ಅಜ್ಜಿ ಅಂತ್ಯಸಂಸ್ಕಾರಕ್ಕೆ ಬರಲಿದ್ದಾನೆ ಅಮೃತ್​ಪಾಲ್​ ಸಿಂಗ್​: ಒಂದು ದಿನದ ಪರೋಲ್​ ನೀಡಿದ ಕೋರ್ಟ್​; 3 ವರ್ಷಗಳ ಬಳಿಕ ಪಂಜಾಬ್‌ಗೆ ಕಾಲಿಡಲಿರುವ ಖಲಿಸ್ತಾನಿ ನಾಯಕ! Amritpal Singh

An Amritsar court has granted a one-day parole to MP Amritpal Singh, currently lodged in Assam's Dibrugarh jail, to attend his grandmother's funeral.
ಅಸ್ಸಾಂನ ದಿಬ್ರುಗಢ ಜೈಲಿನಲ್ಲಿರುವ ಸಂಸದ ಅಮೃತ್‌ಪಾಲ್ ಸಿಂಗ್‌ಗೆ ಅಜ್ಜಿಯ ಅಂತ್ಯಸಂಸ್ಕಾರಕ್ಕೆ ಹಾಜರಾಗಲು ಅಮೃತಸರ್ ನ್ಯಾಯಾಲಯ ಒಂದು ದಿನದ ಪರೋಲ್ ಮಂಜೂರು ಮಾಡಿದೆ.
Published on: 

ಪಂಜಾಬ್​: ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಹಾಗೂ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (UAPA) ಅಡಿಯಲ್ಲಿ ಬಂಧಿತನಾಗಿರುವ ಸಂಸದ ಹಾಗೂ ಖಲಿಸ್ತಾನಿ ನಾಯಕ ಅಮೃತ್​ಪಾಲ್​ ಸಿಂಗ್​ಗೆ ಅಮೃತಸರ್​ ನ್ಯಾಯಾಲಯ ಒಂದು ದಿನದ ಪರೋಲ್​ ನೀಡಿದ್ದು, ಮೂರು ವರ್ಷಗಳ ಬಳಿಕ ಅಮೃತ್​ಪಾಲ್​ ಪಂಜಾಬ್​ಗೆ ಕಾಲಿಡಲಿದ್ದಾರೆ.

ದೇಶಕ್ಕೆ ಕಂಟಕ ತರುವ ಚಟುವಟಿಕೆಯಲ್ಲಿ ಭಾಗಿಯಾದ ಅರೋಪದ ಹಿನ್ನಲೆ ಅಮೃತ್​ಪಾಲ್​ನನ್ನು ಅಸ್ಸಾಂನ ದಿಬ್ರುಗಢ ಜೈಲಿನಲ್ಲಿಡಲಾಗಿದ್ದು, ಅವರ ಅಜ್ಜಿ ಚರಣ್​ ಕೌರ್​ ಸಾವನ್ನಪ್ಪಿದ ಹಿನ್ನಲೆ, ಅಂತ್ಯಸಂಸ್ಕಾರಕ್ಕೆ ಹಾಜರಾಗಲು ಕೋರ್ಟ್​ ಅನುಮತಿ ನೀಡಿದ್ದು ಒಂದು ದಿನದ ಪರೋಲ್​ಗೆ ಸಮ್ಮತಿಸಿದೆ.

ಸಿನಿಮೀಯ ಶೈಲಿಯಲ್ಲಿ ಅರೆಸ್ಟ್​ ಆಗಿದ್ದ ಅಮೃತ್​ಪಾಲ್!

ದೇಶವಿರೋಧಿ ಹೇಳಿಕೆ, ಖಲಿಸ್ತಾನಿ ಸಮರ್ಥನೆ ಹಾಗೂ ಮಾದಕ ವಸ್ತುಗಳ ವ್ಯಾಪಾರಕ್ಕೆ ಸೇರಿದಂತೆ ಹಲವು ಗಂಭೀರ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂಸದ ಅಮೃತ್​ಪಾಲ್ ಸಿಂಗ್​ನನ್ನು ಪಂಜಾಬ್​ ಪೊಲೀಸರು ಬಂಧಿಸಿದ್ದೆ ದೊಡ್ಡ ಸಾಹಸವಾಗಿತ್ತು.

