ಸುಡುವ ಬಿಸಿಲನಾಡಲ್ಲಿ ಸೇಬು ಬೆಳೆದ ರೈತ; ಅನಂತಪುರ ರೈತನ ಅದ್ಭುತ ಕೃಷಿ ಕ್ರಾಂತಿ..Apple Cultivation

Anantapur farmer apple cultivation
Anantapur farmer apple cultivation
Published on

ಪ್ರಮುಖ ಮುಖ್ಯಾಂಶಗಳು

  • ಬಿಸಿಲ ನಾಡಲ್ಲಿ ಸೇಬು ಬೆಳೆದು ರೈತರಿಗೆ ಮಾದರಿಯಾದ ರಮಣ ರೆಡ್ಡಿ
  • ಕೈಲಾಗದು ಬೇಡ ಎಂದವರನ್ನು ದಿಕ್ಕರಿಸಿ ಸೇಬು ಬೆಳೆದು ಲಾಭ ಪಡೆದುಕೊಳ್ತೊರುವ ರೈತ
  • ಬಿಸಿಲನಾಡು ಅನಂತಪುರದಲ್ಲಿ ಸೇಬು ಬೆಳೆದಿದ್ದು ಹೇಗೆ ಗೊತ್ತಾ?
ಹೈದರಾಬಾದ್​:  ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಎನ್ನುವ ಸಾಲುಗಳನ್ನು  ಆರ್. ಏನ್. ಜಯಗೋಪಾಲ್ ಅವರು ಡಾ ರಾಜ್​​ ಕುಮಾರ್​ ಅವರ ಬಂಗಾರದ ಮನುಷ್ಯ ಸಿನಿಮಾಗಾಗಿ ಬರೆದಿದ್ದು. ಮನಸ್ಸೊಂದಿದ್ದರೆ ಯಾವುದೇ ಕೆಲಸವಾದರೂ ಸರಿ ಅದು ಚಿಟಿಕೆ ಹೊಡೆಯುವಷ್ಟು ಸುಲಭ ಎನ್ನುವುದು ಹಿರಿಯರ ನಂಬಿಕೆ. ಇದನ್ನು ಆಂಧ್ರದ ರೈತರೊಬ್ಬರು ಸಾಬೀತು ಪಡಿಸಿದ್ದಾರೆ.
ಹೌದು ಆಂಧ್ರ ಪ್ರದೇಶದ ಅನಂತಪುರದ ರಮಣ ರೆಡ್ಡಿ ಎನ್ನುವ ರೈತ ರಾಯಲ್​ ಸೀಮಾ ನಂತಹ 45 ಡಿಗ್ರಿ ಸೆಲ್ಸಿಯಸ್​ ಬಿಸಿಲು ಇರುವ ಪ್ರದೇಶದಲ್ಲಿ, ಒಣ ಭೂಮಿಯಲ್ಲಿ ರಸಭರಿತ ಸೇಬನ್ನು ಬೆಳೆದು, ಕೃಷಿ ಕೆಲಸ ಬೇಡ, ಲಾಭ ಇಲ್ಲ, ಈ ನೆಲದಲ್ಲಿ ಸೇಬು ಬೆಳೆಯೋದ ಎಂದು ರಾಗ ಎಳೆದಿದ್ದ  ರೈತರಿಗೆ ಪರೋಕ್ಷವಾಗಿ ಗೆಲುವಿನ ಪಾಠ ಹೇಳಿಕೊಟ್ಟಿದ್ದಾರೆ

ಕೈ ಸುಟ್ಟುಕೊಂಡರು ಬಿಡದ ಛಲ

ಇದು ಆಧುನಿಕ ಜಗತ್ತು, ಕೃಷಿ ಕ್ಷೇತ್ರದಲ್ಲಿಯೂ ದಿನದಿಂದದಿನಕ್ಕೆ ನಾನಾ ರೀತಿಯಲ್ಲಿ ಹೊಸ ಹೊಸ ಪರಿಕರ, ಬೆಳೆಯುವ ವಿಧಾನಗಳು ಬದಲಾಗುತ್ತಿದೆ. ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ರೈತ ರಮಣ ರೆಡ್ಡಿ, ಕೃಷಿ  ವಿಜ್ಞಾನಿಗಳು ಹಾಗೂ ತನ್ನ ಮಿತ್ರರು ಬೇಡ ಈ ಕೆಲಸ ಆಗಲ್ಲ ಎನ್ನುವುದನ್ನು ವಿರೋಧಿಸಿ ಸೇಬು ಬೆಳೆದು, ಆಂಧ್ರದಲ್ಲಿ ಸಾಕಷ್ಟು ಲಾಭ ಗಳಿಸುತ್ತಿದ್ದಾರೆ.

