ಅಮರನಾಥ ಯಾತ್ರೆಗೆ ಹೋಗೋಕೆ ಪ್ಲ್ಯಾನ್ ಮಾಡಿದ್ದೀರಾ?; ಈ ದಿನದಿಂದ ರಿಜಿಸ್ಟ್ರೇಷನ್​ ಶುರು..Amarnath Yatra 2026

Amarnath Yatra 2026
Amarnath Yatra 2026
Published on

ಪ್ರಮುಖ ಮುಖ್ಯಾಂಶಗಳು

  • ಏಪ್ರಿಲ್ 15 ರಿಂದ ದೇಶದ 554 ಬ್ಯಾಂಕ್ ಶಾಖೆಗಳಲ್ಲಿ ಅಮರನಾಥ ಯಾತ್ರೆಗೆ ನೋಂದಣಿ ಆರಂಭ
  • ಆಧಾರ್ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ, 13 ರಿಂದ 70 ವರ್ಷದವರಿಗೆ ಅವಕಾಶ
  • ಪಹಲ್ಗಾಮ್ ಮತ್ತು ಬಾಲ್ಟಾಲ್ ಮಾರ್ಗಗಳ ಮೂಲಕ ಪ್ರಯಾಣಿಸಬಹುದು
Amarnath Yatra 2026: ಜಮ್ಮು ಮತ್ತು ಕಾಶ್ಮೀರದ ಅನಂತ್​ ನಾಗ್​ ಜಿಲ್ಲೆಯ ಪಹಲ್ಗಾಮ್​ನಲ್ಲಿರುವ ಹಿಂದೂ ದೇವಾಲಯವಾದ ಅಮರನಾಥನ ದೇಗುಲ ಭಾರಿ ಪ್ರಸಿದ್ಧ. ಇದು ಒಂದು ಗುಹೆಯಾಗಿದ್ದು, ಹಿಮ ನದಿ, ಪರ್ವತದಿಂದ ಆವೃತವಾಗಿದೆ. ಮಹಾಮಾಯ ಶಕ್ತಿ ಪೀಠದ ವಾಸಸಾಸ್ಥಾನವಾದ ಈ ಗುಹೆ, ಭಾರತದ 51 ಶಕ್ತಿ ಪೀಠಗಳಲ್ಲಿ ಒಂದು. ಇಲ್ಲಿಗೆ ಪ್ರತಿ ವರ್ಷವು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಯಾತ್ರೆ ಕೈಗೊಳ್ಳುತ್ತಾರೆ. ನೀವೇನಾದರೂ ಅದೆ ಪ್ಲಾನ್​ನಲ್ಲಿದ್ದರೆ ನಿಮಗೊಂದು ಸಿಹಿಸುದ್ದಿ.
ಅಮರನಾಥ ಯಾತ್ರೆ ಕೈಗೊಳ್ಳಲು ಏಪ್ರಿಲ್​ 15ರಿಂದ ನೋಂದಣಿ ತೆರೆಯಲಾಗಿದೆ. ಒಂದೇ ಸಮಯಕ್ಕೆ ಬುಕ್ಕಿಂಗ್ ಆರಂಭವಾಗಿದ್ದು, ಯಾತ್ರಿಕರು ತಮ್ಮ ಲೈಸೆನ್ಸ್​ ಪಡೆಯಬಹದು ಎಂದು ಶ್ರೀ ಅಮರನಾಥಜಿ ಶ್ರೈನ್ ಬೋರ್ಡ್ (SASB) ತಿಳಿಸಿದೆ.

ಎಲ್ಲೆಲ್ಲಿ ರಿಜಿಸ್ಟ್ರೇಷನ್​ ಲಭ್ಯ?

ಮೊದಲು ಬಂದವರಿಗೆ ಮೊದಲ ಆದ್ಯತೆಯ ತತ್ವದ ಮೇಲೆ ನೋಂದಣಿ ಮಾಡಿಸಿಕೊಂಡವರಿಗೆ ಲೈಸೆನ್ಸ್​ ನೀಡಲಾಗುತ್ತಿದೆ. ಆ ಮೂಲಕ ಭಕ್ತಾಧಿಗಳು ಸಂಸ್ಥೆ ಸದ್ಯ ಗೊತ್ತು ಮಾಡಿರುವ 550 ನಿಯೋಜಿತ ಬ್ಯಾಂಕ್​ಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದು SASB ಅಧಿಕೃತ ಮಾಹಿತಿ ನೀಡಿದೆ.

ರಿಜಿಸ್ಟ್ರೇಶನ್​ ಹೇಗೆ?