ತನ್ನ ವಿರುದ್ಧ ವಾರೆಂಟ್ ಜಾರಿಯಗುತ್ತಿದ್ದಂತೆ ಪ್ರತಿದಿನ ಬೇರೆ-ಬೇರೆ ವೇಷದಲ್ಲಿ ಹಾಗೂ ಬೇರೆ-ಬೇರೆ ವಾಹನದಲ್ಲಿ ಪರಾರಿಯಾಗುತ್ತಿದ್ದ ಈ ಅಮೃತ್​ಪಾಲ್​ನನ್ನು ಸತತ ಒಂದು ತಿಂಗಳಗಳ ವರೆಗೆ ಹಿಂಬಾಲಿ, ಹರಸಾಹಸ ಪಟ್ಟ ಪಂಜಾಬ್​ ಪೊಲೀಸರು ಏಪ್ರಿಲ್​ 23, 2023 ರಂದು ವಶಕ್ಕೆ ಪಡೆದುಕೊಂಡರು.

ಆದರೆ, ತಮ್ಮ ನಾಯಕನ ಬಂಧನದಿಂದ ಸಿಟ್ಟಿಗೆದ್ದ ಜನ ಅಮೃತ್​ಪಾಲ್​ನನ್ನು ಬಂಧಿಸಲಾಗಿದ್ದ ಮೊಗಾ ಠಾಣೆಗೆ ಮುತ್ತಿಗೆ ಹಾಕಲು ಯೋಜಿಸಿ, ಶಸ್ತ್ರಾಸ್ತ್ರಗಳ ಸಮೇತ ದಾಳಿ ನಡೆಸಿದ್ದರು. ಈ ಬಗ್ಗೆ ಮೊದಲೇ ಮಾಹಿತಿ ಹೊಂದಿದ್ದ ಪೊಲೀಸರು ಆತನನ್ನು ಪಂಜಾಬ್​ನಿಂದ ಆಚೆ ಕರೆದೊಯ್ದರು. ನಂತರ ಭದ್ರತೆ ದೃಷ್ಟಿಯಿಂದ ಅಮೃತ್​ಪಾಲ್​ನನ್ನು ಅಸ್ಸಾಂ ಜೈಲಿಗೆ ಹಸ್ತಾಂತರಿಸಲಾಯಿತು.

Also Read
ಎನ್ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​​: 'ಆಲಿಸ್ ಚೀನಿ ಗೂಢಚಾರಿ ಎಂಬುದಕ್ಕೆ ಸಾಕ್ಷ್ಯವಿಲ್ಲ': ಅಟಾರ್ನಿ ಜನರಲ್ ಹೇಳಿದ್ದೇನು? Jensen Huang
An Amritsar court has granted a one-day parole to MP Amritpal Singh, currently lodged in Assam's Dibrugarh jail, to attend his grandmother's funeral.

ಜೈಲಿನಲ್ಲಿದ್ದೆ ಚುನಾವಣೆ ಗೆದ್ದಿದ್ದ ಭೂಪ!

ಹಲವು ಆರೋಪಗಳಲ್ಲಿ ಬಂಧಿತನಾಗಿದ್ದ ಅಮೃತ್​ಪಾಲ್​ ಸಿಂಗ್​ 2024 ರ ಲೋಕಸಭಾ ಚುನಾವಣೆಯಲ್ಲಿ ಕಡೂರ್​ ಸಾಹೀಬ್​ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್​ನ ಕುಲ್ಬೀರ್ ಸಿಂಗ್ ಜಿರಾ ಅವರನ್ನು ಭರ್ತಿ 1,97,120 ಮತಗಳ ಅಂತರದಲ್ಲಿ ಸೋಲಿಸಿ ಅಮೃತ್​ಪಾಲ್ ಸಂಸದನಾಗಿ ಆಯ್ಕೆಯಾಗಿದ್ದರು. ಆದರೆ, ಅಸ್ಸಾಂ ಜೈಲಿಗೆ ಇವರನ್ನು ವರ್ಗಾವಣೆ ಮಾಡಿದ ದಿನದಿಂದ ಈ ಕ್ಷೇತ್ರಕ್ಕೆ ಸಂಸದರ ಕೊರತೆ ಉಂಟಾಗಿದೆ, (ಏಜೆನ್ಸೀಸ್​).