ಡಿ. 13ರಂದು ದಂತಕತೆ ಲಿಯೋನಲ್ ಮೆಸ್ಸಿ ಜೊತೆ ಪುಟ್ಬಾಲ್ ಆಡಲಿರುವ ಸಿಎಂ ರೇವಂತ್ ರೆಡ್ಡಿ | CM Revanth Reddy

ಸಿಎಂ ರೇವಂತ್ ರೆಡ್ಡಿ ಮತ್ತು ಲಿಯೋನಲ್ ಮೆಸ್ಸಿ
ಸಿಎಂ ರೇವಂತ್ ರೆಡ್ಡಿ ಮತ್ತು ಲಿಯೋನಲ್ ಮೆಸ್ಸಿ
Published on
ಹೈದರಾಬಾದ್​: ಪುಟ್ಬಾಲ್ ದಂತಕತೆ ಲಿಯೋನಲ್ ಮೆಸ್ಸಿ ಮುಂದಿನ ತಿಂಗಳು GOAT ಇಂಡಿಯಾ ಟೂರ್ 2025 ಭಾಗವಾಗಿ ಭಾರತ ಪ್ರವಾಸ ಕೈಗೊಳ್ಳುತ್ತಿದ್ದು, ಡಿ. 13ರಂದು ಹೈದರಾಬಾದ್​ನಲ್ಲಿ ಸಿಎಂ ರೇವಂತ್ ರೆಡ್ಡಿ(CM Revanth Reddy) ಜೊತೆ ಕ್ರೀಡಾಂಗಣದಲ್ಲಿ ಪುಟ್ಬಾಲ್ ಪಂದ್ಯವಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಹೈದರಾಬಾದ್‌ನ ಉಪ್ಪಲ್‌ನಲ್ಲಿರುವ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೆಸ್ಸಿಗೆ ಅತಿಥ್ಯ ನೀಡಲಿದ್ದು, ಆ ವೇಳೆ ಪ್ರದರ್ಶನದ ಭಾಗವಾಗಿ ಮೆಸ್ಸಿ ವಿರುದ್ಧ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಫುಟ್ಬಾಲ್ ಆಡಲಿದ್ದಾರೆ ಎನ್ನಲಾಗಿದೆ.
GOAT ಇಂಡಿಯಾ ಪ್ರವಾಸದ ಪಟ್ಟಿಯಲ್ಲಿ ಅಹಮದಾಬಾದ್ ಅನ್ನು ಪಟ್ಟಿಯಿಂದ ತೆಗೆದುಹಾಕಿದ ಬಳಿಕ ಹೈದರಾಬಾದ್ ಅನ್ನು ಸೇರಿಸಲಾಗಿದೆ, ಇದು ನಗರದ ವೇಗವಾಗಿ ಬೆಳೆಯುತ್ತಿರುವ ಜಾಗತಿಕ ಪ್ರೊಫೈಲ್ ಅನ್ನು ಪ್ರತಿಬಿಂಬಿಸುತ್ತದೆ. ಡಿ. 13ರ ಬೆಳಿಗ್ಗೆ ಕೋಲ್ಕತ್ತಾದ ಐಕಾನಿಕ್ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಪ್ರವಾಸ ಪ್ರಾರಂಭವಾಗಲಿದ್ದು, ನಂತರ ಮೆಸ್ಸಿ ಅದೇ ಸಂಜೆ ಎರಡನೇ ಹಂತದ ಆಚರಣೆಗಾಗಿ ಹೈದರಾಬಾದ್‌ಗೆ ತೆರಳಲಿದ್ದಾರೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಸಿಎಂ ಸರ್ಕಾರಿ ಶಾಲೆಗಳಲ್ಲಿ ದಾಖಲಾಗಿರುವ ಆಯ್ದ ವಿದ್ಯಾರ್ಥಿಗಳು ಮುಖ್ಯಮಂತ್ರಿಯೊಂದಿಗೆ ಆಟವಾಡುತ್ತಾರೆ ಎನ್ನಲಾಗಿದೆ. 2025 ಆಗಸ್ಟ್​ನಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ತನ್ನ ಕ್ರೀಡಾ ನೀತಿಯನ್ನು ಘೋಷಿಸಿದ ಸುಮಾರು ಮೂರು ತಿಂಗಳ ನಂತರ ಸಿಎಂ ರೇವಂತ್ ಅವರ ಘೋಷಣೆ ಬಂದಿದೆ. ಆಗಸ್ಟ್‌ನಲ್ಲಿ ಭಾರತ ಬಿಡ್ ಗೆದ್ದರೆ 2036 ರ ಒಲಿಂಪಿಕ್ಸ್‌ಗೆ ಹೈದರಾಬಾದ್ ಅನ್ನು ಸ್ಥಳವಾಗಿ ಪರಿಗಣಿಸುವಂತೆ ಸಿಎಂ ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net