ಬೈಕ್ ಟ್ಯಾಕ್ಸಿಗೆ ಅವಕಾಶ ಕೊಡಿ; 8 ಕೋಟಿ ಉದ್ಯೋಗ ಸೃಷ್ಟಿಯಾಗುತ್ತೆ: ರಾಜ್ಯ ಸರ್ಕಾರಗಳಿಗೆ ನಿತಿನ್​ ಗಡ್ಕರಿ ಮನವಿ! Nitin Gadkari

ರಾಜ್ಯ ಸರ್ಕಾರಗಳಿಗೆ ಬೈಕ್ ಟ್ಯಾಕ್ಸಿಗೆ ಅವಕಾಶ ನೀಡುವಂತೆ ಮನವಿ ಮಾಡಿದ ನಿತಿನ್ ಗಡ್ಕರಿ
ರಾಜ್ಯ ಸರ್ಕಾರಗಳಿಗೆ ಬೈಕ್ ಟ್ಯಾಕ್ಸಿಗೆ ಅವಕಾಶ ನೀಡುವಂತೆ ಮನವಿ ಮಾಡಿದ ನಿತಿನ್ ಗಡ್ಕರಿ
Published on
ನವದೆಹಲಿ: ಖಾಸಗಿ ದ್ವಿಚಕ್ರ ಸವಾರರಿಗೆ ಬೈಕ್​ ಟ್ಯಾಕ್ಸಿ ನಡೆಸಲು ಅವಕಾಶ ನೀಡುವಂತೆ ಭಾರತದಲ್ಲಿರುವ ಎಲ್ಲಾ ರಾಜ್ಯ ಸರ್ಕಾರಗಳಿಕೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್​ ಗಡ್ಕರಿ (Nitin Gadkari) ಮನವಿ ಮಾಡಿದ್ದಾರೆ.
ಸಾರಿಗೆ ಎನ್ನುವುದು ಇದು ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ, ಕೆಲವು ರಾಜ್ಯಗಳಲ್ಲಿ ಈ ಬೈಕ್​ ಟ್ಯಾಕ್ಸಿ ನೀತಿಗೆ ಕಡಿವಾಣ ಹಾಕಲಾಗುತ್ತಿದೆ. ಆದರೆ ಇದರಿಂದ ಗ್ರಾಮೀಣ ಭಾಗದ ಹಾಗೂ ಮಧ್ಯಮ ವರ್ಗದ ಜನರಿಗೆ ಹಣಗಳಿಸಲು ಮಾರ್ಗ ಹಾಗೂ ಉದ್ಯೋಗವನ್ನು ಸೃಷ್ಟಿಸುವ ಕಾರಣ ಇದಕ್ಕೆ ಅವಕಾಶ ನೀಡುವುದು ಒಳ್ಳೆಯದೆಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಂಟು ಕೋಟಿ ಉದ್ಯೋಗ ಸೃಷ್ಟಿಯಾಗುತ್ತೆ!

ಬೈಕ್​ ಟ್ಯಾಕ್ಸಿಗೆ ಅವಕಾಶ ನೀಡಿದರೆ, ಬಡವರು, ಮಧ್ಯಮ ವರ್ಗದವರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಪಾದನೆ ಮಾಡಲು ಸಾಧ್ಯವಾಗುತ್ತದೆ. ಈ ನೀತಿ ಅನುಷ್ಟಾನಗೊಂಡರೆ ಸರಿಸುಮಾರು ಎಂಟು ಕೋಟಿ ಜನರಿಗೆ ಉದ್ಯೋಗ ದೊರೆಯುತ್ತದೆ.
ಆದರೆ, ಕೇವಲ ಕೇಂದ್ರ ಸಚಿವರ ಅಭಿಪ್ರಾಯ ಅಥವಾ ಹೇಳಿಕೆ ಅಧರಿಸಿ ಇದನ್ನು ಜಾರಿಗೆ ತರಲು ಹೋಗಬೇಡಿ. ಆಯಾ ರಾಜ್ಯಗಳ ವಾಹನ ಪರವಾನಗಿ, ವಿಮೆ ಹಾಗೂ ಇತರೆ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ಜಾರಿಗೆ ತಂದರೆ ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದಿದ್ದಾರೆ.

ಕಠಿಣ ಟ್ರಾಫಿಕ್​ ನಿಯಮ ಜಾರಿಯಾಗಲಿದೆ!

ಇದೇ ಸಮಯದಲ್ಲಿ ದೇಶದಲ್ಲಿ ವಾಹನ ಸವಾರರು ಅಧಿಕವಾಗಿ ಟ್ರಾಫಿಕ್ ನಿಯಮಗಳನ್ನು ಮುರಿಯುತ್ತಿರುವುದು ಗಮನಕ್ಕೆ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕಠಿಣ ಟ್ರಾಫಿಕ್​ ನಿಯಮಗಳನ್ನು ಒಳಗೊಂಡಿರುವ ಮಸೂದೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಲಿದೆ.
ಈ ಮಸೂದೆ ಜಾರಿಯಾದ ನಂತರ, ಟ್ರಾಫಿಕ್​ ನಿಯಮಗಳನ್ನು ಮುರಿಯುವವರಿಗೆ ಭಾರಿ ಮೊತ್ತದ ದಂಡ, ಲೈಸೆನ್ಸ್​​ ರದ್ದತಿ ಹಾಗೂ ವಾಹನ ಜಫ್ತಿಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ನಿತಿನ್​ ಗಡ್ಕರಿ ತಿಳಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net