ಯಾತ್ರಗೆ ಹೋಗಲು ಬಯಸುವ ಭಕ್ತರು ಶ್ರೀ ಅಮರನಾಥಜಿ ಶ್ರೈನ್ ಬೋರ್ಡ್​ನ ಅಧಿಕೃತ ವೆಬ್​ಸೈಟ್​ ಮೂಲಕ ಆನ್​ಲೈನ್​ನಲ್ಲೇ ನೋಂದಣಿ ಮಾಡಿಕೊಳ್ಳಬಹುದು ಅಥವಾ ಬ್ಯಾಂಕ್​ಗಳಲ್ಲಿ ಆಫ್​ಲೈನ್​ನಲ್ಲೇ ನೋಂದಣಿ ಲಭ್ಯ ಎಂದು ಹೇಳಲಾಗಿದೆ. ಆಧಾರ್​ ಆಧಾರಿತ ಬಯೋಮೆಟ್ರಿಕ್​ ದೃಢೀಕರಣ ಮಾಡಿಕೊಂಡಿದ್ದರೆ ಮಾತ್ರ ಲೈಸೆನ್ಸ್​ ನೀಡಲಾಗುವುದು ಎನ್ನಲಾಗಿದೆ.

ಯಾರ್ಯಾರು ಯಾತ್ರೆಗೆ ಅರ್ಹರು?

6 ವಾರಗಳ ಒಳಗಿನ ಗರ್ಭಿಣಿಯರು ಮಾತ್ರ ಅಮರನಾಥ ಯಾತ್ರೆ ಕೈಗೊಳ್ಳಲು ಅವಕಾಶ ಮತ್ತು ಅವರಿಗಷ್ಟೇ ಲೈಸೆನ್ಸ್​ ನೀಡಲಾಗುತ್ತದೆ. ಜೊತೆಗೆ 13ವರ್ಷ ಮೇಲ್ಪಟ್ಟವರು ರಿಂದ 70 ವರ್ಷದ ಒಳಗಿನ ವಯೋಮಿತಿ ಇರುವವರಿಗೆ ಮಾತ್ರ ಯಾತ್ರೆಗೆ ಅವಕಾಶ ಎಂದು ದೃಢಪಡಿಸಿದೆ.

ಯಾತ್ರೆ ಸಾಗೋದು ಯಾವ ದಾರಿಲಿ?

3,6880 ಮೀಟರ್ ಎತ್ತರದಲ್ಲಿ ಇರುವ ಗುಹೆ ತಲುಪಲು ಇರುವುದು ಎರಡು ಮಾರ್ಗ ಒಂದು ಪಹಲ್ಗಾಮ್​​ ದಾರಿ. ಇದು ಸುಮಾರು 32 ಕಿ.ಮೀ ಉದ್ದವಿದೆ. ಇನ್ನೊಂದು 14 ಕಿ.ಮೀನ ಬಾಲ್ಟಾಟ್​ ಮಾರ್ಗ.

ಯಾತ್ರಾರ್ಥಿಗಳು ಏನು ಮಾಡಬೇಕು?, ಮಾಡಬಾರದು?

ಅಮರನಾಥ ಯಾತ್ರೆಗೆ ಹಾಜರಾಗುವ ಯಾತ್ರಾರ್ಥುಗಳು ಜಮ್ಮು-ಕಾಶ್ಮೀರದ ನಿಯೋಜಿತ ಕೇಂದ್ರಗಳಿಂದ RFID ಪಡೆದುಕೊಳ್ಳುವುದು.
  • ಯಾತ್ರೆಗೆ ತೆರಳುವ ಸಮಯದಲ್ಲಿ ಕೊರಳಿನಲ್ಲಿ ಆ ಟ್ಯಾಗ್​ ಧರಿಸುವುದು
  • ಹಿಮಾಲಯದಲ್ಲಿ ಅತೀ ಶೀತವಲಯ ಇರುವ ಕಾರಣ ಬೆಚ್ಚಗಿನ ಬಟ್ಟೆ ಧರಿಸಬೇಕು, ಜೊತೆಯಲ್ಲಿಟ್ಟುಕೊಳ್ಳಬೇಕು
  • ರೇನ್​ ಕೋಟ್​, ಛತ್ರಿ, ಶೂ ಧರಿಸಬೇಕು.
ನಿರ್ಬಂಧ ಏನು?
  • RFID ಕಾರ್ಡ್​ ಧರಿಸದೇ ಹಾಜರಾಗುವಂತಿಲ್ಲ
  • ಮದ್ಯಪಾನ, ಧೂಮಪಾನ ನಿಷೇಧಿಸಲಾಗಿದೆ.
  • ಪ್ಲಾಸ್ಟಿಕ್​ ಬಳಕೆ ನಿಷೇಧಿಸಲಾಗಿದೆ, (ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net