಡಳಿತರೂಢ ಟಿವಿಕೆ ಸೇರುತ್ತಾರೋ? ಡಿಎಂಕೆಯೋ ಎಂಬುದು ಕಾದುನೋಡಬೇಕಿದೆ. ಅವರ ರಾಜೀನಾಮೆಯೊಂದಿಗೆ ಮುಂದೆ ತಮಿಳುನಾಡು ಸಿಎಂ ವಿಜಯ್ ಪ್ರತಿನಿಧಿಸಿದ್ದ ತಿರುಚ್ಚಿ ಪೂರ್ವ ಸೇರಿ ಒಟ್ಟು 6 ಕ್ಷೇತ್ರಗಳ ಉಪಚುನಾವಣೆಗೆ ಸಾಕ್ಷಿಯಾಗಲಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net