ಆಯಾಸದಿಂದ ವೇದಿಕೆ ಬಳಿ ಬಿದ್ದ ಕುಸಿದು ಬಿದ್ದ ಎಸ್​ಪಿಜಿ ಕಮಾಂಡೋ; ನಿಲ್ಲಿಸದೇ ಭಾಷಣ ಮುಂದುವರೆಸಿದ ಜೆ.ಪಿ.ನಡ್ಡಾ | SPG commando

ಎಸ್​ಪಿಜಿ ಕಮಾಂಡೋ ಕುಸಿದು ಬಿದ್ದಿರುವುದು
ಎಸ್​ಪಿಜಿ ಕಮಾಂಡೋ ಕುಸಿದು ಬಿದ್ದಿರುವುದು
Published on
ವಡೋದರಾ: ಗುಜರಾತ್​ನ ವಡೋದಾರದಲ್ಲಿ ಶನಿವಾರ(ನ. 29) 150ನೇ ರಾಷ್ಟ್ರೀಯ ಏಕತಾ ಯಾತ್ರೆಯ ಭಾಗವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮಾತನಾಡುವಾಗ ಅವರ ಎಸ್​ಪಿಜಿ ಕಮಾಂಡೋ(SPG commando) ಆಯಾಸದಿಂದ ವೇದಿಕೆ ಬಳಿಯೇ ಕುಸಿದು ಬಿದ್ದಿದ್ದಾರೆ. ಆದರೆ ಭಾಷಣ ನಿಲ್ಲಿಸದೇ ನಡ್ಡಾ ಮುಂದುವರೆಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗುತ್ತಿದೆ.
150 ನೇ ರಾಷ್ಟ್ರೀಯ ಏಕತಾ ಯಾತ್ರೆಯಲ್ಲಿ ಸರ್ದಾರ್‌ನ ಭಾಗವಾಗಿ ನಡ್ಡಾ ಮಾತನಾಡುತ್ತಿದ್ದ ಅಟ್ಲಾದಾರದಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ ಕಮಾಂಡೋ ದೀರ್ಘಕಾಲದವರೆಗೆ ನಿಂತ ನಂತರ ಆಯಾಸ ಅಥವಾ ದೈಹಿಕ ಅಸ್ವಸ್ಥತೆಯಿಂದಾಗಿ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.
ತಕ್ಷಣ ಸಹ ಭದ್ರತಾ ಸಹಾಯಕ್ಕೆ ಧಾವಿಸಿದ್ದು, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ವೈದ್ಯಕೀಯ ಆರೈಕೆಯನ್ನು ಮಾಡಿದ್ದಾರೆ. ಇನ್ನೂ ಕಮಾಂಡೋ ಅವರ ಸ್ಥಿತಿಯ ಹೊರತಾಗಿಯೂ, ಅವರನ್ನು ವಿಚಾರಿಸದೇ ನಡ್ಡಾ ತಮ್ಮ ಭಾಷಣವನ್ನು ಮುಂದುವರೆಸಿದ್ದಾರೆ.
ಭಾಷಣದಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಅವರು, ಕಾಂಗ್ರೆಸ್ ಪಕ್ಷವು ಸರ್ದಾರ್ ಪಟೇಲ್ ಅವರ ಕೊಡುಗೆಗಳನ್ನು ಅಳಿಸಿಹಾಕಲು ಪ್ರಯತ್ನಿಸಿದೆ. ದೇಶವನ್ನು ಒಗ್ಗೂಡಿಸುವಲ್ಲಿ ಪಟೇಲ್ ಅವರ ಪಾತ್ರವನ್ನು ಭವಿಷ್ಯದ ಪೀಳಿಗೆಗಳು ನೆನಪಿಸಿಕೊಳ್ಳುತ್ತಾರೆ. ಮತ್ತು ಮಹಾತ್ಮ ಗಾಂಧಿಯವರ ಕೋರಿಕೆಯ ಮೇರೆಗೆ ರಾಷ್ಟ್ರೀಯ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಜಮ್ಮು-ಕಾಶ್ಮೀರಕ್ಕಿದ್ದ 370ನೇ ವಿಧಿಯನ್ನು ತೆಗೆದುಹಾಕುವುದು ಪಟೇಲ್ ಅವರ ದೃಷ್ಟಿಕೋನವನ್ನು ಈಡೇರಿಸಿದೆ ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net