ಸೇಬು ಬೆಳೆಯುವುದು ಸುಲಭದ ಹಾದಿಯಾಗಿರಲಿಲ್ಲ

ರಮಣ ರೆಡ್ಡಿ ರಸಭರಿತ ಸೇಬು ಬೆಳೆಯುವ ಹಠದ ಹಾದಿ ಶುರುವಾಗಿದ್ದು ಹೀಗೆ..
2020ರಲ್ಲಿ ಹಿಮಾಚಲ ಪ್ರದೇಶದಿಂದ ಸೇಬು ಸಸಿಗಳನ್ನು ಖರೀದಿಸಿ ಆಂಧ್ರಕ್ಕೆ ತಂದು  ತಮ್ಮ ಭೂಮಿಯಲ್ಲಿ ಬೆಳೆದರು.. ಆದರೆ ಮೊದಲು ತಂದ ಸಸಿಗಳು ನಿಂಬೆ ಹಣ್ಣಿನಷ್ಟು ಫಲ ಕೊಡಲಿಲ್ಲ.  8 ಲಕ್ಷ ರೂಪಾಯಿ ನಷ್ಟವಾಯ್ತು.
ಆದರೂ ಪೆಚ್ಚು ಮೊರೆ ಹಾಕಿ ಮೂಲೆಯಲ್ಲಿ ಕೂರದೆ ಅಥವಾ ಇನ್ನೂ ಕೈ ಸುಟ್ಟಿಕೊಳ್ಳೋದು ಬೇಡ ಎಂದು ಸುಮ್ಮನಾಗಲಿಲ್ಲ. ಮತ್ತೆ ಪ್ರಯತ್ನಿಸಿದರು.  'ಜೊತೆಗಿದ್ದವರು ಇನ್ನು ಮುಂದುವರೆಸೋದು ಬೇಡ ಎಂದರು. ಆದರೆ ನನಗೆ ರಿಸ್ಕ್​ ತೆಗೆದುಕೊಳ್ಳೋದೆ ಇಷ್ಟ ಹೀಗಾಗಿ ಮುಂದೇನು ಮಾಡೋದು ಎಂದು ಚಿಂತಿಸುತ್ತಿದೆ' ಎಂದು ಹೇಳಿದ್ದಾರೆ ರಮಣ ರೆಡ್ಡಿ
ಹೀಗೊಂದು ದಿನ ಇಸ್ರೇಲ್​ನಲ್ಲಿದ್ದ ನನ್ನ ಗೆಳೆಯನೊಬ್ಬನ ಜೊತೆ ಮಾತಾನಾಡುವ ವೇಳೆ ಸೇಬು ಬೆಳೆಯುವ ಬಗ್ಗೆ ಅಭಿಪ್ರಾಯ ಕೇಳಿದ್ದರಂತೆ. ಆತ ಅಲ್ಲಿನ ಕೃಷಿ ತಜ್ಞರ ಜೊತೆಗೆ ಮಾತನಾಡಿಸಿದ. ಅಲ್ಲಿಂದ ಶಾಖ ವಿರೋದಿ ಸಸ್ಯಗಳನ್ನು ಪಾರ್ಸೆಲ್  ಮಾಡಿಸಿದ್ದರಂತೆ. ಆರು ತಿಂಗಳು ಕಸಿ ಮಾಡಿ, 2024ರಲ್ಲಿ  ಹನಿ ನೀರಾವರಿ ಪದ್ಧತಿ ರೂಪಿಸಿಕೊಂಡು 600 ಸಸಿ ನೆಟ್ಟೆ. ಒಂದು ವರ್ಷದಲ್ಲಿ ಕೊಯ್ಲು ಬಂತು ಎಂದಿದ್ದಾರೆ.
ಈ ಸೇಬು ದೇಶಿಯ ಮಾರುಕಟ್ಟೆಯಲ್ಲಿ ಸೇಬು ಕಾಣದ ವೇಳೆ ಅಂದರೆ ಮಾರ್ಚ್​, ಏಪ್ರಿಲ್​ ಹಾಗೂ ಮೇ ತಿಂಗಳಲ್ಲಿ ಫಲ ನೀಡುತ್ತದೆ ಎಂದರು. ಇಷ್ಟೇ ಅಲ್ಲ ಅಬುಧಾಬಿಯಿಂದ ತಂದ ಖರ್ಜೂರವನ್ನು ಇವರ ತೋಟದಲ್ಲಿ ಕಾಣಬಹುದಾಗಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net