ನಾನು ಪಕ್ಷ ಬಿಡುವ ನಿರ್ಧಾರವನ್ನು ಕಳೆದ 2025ರ ಡಿಸೆಂಬರ್ 4 ರಂದೇ ಬಿಜೆಪಿ ಹೈಕಮಾಂಡ್ಗೆ ತಿಳಿಸಿದ್ದೆ. ಆದರೆ, ಚುನಾವಣೆಗಳ ಜವಾಬ್ದಾರಿ ಇದ್ದಿದ್ದರಿಂದ ಅಲ್ಲಿಯವರೆಗೂ ಮುಂದುವರಿಯುವಂತೆ ಪಕ್ಷದ ನಾಯಕರು ಕೇಳಿಕೊಂಡಿದ್ದರು. ಅದರಂತೆ ನನ್ನ ಜವಾಬ್ದಾರಿಯನ್ನು ಪೂರ್ಣಗೊಳಿಸಿ ಈಗ ಅಧಿಕೃತವಾಗಿ ಹೊರಬಂದಿದ್ದೇನೆ ಎಂದರು. ತಮಿಳುನಾಡಿನಲ್ಲಿ ಸದ್ಯ ಚಾಲ್ತಿಯಲ್ಲಿರುವ ವ್ಯಕ್ತಿ ಆರಾಧನೆ ಕೊನೆಗಾಣಿಸುವುದೇ ನನ್ನ ಹೊಸ ಪಕ್ಷದ ಮುಖ್ಯ ಉದ್ದೇಶ ಎಂದಿರುವ ಅಣಾಮಲೈ, ಇಲ್ಲಿ ಕೇವಲ ಒಬ್ಬ ನಾಯಕನ ಸುತ್ತ ರಾಜಕೀಯ ನಡೆಯಬಾರದು, ಸಾಮಾನ್ಯನ ರಾಜಕಾರಣ ಆರಂಭವಾಗಬೇಕು. ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ನನ್ನ ಹೊಸ ಪಕ್ಷವು ಒಂಟಿಯಾಗಿ ಸ್ಪರ್ಧಿಸಲಿದೆ ಎಂದು ಅವರು ಘೋಷಿಸಿದ್ದಾರೆ.