ಮಳೆ ನೀರಿನಲ್ಲಿ ಕಾಣಿಸದ ಮೃತ್ಯುಕೂಪ: ತೆರೆದ ಚರಂಡಿಗೆ ಬಿದ್ದ ಮಕ್ಕಳ ವಿಡಿಯೋ ವೈರಲ್​! Children Falling into Drain

ತೆರೆದ ಚರಂಡಿಗೆ ಮಕ್ಕಳು ಬಿದ್ದ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ತೆರೆದ ಚರಂಡಿಗೆ ಮಕ್ಕಳು ಬಿದ್ದ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
Published on

ಪ್ರಮುಖ ಮುಖ್ಯಾಂಶಗಳು

  • ಮಳೆ ನೀರಿನಲ್ಲಿ ಕಾಣಿಸದ ಮೃತ್ಯುಕೂಪ
  • ತೆರೆದ ಚರಂಡಿಗೆ ಮಕ್ಕಳು ಬಿದ್ದ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
  • ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವ ಹಿನ್ನಲೆ, ರಸ್ತೆಗಳೆಲ್ಲಾ ಪೂರ್ತಿ ಮಳೆ ನೀರಿನಿಂದ ತುಂಬಿಹೋಗಿವೆ. ಇನ್ನೊಂದು ಕಡೆ ಸರಿಯಾಗಿ ಮುಚ್ಚಳ ಮುಚ್ಚದ ಒಳ ಚರಂಡಿಗಳು ಈ ಸಂದರ್ಭದಲ್ಲಿ ಮೃತ್ಯುಕೂಪಗಳಂತೆ ಕಂಡುಬರುತ್ತಿವೆ.
ಗುರುವಾರ (ಆ.6) ಸಂಜೆ ಶಾಲೆಯಿಂದ ಮನೆಯತ್ತ ಸಾಗುತ್ತಿದ್ದ ಮೂವರು ಶಾಲಾ ಮಕ್ಕಳು ಒಳಚರಂಡಿಯೊಂದರಲ್ಲಿ ಬಿದ್ದಿರುವ (Children Falling into Drain) ಭೀಕರ ಘಟನೆಯೊಂದು ಸೆರೆಯಾಗಿದ್ದು, ಸದ್ಯ ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ಸಕ್ಕತ್​ ವೈರಲ್​ ಆಗುತ್ತಿದೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ, ಮಕ್ಕಳ ಒಂದು ಗುಂಪು ಶಾಲೆಯಿಂದ ಮನೆಯತ್ತ ಪ್ರಯಾಣ ಬೆಳೆಸಿದ್ದಾರೆ. ತೀವ್ರ ಮಳೆಯಿಂದಾಗಿ ರಸ್ತೆತುಂಬೆಲ್ಲಾ ಮಳೆ ನೀರು ಶೇಖರಣೆಯಾಗಿದೆ. ಟ್ರಾಫಿಕ್​ನಲ್ಲಿ ಸಿಕ್ಕಿರುವ ಮಕ್ಕಳು ನಿಧಾನವಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾರೆ.

ಆದರೆ ರಸ್ತೆ ಮಧ್ಯೆಯಲ್ಲಿದ್ದ ಒಳಚರಂಡಿಯೊಂದರ ಬಾಯಿ ಮುಚ್ಚಿರದ ವಿಚಾರ ತಿಳಿಯದ ಮೂರು ಮಕ್ಕಳು ಒಮ್ಮೆಲೇ ಚರಂಡಿಯಲ್ಲಿ ಬಿದ್ದಿದ್ದಾರೆ. ಆದರೆ ಸಮಯಕ್ಕೆ ಸರಿಯಾಗಿ ಪ್ರತಿಕ್ರಿಯಿಸಿದ ಸ್ಥಳೀಯರು ಮೂವರು ಮಕ್ಕಳನ್ನು ಕೂಡಲೇ ಚರಂಡಿಯಿಂದ ಹೊರತೆಗೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.

ಒಂದು ವೇಳೆ ಮಕ್ಕಳಿಗೆ ರಕ್ಷಣೆ ದೊರೆಯುವುದು ಸ್ವಲ್ಪ ತಡವಾಗಿದ್ದರೂ, ಅವರ ಜೀವಕ್ಕೆ ಅಪಾಯವಾಗುತ್ತಿತ್ತು ಎನ್ನುವುದು ಪ್ರತ್ಯಕ್ಷದರ್ಶಿಗಳ ಅಭಿಪ್ರಾಯವಾಗಿದೆ.


ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ, ಲಕ್ಷಾಂತರ ವೀಕ್ಷಣೆಯನ್ನು ಪಡೆಯುತ್ತಿದ್ದು, ನೆಟ್ಟಿಗರು ಪಾಲಿಕೆ ಆಡಳಿತದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಜನರ ಜೀವ ಹೋಗಲೆಂದೆ ನಮ್ಮ ಪಾಲಿಕೆ ಅಧಿಕಾರಿಗಳು ಈ ಚರಂಡಿಗಳ ಬಾಯಿಯನ್ನು ಮುಚ್ಚಿರುವುದಿಲ್ಲ ಎಂದು ಒಬ್ಬರು ವ್ಯಂಗ್ಯಾತ್ಮಕವಾಗಿ ಕಮೆಂಟ್​ ಮಾಡಿದ್ದಾರೆ.
ಪಾಪಾ, ಆ ಮಕ್ಕಳು ಮನೆ ಸೇರುವ ಬದಲು ಮಸಣ ಸೇರುತ್ತಿದ್ದರು. ಆದರೆ ಜನರ ಸಮಯಪ್ರಜ್ಞೆಯಿಂದ ಅವರ ಜೀವ ಉಳಿದಿದೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಈ ಘಟನೆಗೆ ಜವಾಬ್ದಾರಾದ ಅಧಿಕಾರಿಗಳನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕೆಂದು ಮತ್ತೊಬ್ಬರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net