ಮಂಗಳವಾರ ನಡೆದ ಸಭೆಗಳಲ್ಲಿ ಅಣ್ಣಾಮಲೈ ಅವರ ರಾಜೀನಾಮೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಬದಲಿಗೆ, ತಮಿಳುನಾಡಿನಲ್ಲಿ ಅವರು ಹಮ್ಮಿಕೊಳ್ಳಲು ಯೋಜಿಸಿರುವ ಜನಸಂಪರ್ಕ ಅಭಿಯಾನಕ್ಕೆ ಸಹಕಾರ ನೀಡುವುದಾಗಿ ಬಿಜೆಪಿ ನಾಯಕರು ಭರವಸೆ ನೀಡಿದ್ದಾರೆ. ಆದರೆ, ಅಣ್ಣಾಮಲೈ ಆಪ್ತರ ಪ್ರಕಾರ, ಅವರಿಗೆ ಬಿಜೆಪಿಯಲ್ಲಿ ತಮ್ಮ ಭವಿಷ್ಯ ಉಜ್ವಲವಾಗಿದೆ ಎಂಬ ಭರವಸೆ ಉಳಿದಿಲ್ಲ. ಅವರಿಗೆ ರಾಜ್ಯಸಭಾ ಸ್ಥಾನದ ಆಫರ್ ನೀಡಲಾಗಿದ್ದರೂ, ಅದನ್ನು ಅವರು ನಯವಾಗಿಯೇ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.