ರಿಲೀಸ್​ಗೂ ಮುನ್ನವೇ ಜನನಾಯಗನ್​ಗೆ ಪೈರಸಿ ಕಾಟ; ನಟ ವಿಜಯ್​ ಪರ ನಿಂತ 'ದೇವರ'ಕೊಂಡ, ಹೇಳಿದ್ದೇನು?..Vijay Deverakonda

Jana Nayagan Movie Leak
Jana Nayagan Movie Leak
Published on

ಪ್ರಮುಖ ಮುಖ್ಯಾಂಶಗಳು

  • ಬಿಡುಗಡೆಗೂ ಮುನ್ನವೇ ಆನ್‌ಲೈನ್‌ನಲ್ಲಿ ಜನನಾಯಗನ್​​ ಸಿನಿಮಾ ಲೀಕ್​
  • ಪೈರಸಿ ಕಾಟದ ವಿರುದ್ಧ ಕಿಡಿಕಾರಿದ ಸೂರ್ಯ, ರಜನೀಕಾಂತ್​, ವಿಜಯ್​ ದೇವರಕೊಂಡ
  • ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ ಚಿತ್ರರಂಗದ ಗಣ್ಯರು.
Jana Nayagan Movie Leak: ತಮಿಳುನಾಡಿನ ರಾಜಕೀಯದಲ್ಲಿ ಅಖಾಡದಲ್ಲಿ ಹೊಸದಾಗಿ ಧೂಳೆಬ್ಬಿಸಿರುವ ನಟ ವಿಜಯ್ ಅವರಿಗೆ ಒಂದೆಡೆ ಜನನಾಯಗನ್​ ಸಿನಿಮಾ ರಿಲೀಸ್​ಗೆ ವಿಳಂಬವಾಗುತ್ತಿರುವುದು ಸಮಸ್ಯೆಯಾದರೆ, ಮತ್ತೊಂದು ಬಿಡುಗಡೆಗೂ ಮುನ್ನವೇ ಆನ್​ಲೈನ್​ನಲ್ಲಿ ಸೋರಿಕೆಯಾಗಿರುವುದು(piracy) ತಲೆಬಿಸಿಯಾಗಿದೆ. ಈ ಬಗ್ಗೆ ನಟ ವಿಜಯ್​ ದೇವರಕೊಂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವರ್ಷದ ಮೊದಲ ತಿಂಗಳು ಜನವರಿ 9ರಂದೇ ಜನನಾಯಗನ್​ ಸಿನಿಮಾ ರಿಲೀಸ್​ ಆಗಬೇಕಿತ್ತು. ಆದರೆ, ಸೆನ್ಸಾರ್​ ಮಂಡಳಿ ಪ್ರಮಾಣಿಕೃತ ಪತ್ರ ನೀಡಿರಲಿಲ್ಲ. ಹಲವು ಕಾನೂನು ತೊಡಕುಗಳನ್ನು ಚಿತ್ರತಂಡ ಎದುರಿಸಿತ್ತು. ಈ ಮಧ್ಯೆ ಪೈರಸಿ ಕಾಟದಿಂದ ಚಿತ್ರತಂಡಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಈ ಬಗ್ಗೆ ಟಾಲಿವುಡ್, ಸ್ಯಾಂಡಲ್​ವುಡ್​ನ ತಾರೆಯರು ಹಾಗೂ ಕಾಲಿವುಡ್​ನ ಹಿರಿಯ ನಟರು ಪ್ರಸ್ತಾಪಿಸಿ ಕಿಡಿಕಾರಿದ್ದಾರೆ.

ವಿಜಯ್​ ದೇವರಕೊಂಡ ಪೋಸ್ಟ್​ನಲ್ಲಿ ಏನಿದೆ?

ಜನನಾಯಗನ್​ ಸಿನಿಮಾ ರಿಲೀಸ್​ಗೂ ಮುನ್ನವೇ ಸೋರಿಕೆಯಾಗಿರುವುದು ನಿಜಕ್ಕೂ ಖಂಡನೀಯ. ಈ ವಿಚಾರ ನನ್ನಲ್ಲಿ ಕೋಪವನ್ನು ತರಿಸಿದೆ. ನನ್ನ ವೃತ್ತಿ ಜೀವನದ ಆರಂಭಿಕ ದಿನದಲ್ಲಿ ಇಂತಹ ನೋವನ್ನು ಅನುಭವಿಸಿದ್ದೆ. ಸಿನಿಮಾ ಲೀಕ್​ ಆದ್ರೆ, ಚಿತ್ರ ತಂಡದ ಶ್ರಮವೇ ವ್ಯರ್ಥವಾಗುತ್ತದೆ. ನಟ ನಿರ್ದೇಶಕರು ಹಾಗೂ ನಿರ್ಮಾಪಕರು ಸಮಯ, ಪರಿಶ್ರಮ ಹಾಳಾಗುತ್ತದೆ. ಇದು ನಿಜಕ್ಕೂ ನೋವಾಗುವ ಸಂಗತಿ ಎಂದಿದ್ದಾರೆ.
ಕೆಲವರು ಹೀಗೆ ಬೇರೆಯವರಿಗೆ ಹೇಗಾದರೂ ತೊಂದರೆಯನ್ನುಂಟು ಮಾಡಬೇಕು ಎಂದರೆ, ಹಾನಿ ಮಾಡೋಕೆ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ. ನಾನು ಇಡೀ ಜನನಾಯಗನ್​ ಸಿನಿಮಾ ಪರ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.

ರಜನಿ, ಕಮಲ್​ ಹಾಸನ್, ಸೂರ್ಯ ಕಿಡಿ

ಸಿನಿಮಾ ಲೀಕ್ ಮಾಡಿರೋದು ಅಕ್ಷಮ್ಯ ಅಪರಾಧ. ಸರ್ಕಾರ ಮತ್ತು ಚಲನ ಚಿತ್ರ ಮಂಡಳಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಜನೀಕಾಂತ್ ಮನವಿಯನ್ನಿಟ್ಟಿದ್ದಾರೆ. ಇನ್ನು ಸೂರ್ಯ ಮಾತನಾಡಿ, ಲೀಕ್ ಆದ ವಿಡಿಯೋ ನೋಡದೆ ಇಗ್ನೋರ್​​ ಮಾಡಿ, ಯಾರಿಗೆ ಯಾರು ಹಂಚಿಕೊಳ್ಳಬೇಡಿ ಎಂದಿದ್ದಾರೆ.
ಸಿನಿಮಾ ಸೋರಿಕೆ ಮಾಡಿದ ಕಿಡಿಗೇಡಿಗಳ ವಿರುದ್ಧ ನಿರ್ಮಾಣ ಸಂಸ್ಥೆ ಈಗಾಗಲೇ ಸೈಬರ್​​ ಕ್ರೈಂ ಪೊಲೀಸರಿಗೆ ದೂರು ಕೊಟ್ಟಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ, (ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net