ತನ್ನ ಕುಟುಂಬ ಮತ್ತು ನೆರೆಹೊರೆಯವರಿಗೆ ತಾನು ಭಾರತದ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಬ್ರಿಗೇಡಿಯರ್ ಎಂದು ನಂಬಿಸಿದ್ದಾನೆ. ಸುಳ್ಳು ಹೇಳಿ ಸುಮ್ಮನೆ ಕೂರದ ಆರ್ಯನ್ ಇದನ್ನು ನಿಜ ಮಾಡಲು ಮಾರ್ಕೆಟ್‌ನಲ್ಲಿ ಮಿಲಿಟರಿ ಆಫೀಸರ್ ಯೂನಿಫಾರ್ಮ್ ಖರೀದಿಸಿ, ಐಷಾರಾಮಿ ಕಾರೊಂದನ್ನು ಬಾಡಿಗೆಗೆ ಪಡೆದಿದ್ದಾನೆ. ಜೊತೆಗೆ, ದಿನಕ್ಕೆ 2,000 ರೂಪಾಯಿ ಬಾಡಿಗೆ ಕೊಟ್ಟು ಇಬ್ಬರು ಲೋಕಲ್ ಬೌನ್ಸರ್‌ಗಳನ್ನು ತನ್ನ NSG ಕಮಾಂಡೋಗಳು ಎಂದು ಬಾಡಿಗೆಗೆ ನೇಮಕ ಮಾಡಿಕೊಂಡಿದ್ದಾನೆ.